ಮೂಡಿಗೆರೆ-ತಾಲೂಕಿನಾದ್ಯಂತ ಸಂಭ್ರಮ ಸಡಗರದ ‘ಈದ್ ಮಿಲಾದ್’ ಆಚರಣೆ-ಧರ್ಮಗುರುