ಕೆ.ಆರ್.ಪೇಟೆ:ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ಸದ್ರಡವಾಗಿದೆ-ವದಂತಿಗಳಿಗೆ ಕಿವಿಗೊಡಬೇಡಿ-ಡಾಲು ರವಿ ಹಾಲು ಉತ್ಪಾದಕರಲ್ಲಿ ಮನವಿ

ಕೆ.ಆರ್.ಪೇಟೆ;ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ಹಾಲು ಉತ್ಪಾದಕರ ಶ್ರೇಯೋಭಿವೃದ್ಧಿಗೆ ಹಗಲು -ಇರುಳು ಶ್ರಮಿಸುತ್ತಿದೆ ಉತ್ಪಾದಕರು ಯಾವುದೇ ವದಂತಿಗಳಿಗೆ ಕಿವಿ ಕೊಡದೆ ಗುಣಮಟ್ಟದ ಹಾಲನ್ನು ಡೇರಿಗೆ ಹಾಕುವ ಮೂಲಕ ಮನ್ಮುಲ್ ನ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು ಎಂದು ಡಾಲು ರವಿ ರೈತರಲ್ಲಿ ಮನವಿ ಮಾಡಿಕೊಂಡರು.

ಬೂಕನಕೆರೆ ಹೋಬಳಿಯ ಮೋದೂರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ 2023-24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮದ ಹಾಲು ಉತ್ಪಾದಕರು ಗುಣಮಟ್ಟದ ಹಾಲನ್ನು ಹಾಕಿದರೆ ಮಾತ್ರ ಸಂಘ ಮತ್ತು ಉತ್ಪಾದಕರ ಆದಾಯ ಹೆಚ್ಚುವುದರ ಜೊತೆಗೆ ಸಂಘ ಸದೃಢವಾಗಲು ಸಾಧ್ಯ.ಗುಣಮಟ್ಟದ ಹಾಲನ್ನು ಹಾಕುವುದಕ್ಕೆ ರಾಸುಗಳ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯವಾಗಿರುತ್ತದೆ.ತಾಲೂಕಿನಲ್ಲಿ ಅತಿ ಹೆಚ್ಚು ರೈತರು ಹೈನುಗಾರಿಕೆಯಲ್ಲಿ ತೊಡಗಿಕೊಂಡಿರುವುದರಿಂದ ನಮ್ಮ ತಾಲೂಕು ಜಿಲ್ಲೆಯಲ್ಲಿ ಪ್ರಥಮ ಸ್ಥಾನದಲ್ಲಿ ಇದೆ.ಅದರಂತೆ ನಾವು ಹಾಲಿನ ಗುಣಮಟ್ಟವನ್ನು ಕಾಪಾಡಿಕೊಂಡರೆ ಸಂಘಗಳಿಗೆ ತಾಲೂಕಿಗೆ ಒಳ್ಳೆಯ ಹೆಸರು ಮತ್ತು ಕೀರ್ತಿ ತರುವುದಕ್ಕೆ ಸಹಕಾರಿಯಾಗುತ್ತದೆ ಎಂದರು.

ಸಭೆ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಗೋವಿಂದರಾಜು.ಆರ್ ವಹಿಸಿದರು.

ಕಾರ್ಯಕ್ರಮದಲ್ಲಿ ಉಪ ವ್ಯವಸ್ಥಾಪಕ ಪ್ರಸಾದ್,ಮಾರ್ಗವಿಸ್ತರಣಾಧಿಕಾರಿನಾಗಪ್ಪ ಅಲ್ಲಿಬಾದಿ,ಮೋದೂರು ಸಂಘದ ಅಧ್ಯಕ್ಷ ಗೋವಿಂದರಾಜು,ಉಪಾಧ್ಯಕ್ಷ ಈರಪ್ಪ, ನಿರ್ದೇಶಕರಾದ ಬಸವರಾಜಪ್ಪ, ನಾಗೇಶ್, ನಾಗರಾಜು, ಎಂ. ಆರ್ ಕುಮಾರ್, ಬೋಮ್ಮೆಗೌಡ, ಸಿ.ಎಂ ನಾಗಮ್ಮ, ಸರೋಜಮ್ಮ, ಮಮತ, ಗ್ರಾ.ಪಂ ಸದಸ್ಯರಾದ ಜ್ಯೋತಿ ಮಂಜು, ಮಂಜುಳ ಶಂಕರ್,ಸಂಘದ ಕಾರ್ಯದರ್ಶಿ ಶಿವಕುಮಾರ್, ಸಹಾಯಕ ಪ್ರಜ್ವಲ್, ಸಹಾಯಕ ಯೋಗಾನಂದಶ, ಸೇರಿದಂತೆ ಉಪಸ್ಥಿತರಿದ್ದರು.

—————-– ಮನು ಮಾಕವಳ್ಳಿ ಕೆ ಆರ್ ಪೇಟೆ

Leave a Reply

Your email address will not be published. Required fields are marked *

× How can I help you?