ನಾಡಪ್ರಭು ಕೆಂಪೇಗೌಡರ ಉತ್ಸವ ಅ.27 ರಂದು ದುಬೈನಲ್ಲಿ-ಕನ್ನಡ ನೆಲದ ಕಲೆ,ಸಂಸ್ಕೃತಿ,ಮತ್ತು ಪರಂಪರೆಯನ್ನು ಪ್ರಪಂಚಕ್ಕೆ ಪರಿಚಯಿಸುವ ಕಾರ್ಯಕ್ರಮ

ಹಾಸನ-ಪ್ರತಿವರ್ಷದಂತೆ ಈ ವರ್ಷವು ಸಹ ದುಬೈನಲ್ಲಿ ನಮ್ಮ ಕಲೆ,ಸಂಸ್ಕೃತಿ, ಮತ್ತು ಪರಂಪರೆಯನ್ನು ಸಡಗರದಿಂದ ಆಚರಿಸುವ ನಾಡಪ್ರಭು ಕೆಂಪೇಗೌಡರ ಉತ್ಸವವನ್ನು ಇದೇ ಅ.27 ರಂದು ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷರು, ಒಕ್ಕಲಿಗರ ಸಂಘ ದುಬೈ(ಯುಎಇ)
ಕಿರಣ್ ಗೌಡ ತಿಳಿಸಿದ್ದಾರೆ.

ದುಬೈನ ಪ್ರತಿಷ್ಠಿತ ರಿಟ್ಸ್ ಕಾರ್ಟನ್ ಹೋಟೆಲ್‌ನ ಆವರಣದಲ್ಲಿ ಒಕ್ಕಲಿಗರ ಸಂಘ ದುಬೈ (ಯುಎಇ) ವತಿಯಿಂದ ಇದೇ ತಿಂಗಳ ಅ. 27 ರಂದು ನಾಡಪ್ರಭು ಕೆಂಪೇಗೌಡರ ಉತ್ಸವ- ದುಬೈ ಮತ್ತು ದುಬೈ ಕೆಂಪೇಗೌಡರ ಬ್ಯಸಿನೆಸ್ ಅವಾರ್ಡ್ 2024 ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲು, ಕನ್ನಡಿಗರು ಹಾಗೂ ಸ್ಥಳೀಯರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲು ಸಜ್ಜಾಗಿದ್ದಾರೆ.

ಕಾರ್ಯಕ್ರಮದಲ್ಲಿ ಕರ್ನಾಟಕದ ಕಲೆ,ಸಂಸ್ಕೃತಿ ಯನ್ನು ಸಾರುವ ಜೊತೆಗೆ ಕ್ರೀಡೆ,ಶಿಕ್ಷಣ, ಉದ್ಯಮ, ಮತ್ತು ಕಲಾ ಕ್ಷೇತ್ರಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ವಿಶೇಷ ಸನ್ಮಾನವನ್ನು ಕನ್ನಡಿಗರ ಹೆಮ್ಮೆಯ ಕೆಂಪೇಗೌಡ ಉತ್ಸವದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ದುಬೈ, ದಿನೇದಿನೆ ಬೆಳೆಯುತ್ತಿರುವ ದೇಶ.ಪ್ರವಾಸೋದ್ಯಮವು ಈ ದೇಶದಲ್ಲಿ ಈಗ ಪ್ರಮುಖ ಉದ್ಯಮವಾಗಿ ಬದಲಾಗಿದ್ದು, ರಿಯಲ್ ಎಸ್ಟೇಟ್ ಸೇರಿದಂತೆ ಅನೇಕ ಉದ್ಯಮಗಳು ಮರಳುಗಾಡಿನಲ್ಲಿ ಈಗ ತಲೆ ಎತ್ತಿ ನಿಂತಿವೆ.

