18 ಬಾರಿ ಅಂಬಾರಿ ಹೊತ್ತಿದ್ದ ‘ದ್ರೋಣ ವಿದ್ಯುತ್ ಆಘಾತ’ಕ್ಕೆ ‘ಬ,ಲಿ’ಯಾದ-ಮಾವುತ ದೊಡ್ಡಪ್ಪಾಜಿಯು ಸಹ ಮಾವುತನ ಕೆಲಸವನ್ನೇ ಬಿಟ್ಟುಬಿಟ್ಟರು

ದಸರಾ ಅಂಬಾರಿ ಹದಿನೆಂಟು ಬಾರಿ ಹೊತ್ತ ದ್ರೋಣ ಅತ್ಯಂತ ನಿಷ್ಠಾವಂತ.ತಾನೇ ನೋವು ನುಂಗಿ ಯಾರಿಗೂ ನೋವು ನೀಡದ ನಮ್ಮ ರಾಜ್ಯದ ಅಪರೂಪದ ಗಜ ವಜ್ರ.

ಅಂಬಾರಿ ಹೊತ್ತ ಸಂದರ್ಭದಲ್ಲಿ ತಾಯಿ ಚಾಮುಂಡಿ ಬೆನ್ನಲ್ಲಿ ರಾರಾಜಿಸುತ್ತಿದ್ದಾಗ 750ಕೆಜಿ ಅಂಬಾರಿ ಸ್ವಲ್ಪ ಜರುಗಿದಂತಾದರೂ ತಾನೇ ದೇಹವನ್ನು ಅಲುಗಾಡಿಸಿ ಸರಿಪಡಿಸಿಕೊಳ್ಳುತ್ತಿದ್ದ ಜಾಣ್ಮೆಯ ಗಜವೀರ.

ಈತ ಜನಿಸಿದ್ದು 1936ರಲ್ಲಿ ಎಂದು ಅಂದಾಜಿಸಲಾಗಿದೆ.1998ರ ತನಕ ತನ್ನ ಅರವತ್ತನೇ ವಯಸ್ಸಿನ ತನಕ ಈತ ಬದುಕಿದ್ದ.ಉಳಿದ ಆನೆಗಳಲ್ಲಿ ಇರದ ಪ್ರತ್ಯೇಕತೆ,ಬುದ್ಧಿ ಕೌಶಲ್ಯ ಈತನಲ್ಲಿ ಇದ್ದದ್ದು ವಿಶೇಷ.

ಸಾಧು ಗುಣ ಸಂಪನ್ನನಾದ ಈತ ಸ್ವಭಾವದಲ್ಲಿ ಮನುಷ್ಯರನ್ನೂ ಮೀರಿಸುವ ಕರುಣಾ ಮಯ.ಈತ ದೊರೆತ್ತಿದ್ದು 1971ರಲ್ಲಿ ಕಾಕನಕೋಟೆಯಲ್ಲಿ ನಡೆದ ಖೆಡ್ಡ ಆನೆಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ.

ನಂತರ ಶಿವಮೊಗ್ಗದಲ್ಲಿ ಮರದ ದಿಮ್ಮಿಗಳನ್ನು ಎತ್ತುವ ಕೆಲಸಕ್ಕೆ ಬಳಸಲಾಗುತ್ತೆ.ಅರಣ್ಯ ಅಧಿಕಾರಿಗಳ ಜೊತೆಗೆ ಹುಲಿ ಕಾರ್ಯಾಚರಣೆಯಲ್ಲಿ, ಕಾಡಾನೆಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ದ್ರೋಣನ ಕಾರ್ಯದಕ್ಷತೆ ಮೆಚ್ಚುವಂಹದ್ದು.

