ತುಮಕೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ವತಿಯಿಂದ ಶ್ರೀ ವೀರೇಂದ್ರಹೆಗ್ಗಡೆರವರು ಗುಳೂರು ಹೋಬಳಿಯ ಹರಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಭೈರಸಂದ್ರ ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಕ್ಕೆ ಮಂಜೂರಾದ ಒಂದು ಲಕ್ಷ ರೂ. ದೇಣಿಗೆಯನ್ನು, ಜಿಲ್ಲಾ ನಿರ್ದೇಶಕ ಸತೀಶ್ ಸುವರ್ಣ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿ ಡೈರಿಯ ಅಧ್ಯಕ್ಷರಿಗೆ ವಿತರಣೆ ಮಾಡಿದರು.
ಹರಳೂರು ಗ್ರಾಮ ಪಂಚಾಯಿತಿಯ ಸದಸ್ಯರು ಹಾಗೂ ಡೈರಿಯ ಅಧ್ಯಕ್ಷೆ, ವಿಜಯಕುಮಾರಿಪಾಲನೇತ್ರಯ್ಯನವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಪೂಜ್ಯ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಅಶಕ್ತರಿಗೆ ದುರ್ಬಲ ವರ್ಗಗಳಿಗೆ ಸಮಾಜದ ಕಟ್ಟಡ ಕಡೆಯ ವ್ಯಕ್ತಿಗಳಿಗೆ ಹಾಗೂ ಒಂದು ಗ್ರಾಮದ ಸರ್ವಾಂಗಿಯಣ ಅಭಿವೃದ್ಧಿಗಾಗಿ ಏನೆಲ್ಲ ಸಾಮಾಜಿಕ ಕಾರ್ಯಕ್ರಮಗಳನ್ನು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದು, ಆ ಎಲ್ಲಾ ಕಾರ್ಯಕ್ರಮಗಳನ್ನು ಸಂಸ್ಥೆಯ ಮೂಲಕ ನಡೆಸುತ್ತಿದ್ದಾರೆ. ಈ ಸಂಸ್ಥೆ ಇನ್ನಷ್ಟು ಬಲವರ್ಧನೆಗೊಂಡು ಸಮಾಜ ಸೇವೆಯನ್ನು ನಿತ್ಯ ನಿರಂತರ ಮುಂದುವರಿಸಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ತಾಲೂಕಿನ ಮಾನ್ಯ ಯೋಜನಾಧಿಕಾರಿಗಳಾದ ಪ್ರಭಾಕರ್ ರಾಮ್ ನಾಯಕ್,ಡೈರಿಯ ಕಾರ್ಯದರ್ಶಿಯಾದ ಸುಧಾ, ವಲಯದ ಮೇಲ್ವಿಚಾರಕ ಮಹಾಂತೇಶ್ , ಡೈರಿಯ ಉಪಾಧ್ಯಕ್ಷರು,ಸದಸ್ಯರು, ಸೇವಾ ಪ್ರತಿನಿಧಿ ಗಂಗಾಮಣಿ ಹಾಗೂ ಸ್ವಸಹಾಯ ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು.
- ಕೆ.ಬಿ.ಚಂದ್ರಚೂಡ