ತುಮಕೂರು-ಶಿರಾ-ನಗರದ-ಕಲ್ಲು-ಕೋಟೆಯ-ಸ್ಲಂ-ಬೋರ್ಡ್-ಹಾಗೂ-ಆಶ್ರಯ-ಬಡಾವಣೆಗೆ-ಡಿಸಿ-ಭೇಟಿ

ತುಮಕೂರು:  ಜಿಲ್ಲೆಯ ಶಿರಾ ನಗರದ ಕಲ್ಲುಕೋಟೆಯ ಸ್ಲಂ ಬೋರ್ಡ್ ಹಾಗೂ ಆಶ್ರಯ ಬಡಾವಣೆಗೆ ಜಿಲ್ಲಾಧಿಕಾರಿ ಶುಭಕಲ್ಯಾಣ್  ಅವರು ಗುರುವಾರ ಸಂಜೆ ಭೇಟಿ ನೀಡಿ ಪರಿಶೀಲಿಸಿದರು.  

ನಂತರ ಮಾತನಾಡಿದ ಅವರು, ಹೌಸಿಂಗ್ ಫಾರ್ ಆಲ್ ಯೋಜನೆಯಡಿ ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿಯಿಂದ ಸರ್ವೆ ನಂಬರ್ 103/2Pಯ 8 ಎಕರೆ ಜಾಗದಲ್ಲಿ G2 ಮಾದರಿಯ 1008  ಕಟ್ಟಡಗಳನ್ನು ನಿರ್ಮಿಸಲಾಗುತ್ತಿದ್ದು, ಈ ಪೈಕಿ 252 ಕಟ್ಟಡಗಳ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ ಎಂದು ತಿಳಿಸಿದರು.

     ಆಶ್ರಯ ಬಡಾವಣೆಯಲ್ಲಿ ಸುಮಾರು 4000  ನಿವೇಶನಗಳ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದ್ದು, ಶಿರಾ ನಗರದ ಕಲ್ಲುಕೋಟೆಯ   ಸರ್ವೆ ನಂಬರ್ 100 ರ 20 ಎಕರೆ ಜಾಗದಲ್ಲಿ ನಿವೇಶನಗಳ  ಅಭಿವೃದ್ಧಿ  ಕಾಮಗಾರಿ ಕೈಗೊಳ್ಳಲಾಗಿದೆ ಎಂದು ತಿಳಿಸಿದರಲ್ಲದೆ,  ಶಿರಾ ತಾಲೂಕಿನ ಎಮ್ಮೇರಹಳ್ಳಿಯಲ್ಲಿ 90ಎಕರೆ ಜಾಗದಲ್ಲಿ ನಿವೇಶನಗಳನ್ನು ಅಭಿವೃದ್ಧಿ ಮಾಡಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಿರಾ ತಾಲೂಕಿನ ತಹಶೀಲ್ದಾರ್ ರೇಷ್ಮ ಹಾಗೂ ನಗರ ಸಭೆ ಆಯುಕ್ತ ರುದ್ರೇಶ್,  ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸಿ. ಯೋಗಾನಂದ  ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪ್ಥಿತರಿದ್ದರು.


Leave a Reply

Your email address will not be published. Required fields are marked *

× How can I help you?