ತುಮಕೂರು: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪರಮಪೂಜ್ಯ ಡಾ||ಡಿ.ವೀರೇಂದ್ರ ಹೆಗ್ಗಡೆಯವರು ಊಡಿಗೆರೆ ಹೋಬಳಿ ಬ್ಯಾತ ಗ್ರಾಮದ ದಂಡಿನ ಮಾರಮ್ಮ ದೇವರ ಉತ್ಸವ ಮೂರ್ತಿಯ ಜೀರ್ಣೋದ್ಧಾರಕ್ಕೆ ರೂ.150,000 ನೀಡಿದ್ದು ಸದರಿ ಡಿ.ಡಿ.ಯನ್ನು ಮಾನ್ಯ ಯೋಜನಾಧಿಕಾರಿಗಳಾದ ಪ್ರಭಾಕರ್ ರಾಮನಾಯಕ್ ರವರು ಗ್ರಾಮದ ಸದಸ್ಯರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ತುಮಕೂರು ಗ್ರಾಮಾಂತರ ಯೋಜನಾಧಿಕಾರಿಗಳಾದ ಸಂದೇಶ್, ಜಿಲ್ಲಾ ಜನಜಾಗೃತಿಯ ಸದಸ್ಯರಾದ ಬಸವರಾಜು, ಮೇಲ್ವಿಚಾರಕರಾದ ಹೆಚ್.ಎಸ್.ಲೋಕೇಶ್, ವೀರೇಂದ್ರ ಹೆಗ್ಗಡೆರವರ ಅಭಿಮಾನಿ ಬ್ಯಾತ ಸೋಮಣ್ಣ, ನಾಗರಾಜಯ್ಯ, ರಂಗಸ್ವಾಮಯ್ಯ, ವೆಂಕಟರಮಣಯ್ಯ, ಗಂಗಾಧರ್, ಮುದ್ದಯ್ಯ ಹಾಗೂ ಊರಿನ ಪಟೇಲರು ಊರಿನ ಮುಖಂಡರು ಹಾಜರಿದ್ದರು.
-ಕೆ.ಬಿ.ಚಂದ್ರಚೂಡ