ತುಮಕೂರು-ಮುಸ್ಲಿಮರ-ಹಕ್ಕುಗಳ-ಕಸಿದುಕೊಳ್ಳಬೇಡಿ-ತಾಜುದ್ದೀನ್ ಶರೀಫ್

ತುಮಕೂರು: ಸಂಸತ್‌‌ನಲ್ಲಿ ವಕ್ಫ್ ತಿದ್ದುಪಡಿ 2024 ಮಸೂದೆಯನ್ನು ಮಂಡಿಸಲಾಗಿದ್ದು, ಈ ಮಸೂದೆ ಸಂವಿಧಾನ ವಿರೋಧಿಯಾಗಿದೆ. ಸಮುದಾಯದ ಹಕ್ಕುಗಳಿಗೆ ಧಕ್ಕೆ ತರುವಂತಿದೆ ಎಂದು ವೆಲ್ಫೇರ್ ಪರ‍್ಟಿ ಆಫ್ ಇಂಡಿಯಾ ಜಿಲ್ಲಾಧ್ಯಕ್ಷ ತಾಜುದ್ದೀನ್ ಷರೀಫ್ ಆರೋಪಿಸಿದ್ದಾರೆ.

ವಕ್ಫ್ ತಿದ್ದುಪಡಿ ಮಸೂದೆ ಭಾರತದ ಸಂವಿಧಾನದ ಮೇಲಿನ ದಾಳಿಯಾಗಿದೆ. ಅವಮಾನಿಸಲು, ಅವರ ಹಕ್ಕುಗಳನ್ನು ಕಿತ್ತುಕೊಳ್ಳುವುದು ಕೇಂದ್ರ ರ‍್ಕಾರದ ಹುನ್ನಾರವಾಗಿದೆ. ಭಾರತೀಯ ಸಮಾಜವನ್ನು ವಿಭಜಿಸುವ ಗುರಿ ಹೊಂದಿದ್ದರಿಂದ 2024ರ ವಕ್ಫ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿಗಳು ಅಂಕಿತ ಹಾಕದೆ ರದ್ದುಗೊಳಿಸುವಂತೆ ಒತ್ತಾಯಿಸಿದರು.

ಇಸ್ಲಾಂ ಕಾನೂನಿನ್ವಯ ವಕ್ಫ್ ಎಂದರೆ ಧರ‍್ಮಿಕ ಮತ್ತು ದತ್ತಿ ಉದ್ದೇಶಗಳಿಗಾಗಿ ದೇವರ ಹೆಸರಿನಲ್ಲಿ ರ‍್ಪಿಸಲಾದ ಆಸ್ತಿಯಾಗಿದೆ. ವಕ್ಫ್ ಆದಾಯವನ್ನು ಮಸೀದಿಗಳ ನರ‍್ವಹಣೆ, ಸಮುದಾಯದ ಬಡ ಜನರ ಅಭಿವೃದ್ಧಿಗೆ ಬಳಸಲಾಗುತ್ತದೆ ಎಂದು ಹೇಳಿದ್ದರು. ಮುಸ್ಲಿಂ ಮಹಿಳೆಯರ ಮತ್ತು ಬಡ ಮುಸಲ್ಮಾನರಿಗಾಗಿ ಈ ತಿದ್ದುಪಡಿ ಎನ್ನುವರ ಪರ‍್ಟಿಯಲ್ಲಿ ಒಂದು ಮಹಿಳೆ ಸಂಸದೆ ಇಲ್ಲ ಬಡ ಮುಸಲ್ಮಾನರಿಗೆ ಜಾತ್ರೆ, ದೇವಸ್ಥಾನ, ಅಂಗಡಿ ಮುಗ್ಗಟ್ಟುಗಳಲ್ಲಿ ವ್ಯಾಪಾರ ವಹಿವಾಟು ನಡೆಸಲು ವಿರೋಧಿಸುವವರು ಅಲ್ಪಸಂಖ್ಯಾತರ ಹಕ್ಕುಗಳ ಬಗ್ಗೆ ಮಾತನಾಡುತ್ತಿರುವುದು ಯಾವ ಹುನ್ನಾರ ಎಂದು ತಿಳಿಯಬೇಕು.

ಅಲ್ಪಸಂಖ್ಯಾತರ ಹಕ್ಕುಗಳನ್ನು ಹತ್ತಿಕ್ಕುವ ಪ್ರಧಾನಿ ನರೇಂದ್ರ ಮೋದಿ ಅವರ ಕರ‍್ಯಸೂಚಿ ಭಾಗವಾಗಿದೆ. ದೇಶದ ಸುಮಾರು ೨೦ ಕೋಟಿ ಮುಸ್ಲಿಮರು ವಕ್ಫ್ ತಿದ್ದುಪಡಿ ವಿಧೇಯಕ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವಾಗ ಅವರ ಅಹವಾಲು ಆಲಿಸದೆ ವಿಧೇಯಕವನ್ನು ಲೋಕಸಭೆಯಲ್ಲಿ ಮಂಡಿಸಿರುವುದು ಪ್ರಜಾಪ್ರಭುತ್ವಕ್ಕೆ ಎಸಗಿದ ದ್ರೋಹವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

– ಚಂದ್ರಚೂಡ್‌ ಕೆ.ಬಿ

Leave a Reply

Your email address will not be published. Required fields are marked *

× How can I help you?