ಪ್ರಪಂಚದಾದ್ಯoತ ಹಲವರು ದುಬೈಗೆ ಬಂದು ನೆಲೆಸಿದ್ದಾರೆ. ಈ ದೇಶದಲ್ಲಿ ಕನ್ನಡಿಗರು ಕೂಡ ತಮ್ಮದೇ ಆದ ಸ್ಥಾನ ಹೊಂದಿದ್ದು, ಆರಬ್ ನಾಡಿನಲ್ಲಿ ಸಾವಿರಾರು ಕುಟುಂಬಗಳು ನೆಲೆ ಕಂಡುಕೊoಡಿದ್ದಾರೆ.ದುಬೈನಲ್ಲಿ ನಡೆಯುತ್ತಿರುವ ಈ ಐತಿಹಾಸಿಕ ಉತ್ಸವವನ್ನು ಆದಿಚುಂಚನ ಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಆಯೋಜಿಸಲಾಗುತ್ತಿದ್ದು,ಕರ್ನಾಟಕದ ಸಚಿವರು, ಉದ್ಯಮಿಗಳು, ಸಿನಿಮಾ ತಾರೆಯರು, ಮತ್ತು ವಿವಿಧ ಗಣ್ಯ ವ್ಯಕ್ತಿತ್ವಗಳು ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.

ಈ ಬಾರಿಯ ಕೆಂಪೇಗೌಡ ಉತ್ಸವವನ್ನು ದುಬೈನಲ್ಲಿ ಆಚರಿಸುವ ಜೊತೆಗೆ ದುಬೈನ ಅದ್ಭು ತಗಳನ್ನು ಸಹ ಕನ್ನಡಿಗರು ಕಣ್ಣುಂಬಿಕೊಳ್ಳಲು ಸಹ ವ್ಯವಸ್ಥೆಮಾಡಲಾಗಿದೆ. ಆ ಮೂಲಕ ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಉತ್ಸವನ್ನು ಸಾಗರದಾಚೆಯ ದುಬೈನಲ್ಲೂ ಈಗ ನೀವು ಈ ಮೂಲಕ ನೋಡಬಹುದು ಎಂದು ಮಾಹಿತಿ ನೀಡಿದ್ದಾರೆ.


ನಾಡಪ್ರಭು ಕೆಂಪೇಗೌಡರು ಕನ್ನಡಿಗರ ಹೆಮ್ಮೆಯ ಪ್ರತೀಕ. ದುಬೈನಲ್ಲಿ ನಡೆಯುತ್ತಿರುವ ಈ ಉತ್ಸವ ಕನ್ನಡಿಗರ ಸಂಬoಧವನ್ನು ಮತ್ತಷ್ಟು ಹೆಚ್ಚಿಸುವ ಮಹತ್ತರ ಅವಕಾಶ. ಈ ಉತ್ಸವವು ದುಬೈನಲ್ಲಿನ ಕನ್ನಡಿಗರಿಗೆ ಮಾತ್ರವಲ್ಲ, ಇಡೀ ಪ್ರಪಂಚದಾದ್ಯoತ ಕನ್ನಡಿಗರಿಗೆ ಹೊಸ ಸಂದೇಶವನ್ನು ನೀಡಲಿದೆ.

ನಮ್ಮ ಕಲೆ, ಸಂಸ್ಕೃತಿ, ಮತ್ತು ಪರಂಪರೆಯನ್ನು ಸಡಗರದಿಂದ ಆಚರಿಸುತ್ತಿರುವುದು ನಮಗೆ ಸಂತೋಷವನ್ನು ನೀಡುತ್ತದೆ.

ಕಿರಣ್ ಗೌಡ, ಅಧ್ಯಕ್ಷರು, ಅಧ್ಯಕ್ಷರು
ಒಕ್ಕಲಿಗರ ಸಂಘ ದುಬೈ(ಯುಎಇ).

Leave a Reply

Your email address will not be published. Required fields are marked *

× How can I help you?