ದ್ರೋಣನನ್ನ ನೋಡಿಕೊಳ್ಳುತ್ತ ಇದ್ದವರು ದೊಡ್ಡಪ್ಪಾಜಿ ಅನ್ನೋ ಮಾವುತರು. ಅವರಿಗೆ ದ್ರೋಣ ಅಂದ್ರೆ ಜೀವಕ್ಕಿಂತ ಹೆಚ್ಚು. ಒಂದು ದಿನ ಅಂಬಾರಿ ಹೊತ್ತ ದ್ರೋಣ ತನ್ನಿಂತಾನೇ ನಿಲ್ತಾನೆ. ದೊಡ್ಡಪ್ಪಾಜಿ ಆಜ್ಞೆ ಇಲ್ಲದೇ ಯಾಕೆ ನಿಂತ ಎಂದು ತಿಳಿಯದೆ ಅವರು ಇಳಿದು ನೋಡಿದಾಗ ದೊಡ್ಡ ಕಬ್ಬಿಣದ ಮೊಳೆಯೊಂದು ದ್ರೋಣನ ಪಾದ ಚುಚ್ಚಿ ರಕ್ತ ಬರುತ್ತಿತ್ತು.

ಹಾಗಿದ್ದರೂ ದ್ರೋಣ ಅಂಬಾರಿ ಹೊತ್ತು ದಸರಾ ಆಚರಣೆಯನ್ನು ಪರಿಪೂರ್ಣ ಗೊಳಿಸುತ್ತಾನೆ.ತನಗೆ ನೋವಾದರೂ ದಸರಾ ಆಚರಣೆಗೆ ಅಡ್ಡಿ ಆಗಬಾರದು ಎಂಬ ದ್ರೋಣನ ಅಂತಃಕರಣ ಎಷ್ಟು ಪರಿಶುದ್ಧ ಎನ್ನುವುದು ಈ ಘಟನೆ ಮೂಲಕ ತಿಳಿಯುತ್ತೆ.

ದ್ರೋಣ ಮತ್ತೆ ದೊಡ್ಡಪ್ಪಾಜಿ ಬಾಂಧವ್ಯ ಹೇಗಿತ್ತು ಎಂದರೆ ದೊಡ್ಡಪ್ಪಾಜಿ ಕಣ್ಣಲ್ಲಿ ಹೇಳೋ ಸನ್ನೆ ಭಾಷೆಯನ್ನೇ ಹೇಳಿದ ಮಾತನ್ನೆ ದ್ರೋಣ ಅರ್ಥೈಸುವಷ್ಟು ಆತ್ಮೀಯತೆ ಬೆಳೆದಿತ್ತು. ಇದಕ್ಕೆ ಕಾರಣ ಚಿಕ್ಕಂದಿನಿಂದ ತಮ್ಮ ತಂದೆಯ ಜೊತೆಗೆ ದೊಡ್ಡಪ್ಪಾಜಿ ಬೆಳೆದದ್ದು ದ್ರೋಣನ ಜೊತೆ-ಜೊತೆಗೆ.

1998ರಲ್ಲಿ ಬಳ್ಳೆ ಎಂಬ ಗ್ರಾಮದಲ್ಲಿ ಮೇವಿಗಾಗಿ ಹೋದ ದ್ರೋಣ ವಿದ್ಯುತ್ ತಂತಿಗೆ ತಾಗಿಕೊಂಡಿದ್ದ ಮರದ ರೆಂಬೆಯನ್ನು ಸ್ಪರ್ಶಸಿ ಇಹಲೋಕ ತ್ಯಜಿಸುತ್ತಾನೆ.ಇದರೊಂದಿಗೆ ದೊಡ್ಡಪ್ಪಾಜಿ ಕೂಡಾ ಮಾವುತ ಕೆಲಸವನ್ನ ಬಿಟ್ಟುಬಿಡುತ್ತಾರೆ.

——————ಮಣಿರಾಜ್ ಕಾಸರಗೋಡು

Leave a Reply

Your email address will not be published. Required fields are marked *

× How can I help you?