ಚಿಕ್ಕಮಗಳೂರು- ಜಗದ್ಗುರು ಶ್ರೀ ರೇವಣಸಿದ್ದೇಶ್ವರರ ನೊಂದಾಯಿತ ಸಂಘದ ರಾಜ್ಯ ಹಿರಿಯ ಉಪಾಧ್ಯಕ್ಷರಾಗಿ ಡಾ.ಹಿರೇನಲ್ಲೂರು ಶಿವು ಅವರನ್ನು ನೇಮಕ ಮಾಡಲಾಗಿದೆ ಎಂದು ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷ ಶ್ರೀ ಶರಭಯ್ಯ ಸ್ವಾಮೀಜಿ ತಿಳಿಸಿದ್ದಾರೆ.
ರಾಜ್ಯಾಧ್ಯಂತಹ ಉತ್ತಮ ಸಂಘಟನೆ ಮಾಡುವ ಮೂಲಕ ಸಂಘದ ಶ್ರೇಯೋಭಿವೃದ್ಧಿಗೆ ಶಿವು ಅವರು ಸ್ಪಂದಿಸಬೇಕು. ಜನಪರ ಕೆಲಸಗಳ ಮೂಲಕ ಮತ್ತಷ್ಟು ಸೇವೆ ಮಾಡಿ ಸಂಘಟನೆ ಭಾರತದಾದ್ಯಂತ ಕಾರ್ಯನಿರ್ವಹಿಸಬೇಕು.