ಚಿಕ್ಕಮಗಳೂರು;ಜಿಲ್ಲೆಯ ಪ್ರತಿಷ್ಟಿತ ವೈದ್ಯ ಹಾಗೂ ಸಾಂಸ್ಕೃತಿಕ ರಾಯಬಾರಿ ಡಾ|| ಜೆ.ಪಿ.ಕೃಷ್ಣೇಗೌಡರ 76ರ ಹುಟ್ಟುಹಬ್ಬದ ಅಂಗವಾಗಿ ಶುಕ್ರವಾರ ಜವೇರಿಯಾ ಚಾರಿಟಬಲ್ ಟ್ರಸ್ಟ್ ಪದಾಧಿಕಾರಿಗಳು ಅವರ ನಿವಾಸಕ್ಕೆ ತೆರಳಿ ಆತ್ಮೀಯವಾಗಿ ಗೌರವ ಸಮರ್ಪಿಸಿದರು.
ಟ್ರಸ್ಟ್ ಸದಸ್ಯ ಶಹಬುದ್ದೀನ್ ಮಾತನಾಡಿ ವೈದ್ಯರಾಗಿ,ಸಮಾಜಸುಧಾರಕರಾಗಿ ಹಾಗೂ ಆಶಾಕಿರಣ ಶಾಲೆಯ ಮಕ್ಕಳ ದಾರಿದೀಪವಾದವರು ಎಂದ ಅವರು,ಸಮಾಜಮುಖಿ ಕಾರ್ಯದಲ್ಲಿ ಫಲಾಪೇಕ್ಷೆ ಇಲ್ಲದೇ ತಮ್ಮನ್ನು ತೊಡಗಿಸಿಕೊಂಡಿರುವ ಈ ಅಪರೂಪದ ವ್ಯಕ್ತಿಯನ್ನು ಜಿಲ್ಲೆ ಪಡೆದಿರುವುದೇ ದೊಡ್ಡ ಭಾಗ್ಯ ಎಂದರು.
ಕೃಷ್ಣೇಗೌಡರ ಸ್ವಭಾವ ಹಾಗೂ ಸೇವಾಗುಣಕ್ಕೆ ಹಲವಾರು ಯುವಕರು ಮಾರುಹೋಗಿದ್ದಾರೆ.ಇವರ ಈ ಗುಣಗಳಿಂದ ಅಪಾರ ಸಂಖ್ಯೆಯಲ್ಲಿ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.ಮುಂಬರುವ ದಿನಗಳಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಕೃಷ್ಣೇಗೌಡರ ಸಮಾಜಸೇವೆ ಗುರುತಿಸಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿಸಬೇಕು ಎಂದು ಆಗ್ರಹಿಸಿದರು.
ಟ್ರಸ್ಟ್ ಅಧ್ಯಕ್ಷ ಮಹಮ್ಮದ್ ಜುನೈದ್ ಮಾತನಾಡಿ 50ರ ವಸಂತ ಕಾಲದಲ್ಲಿದ್ದ ಕೃಷ್ಣೇಗೌಡರು 76ರ ವಸಂತದ ವಯಸ್ಸಿನಲ್ಲೂ ಯಾವುದೇ ಬದಲಾವಣೆಯಿಲ್ಲದೇ ನವ ಯುವಕರಂತೆ ಹೊಳೆಯುತ್ತಿದ್ದಾರೆ.ಅವರ ನಿರಂತರ ಹಾಗೂ ಕ್ರಿಯಾಶೀಲ ಚಟುವಟಿಕೆಗಳು ಇಂದಿನ ಯುವಕರನ್ನು ಮೀರಿಸುವಂತಿದೆ ಎಂದರು.
ಈ ಸಂದರ್ಭದಲ್ಲಿ ಟ್ರಸ್ಟ್ ಸದಸ್ಯರುಗಳಾದ ಹನ್ಸರ್ ಆಲಿ,ಸಲ್ಮಾನ್,ಅಕ್ರಮ್,ಇರ್ಪಾನ್,ಇಮ್ರಾನ್,ಅಬ್ರೋಜ್,ತನ್ವೀರ್ ಮತ್ತಿತರರು ಹಾಜರಿದ್ದರು.
————————-ಸುರೇಶ್