ತುಮಕೂರು: ಸಂವಿಧಾನ ಶಿಲ್ಪಿ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ 134ನೇ ಜಯಂತಿಯ ಪ್ರಯುಕ್ತ ಕರ್ನಾಟಕ ಸರ್ವ ಜನಾಂಗ ಸಂರಕ್ಷಣಾ ವೇದಿಕೆ ವತಿಯಿಂದ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ತುಮಕೂರು ನಗರದ ಕರ್ನಾಟಕ ಸರ್ವ ಜನಾಂಗ ಸಂರಕ್ಷಣಾ ವೇದಿಕೆ ವತಿಯಿಂದ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ 134ನೇ ಜನ್ಮದಿನಾಚರಣೆಯನ್ನು ಪುಷ್ಪ ನಮನ ಸಲ್ಲಿಸುವ ಮೂಲಕ ಆಚರಿಸಲಾಯಿತು.
ವೇದಿಕೆಯ ಜಿಲ್ಲಾಧ್ಯಕ್ಷ ಅಸ್ಲಾಂ ಪಾಷ ಮಾತನಾಡಿ, ಡಾ.ಬಿ. ಆರ್. ಅಂಬೇಡ್ಕರ್ ಅವರು ನಮಗೆ ನೀಡಿರುವ ಸಂವಿಧಾನವು ಬಹಳ ದೊಡ್ಡದು, ಡಾ.ಬಿ.ಆರ್. ಅಂಬೇಡ್ಕರ್ ಅವರು ತೋರಿದ ದಾರಿಯಲ್ಲಿ ಯುವ ಪೀಳಿಗೆ ನಡೆಯಬೇಕು ಅವರ ಆದರ್ಶ ಮೈಗೂಡಿಸಿಕೊಳ್ಳಬೇಕು ಅಂಬೇಡ್ಕರ್ ರವರು ಒಂದು ಸಮುದಾಯದ ನಾಯಕರಲ್ಲಾ ಎಲ್ಲಾ ಸಮುದಾಯಕ್ಕೂ ನಾಯಕರು ಅವರು ತೋರಿದ ಮಾರ್ಗದಲ್ಲಿ ನಮ್ಮ ಕರ್ನಾಟಕ ಸರ್ವ ಜನಾಂಗ ಸಂರಕ್ಷಣಾ ವೇದಿಕೆ ಸಹ ಬದ್ಧವಾಗಿದೆ ಯಾವುದೇ ಜಾತಿ ಭೇದವಿಲ್ಲದೆ ಎಲ್ಲರೂ ಸಹ ಅಣ್ಣ ತಮ್ಮಂದಿರ ರೀತಿಯಲ್ಲಿ ಬಾಳ್ವೆ ನಡೆಸುತ್ತಿದ್ದು ಯಾವುದೇ ಸಾಮಾನ್ಯ ವ್ಯಕ್ತಿಗೆ ತೊಂದರೆಯಾದಾಗ ನಮ್ಮ ಸಂಘಟನೆಯು ಮುಂದೆ ನಿಂತು ನ್ಯಾಯ ಒದಗಿಸುವ ಕೆಲಸ ಮಾಡುತ್ತಾ ಬಂದಿದೆ ಎಂದರು.
ಇದೇ ಸಂದರ್ಭದಲ್ಲಿ ಸಂಘದ ಸದಸ್ಯತ್ವವನ್ನು ಪಡೆದು ಸಂಘಕ್ಕೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ದರ್ಶನ್ ಜಿ., ಗುಬ್ಪಿ ತಾಲ್ಲೂಕು ಅಧ್ಯಕ್ಷ ನಾಗರಾಜು, ಸಿರಾ ತಾಲ್ಲೂಕು ಇಬ್ರಾಹಿಂ, ಮಧುಗಿರಿ ತಾಲ್ಲೂಕು ಅಧ್ಯಕ್ಷ ನವೀನ್‌ಕುಮಾರ್, ತಾಲ್ಲೂಕು ಉಪಾಧ್ಯಕ್ಷ ಮನೋಜ್‌ಕುಮಾರ್, ಗ್ರಾಮಾಂತರ ಉಪಾಧ್ಯಕ್ಷ ತಮ್ಮಯ್ಯ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಜೋಹರ್ ಪಾಷ, ಸಿರಾ ಅಲ್ಪಸಂಖ್ಯಾತರ ಉಪಾಧ್ಯಕ್ಷ ಅಲ್ಲಾಭಕಾಶ್, ತುಮಕೂರು ಗ್ರಾಮಾಂತರ ಯುವ ಕಾರ್ಯದರ್ಶಿ ಭರತ್‌ಕುಮಾರ್, ಬೆಳ್ಳಾವಿ ಹೋಬಳಿ ಉಪಾಧ್ಯಕ್ಷ ಮನು ಮತ್ತಿತರರು ಉಪಸ್ಥಿತರಿದ್ದರು.