ಚಿಕ್ಕಮಗಳೂರು-ಸಖರಾಯಪಟ್ಟಣ-ನಿವಾಸಿಗಳಿಗೆ-ರಂಜಾನ್-ಕಿಟ್- ವಿತರಣೆ

ಚಿಕ್ಕಮಗಳೂರು:- ಪವಿತ್ರ ರಂಜಾನ್ ಹಬ್ಬದಲ್ಲಿ ಉಳ್ಳವರು ದುಡಿಮೆಯ ಒಂದಿಷ್ಟು ಹಣವನ್ನು ಸಮುದಾಯ ಹಾಗೂ ಸಮಾಜದ ಏಳಿಗೆಗೆ ವ್ಯಯಿಸಿದರೆ ಅಲ್ಲಾನ ಕೃಪೆಗೆ ಪಾತ್ರರಾಗಬಹುದು ಎಂದು ಕಾಂಗ್ರೆಸ್ ಕಿಸಾನ್‌ಸೆಲ್ ರಾಜ್ಯ ಸಂಚಾಲಕ ಸಿ.ಎನ್.ಅಕ್ಮಲ್ ಹೇಳಿದರು.

ತಾಲ್ಲೂಕಿನ ಸಖರಾಯಪಟ್ಟಣ ಗ್ರಾಮದ ತಾಜ್‌ರಾನ್ ಮಸೀದಿ ಸಮೀಪ ರಂಜಾನ್ ಹಬ್ಬದ ಪ್ರಯುಕ್ತ ನಿವಾಸಿಗಳಿಗೆ ಆಹಾರ ಕಿಟ್‌ನ್ನು ಗುರುವಾರ ವಿತರಿಸಿ ಅವರು ಮಾತನಾಡಿ, ಬದುಕಿನ ಜಂಜಾಟದಲ್ಲಿ ಸಾಮಾನ್ಯರಂತೆ ಜೀವನ ಕಳೆಯಬಾರದು. ಕೈಲಾದ ಮಟ್ಟಿಗೆ ಹಬ್ಬ-ಹರಿದಿನ ಗಳಲ್ಲಿ ಸಮಾಜಕ್ಕೆ ಕೊಡುಗೆ ನೀಡಿದರೆ, ಸಾವಿನ ಬಳಿಕವು ಜನಸಾಮಾನ್ಯರು ನೆನಪಿಸುವ ಕಾರ್ಯ ಮಾಡಲಿದ್ದಾರೆ. ಆ ನಿಟ್ಟಿನಲ್ಲಿ ಮುಸ್ಲೀಂರ ಪವಿತ್ರ ಹಬ್ಬದಂದು ಎಲ್ಲಾ ಬಡವರ್ಗದವರಿಗೆ ಕಿಟ್ ವಿತರಿಸಿ ಸಂತೋಷ ದಿಂದ ಹಬ್ಬ ಆಚರಿಸಲು ಮುಂದಾಗುತ್ತಿದ್ಧೇವೆ ಎಂದರು.

ಪ್ರವಾದಿ ಮಹಮ್ಮದ್ ಪೈಗಂಬರ್ ಸದ್ಗುಣದ ಸಂದೇಶಗಳನ್ನು ಸಮಾಜವು ಪಾಲಿಸಬೇಕು. ಬಡವರು, ಅಸಹಾಯಕರಿಗೆ ಸಹಾಯಹಸ್ತ ಚಾಚಬೇಕೆಂಬ ಸಂದೇಶವನ್ನು ನೀಡಿದ ಮಹಾತ್ಮರು. ಹೀಗಾಗಿ ಪ್ರತಿಯೊಬ್ಬ ರು ಪೈಗಂಬರ್ ಚಿಂತನೆಗಳನ್ನು ಮೈಗೂಡಿಸಿಕೊಂಡರೆ ಯಶಸ್ವಿ ಜೀವನ ಸಾಧ್ಯ ಎಂದು ತಿಳಿಸಿದರು.

ಸಮಾಜದ ಪ್ರತಿಯೊಬ್ಬರು ಸಾಮಾಜಿಕ, ಆರ್ಥಿಕವಾಗಿ ತಮ್ಮನ್ನು ತೊಡಗಿಸಿಕೊಂಡಲ್ಲಿ ಬಡತನಮುಕ್ತ ಸಮಾಜ ನಿರ್ಮಿಸಬಹುದು. ಹೀಗಾಗಿ ಭಗವಂತನು ಕರುಣಿಸಿದ ದುಡಿಮೆಯಲ್ಲಿ ಶೇ.3 ರಷ್ಟು ದಾನದ ರೂಪದಲ್ಲಿ ಕೊಡುಗೆ ನೀಡುವ ಗುಣ ಬೆಳೆಸಿಕೊಳ್ಳಬೇಕು. ಅಲ್ಲದೇ ಇತರರಿಗೂ ಪ್ರೇರೇಪಿಸುವಂಥ ಕಾರ್ಯ ಮಾಡಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಖರಾಯಪಟ್ಟಣ ನಿವಾಸಿಗಳಾದ ಬಷೀರ್, ರಶೀದ್, ಅಸ್ಲಾಂ, ಅಬ್ದುಲ್ ವಾ ಹೀದ್, ಅಜೀಮ್ ಮತ್ತಿತರರಿದ್ದರು.

  • ಸುರೇಶ್‌ ಎನ್.‌

Leave a Reply

Your email address will not be published. Required fields are marked *

× How can I help you?