ಬೇಲೂರು;-ಮಹಾಭಾರತ ಯುದ್ದದ ಸಂದರ್ಭದಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಭೋದಿಸಿದ ಭಗವದ್ಗೀತೆಯ ಸಂದೇಶಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಯಶಸ್ಸು ಪಡೆಯಬೇಕು ಎಂದು ಬೇಲೂರು ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ಚಂದ್ರಮೌಳಿ ಕರೆ ನೀಡಿದರು.
ಪಟ್ಟಣದ ಪೂರ್ಣಪ್ರಜ್ಞಾ ಶಿಕ್ಷಣ ಸಂಸ್ಥೆ(ರೋಟರಿ ಸ್ಕೂಲ್) ಸಭಾಂಗಣದಲ್ಲಿ ಶ್ರೀಕೃಷ್ಣ ಜಯಂತಿ ಮತ್ತು ಶಿಕ್ಷಕರ ದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಶ್ರೀಕೃಷ್ಣ ಮತ್ತು ರಾಧೆ ವೇಷಭೂಷಣ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಕೃಷ್ಣನ ಚಿಕ್ಕವಯಸ್ಸಿನಲ್ಲಿನ ತುಂಟಾಟ ಮತ್ತು ಆತನ ಲೀಲೆಗಳ ಕಥೆಗಳು ಸಂದೇಶವನ್ನು ನೀಡುತ್ತಾ ಬಂದಿದೆ.ನಮ್ಮ ಬದುಕು ಒಂದು ಹೋರಾಟ,ಈ ಹೋರಾಟದಲ್ಲಿ ಪ್ರಾಮಾಣಿಕ ಕಾರ್ಯಗಳನ್ನು ಮಾಡಬೇಕು, ಪ್ರತಿಫಲಗಳನ್ನು ದೇವರು ನೀಡುತ್ತಾನೆ ಎಂಬ ಮಾತುಗಳು ಇಂದಿಗೂ ಪ್ರಸ್ತುತವಾಗಿದೆ.ಈ ನಿಟ್ಟಿನಲ್ಲಿ ಪ್ರತಿ ಶಾಲೆಗಳಲ್ಲಿ ಜಾತಿ,ಧರ್ಮ ಭೇದವಿಲ್ಲದೆ ಶ್ರೀಕೃಷ್ಣನ ಜನ್ಮಾಷ್ಟಾಮಿಯನ್ನು ಆಚರಿಸುತ್ತಾ ಬಂದಿದ್ದಾರೆ.ಬೇಲೂರು ರೋಟರಿ ಸ್ಕೂಲ್ ಮಾತ್ರ ವಿಭಿನ್ನ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಆರ್ಥಪೂರ್ಣತೆಗೆ ಮುನ್ನುಡಿ ಬರೆದಿದ್ದಾರೆ.ಇದಕ್ಕೆ ಕಾರಣ ಇಲ್ಲಿನ ಪ್ರಾಂಶುಪಾಲರು ಮತ್ತು ಶಿಕ್ಷಕರ ಕಾರ್ಯಕ್ಷಮತೆ.ಇದನ್ನು ಮನಗಂಡು ಬೇಲೂರು ಲಯನ್ಸ್ ನ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಬಹುಮಾನ ವಿತರಣೆ ಕಾರ್ಯ ನಡೆಸಿದ್ದಾರೆ ಎಂದರು.
ಪೂರ್ಣಪ್ರಜ್ಞಾ ಶಿಕ್ಷಣ ಸಂಸ್ಥೆಯ ಪ್ರೌಢ ಶಾಲಾ ವಿಭಾಗದ ಪ್ರಾಂಶುಪಾಲ ಪ್ರಶಾಂತ್ ಕುಮಾರ್ ಮಾತನಾಡಿ, ನಮ್ಮ ಶಾಲೆಯಲ್ಲಿ ಈ ಭಾರಿ ಹೊಸತನದಿಂದ ಕಾರ್ಯಕ್ರಮ ನಡೆಸಬೇಕು ಎಂಬ ಹಿನ್ನಲೆಯಲ್ಲಿ ಶ್ರೀಕೃಷ್ಣ ಜಯಂತಿ ಹಾಗೂ ಶಿಕ್ಷಕರ ದಿನದ ಅಂಗವಾಗಿ ಪುಟಾಣಿ ಮಕ್ಕಳಿಂದ ಶ್ರೀಕೃಷ್ಣ ಮತ್ತು ರಾದೆಯರ ವೇಷಭೂಷಣ ಸ್ಪರ್ಧೇಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗಿದೆ.ಸಣ್ಣ ವಯಸ್ಸಿನಲ್ಲಿಯೇ ಮಕ್ಕಳಿಗೆ ಕೃಷ್ಣನ ವೇಷ ಜೊತೆಗೆ ಆತನು ಬದುಕಿಗೆ ನೀಡಿವ ಸಂದೇಶವನ್ನು ತಿಳಿಸುವ ಕಾರ್ಯಕ್ಕೆ ಶಿಕ್ಷಣ ಸಂಸ್ಥೆ ಮುಂದಾಗಿದೆ. ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಬೇಲೂರು ಲಯನ್ಸ್ ಕ್ಲಬ್ ಬಹುಮಾನ ಮತ್ತು ಪ್ರಮಾಣ ಪತ್ರವನ್ನು ನೀಡಿದ ಬಗ್ಗೆ ಹರ್ಷ ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ಬೇಲೂರು ಲಯನ್ಸ್ ಭವನ ಟ್ರಸ್ಟ್ ಅಧ್ಯಕ್ಷ ದೊಡ್ಡಮನೆ ಪ್ರಭಾಕರ್, ಕಾರ್ಯದರ್ಶಿ ಮುಕ್ತಿಯಾರ್ ಅಹಮದ್, ಖಜಾಂಚಿ ಪ್ರಶಾಂತ್ ಶೇಟ್ಟಿ, ಮಾಜಿ ಅಧ್ಯಕ್ಷರಾದ ಎಂ.ಪಿ.ಪೂವಯ್ಯ, ಮಂಜುನಾಥ್, ಅಬ್ದುಲ್ ಲತೀಫ್, ವೈ.ಬಿ.ಸುರೇಶ್,ಹೇಮಾಂತ್, ಪದಾಧಿಕಾರಿಗಳಾದ ಹೆಬ್ಬಾಳು ಹಾಲಪ್ಪ, ಆರ್ಜನ್, ಆದರ್ಶ, ಸ್ವರ್ಣಶ್ರೀನಿವಾಸ್, ಪ್ರಿತು ಚಂದ್ರಮೌಳಿ, ಅಶ್ವಥ್, ರಚಿತಾಪ್ರದೀಪ್,ಶಿಕ್ಷಣಸಂಸ್ಥೆ ಜಂಟಿ ಕಾರ್ಯದರ್ಶಿ ಅನಂತಸ್ವಾಮಿ, ಪ್ರಾಥಮಿಕ ಶಾಲಾ ಪ್ರಾಂಶುಪಾಲರಾದ ಸುನೀತಾ ಕುಮಾರಿ ಸೇರಿದಂತೆ ಇನ್ನು ಮುಂತಾದವರು ಹಾಜರಿದ್ದರು.
——–ದಿನೇಶ್ ಬೆಳ್ಳಾವರ