ತುಮಕೂರು-ಶೈಕ್ಷಣಿಕ ಕ್ಷೇತ್ರದ-ಇನ್ನಷ್ಟು-ಪ್ರಗತಿಗೆ- ಡಾ.ಜಿ.ಪರಮೇಶ್ವರ್-ಕರೆ


ತುಮಕೂರು:
ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ2023-24 ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆ ನಗರದ ಹೊರವಲಯದ ಗೊಲ್ಲಹಳ್ಳಿ ಶ್ರೀ ಸಿದ್ಧಾರ್ಥ ಶಿಕ್ಷಕ ತರಬೇತಿ ಕೇಂದ್ರ ಸಭಾಂಗಣದಲ್ಲಿಂದು ನಡೆಯಿತು.

ಸಂಸ್ಥೆಯ ಕಾರ್ಯದರ್ಶಿ, ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆಯವ್ಯಯ ಲೆಕ್ಕಪತ್ರ ಮಂಡನೆ, ಶಿಕ್ಷಣ ಸಂಸ್ಥೆ ಪ್ರಗತಿ ಹಾದಿ ಸೇರಿದಂತೆ ಹಲವು ವಿಚಾರಗಳನ್ನು ಚರ್ಚಿಸಲಾಯಿತು. ನಂತರ ಮಾತನಾಡಿ, ಶಿಕ್ಷಣ ಸಂಸ್ಥೆಯ ಅಭಿವೃದ್ಧಿಗೆ ಶ್ರಮಿಸಬೇಕೆಂದು ಆಡಳಿತ ಮಂಡಳಿ ಹಾಗೂ ಸಂಸ್ಥೆಯ ವಿವಿಧ ಶಾಲಾ-ಕಾಲೇಜುಗಳ ಘಟಕದ ಮುಖ್ಯಸ್ಥರಿಗೆ ಸೂಚಿಸಿದರು. ಶಿಕ್ಷಕ ತರಬೇತಿಯ ಪ್ರಕ್ಷಣಾರ್ಥಿ ಸೇರಿದಂತೆ ಶಾಲಾ ಮಕ್ಕಳೊಂದಿಗೆ ಸಂವಾದ ನಡೆಸಿ ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮವಾದ ಸಾಧನೆ ಮಾಡಬೇಕೆಂದು ಹುರಿದುಂಬಿಸಿ ಆರ್ಶೀವದಿಸಿದರು.

ಶಿಕ್ಷಣ ಭೀಷ್ಮ ಡಾ. ಗಂಗಧರಯ್ಯ, ಡಾ. ಶಿವಪ್ರಸಾದ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಸಂಸ್ಥೆಯಲ್ಲಿ ಕಾರ್ಯನಿರ್ವಹಣೆ ಮಾಡಿ ಅಗಲಿದ ಸಿಬ್ಬಂದಿಗಳಿಗೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.


ಈ ಸಂದರ್ಭದಲ್ಲಿ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಸದಸ್ಯರಾದ ಮಾಜಿ ಸಚಿವ ಎಚ್.ಕೆ.ಕುಮಾರಸ್ವಾಮಿ, ವಕೀಲ ಅಮರನಾಥ್, ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರ ಬಿ ನಂಜುಂಡಪ್ಪ, ಸಾಹೇ ವಿವಿಯ ಉಪಕುಲಪತಿಗಳಾದ ಡಾ.ಬಿ.ಕೆ.ಲಿಂಗೇಗೌಡ, ರಿಜಿಸ್ಟರ್ ಡಾ. ಅಶೋಕ್ ಮೆಹ್ತಾ, ಕುಲಾಧಿಪತಿಗಳ ಸಲಹೆಗಾರರಾದ ಡಾ. ವಿವೇಕ್ ವೀರಯ್ಯ, ಮೆಡಿಕಲ್ ಕಾಲೇಜು, ಪ್ರಾಂಶುಪಾಲರಾದ ಸಾಣಿಕೊಪ್ಪ, ದಂತ ವೈದ್ಯಕೀಯ ಕಾಲೇಜಿನ ಡಾ. ಪ್ರವೀಣ್ ಕುಡುವ, ಉಪ ಪ್ರಾಂಶುಪಾಲರಾದ ಡಾ ಪ್ರಭಾಕರ್, ಇಂಜಿನಿಯರಿಂಗ್ ಕಾಲೇಜು ವಿಭಾಗದ ಪ್ರಾಂಶುಪಾಲ ಡಾ. ರವಿಪ್ರಕಾಶ್, ನೆಲಮಂಗಲ ವೈದ್ಯಕೀಯ ಕಾಲೇಜು ಪ್ರಾಂಶುಪಾಲ ದಿವಾಕರ್ ಸೇರಿದಂತೆ ಶಿಕ್ಷಣ ಸಂಸ್ಥೆಗಳ ವಿವಿಧ ವಿಭಾಗದ ಮುಖ್ಯಸ್ಥರುಗಳು, ಪ್ರಾಧ್ಯಾಪಕ ವರ್ಗ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

× How can I help you?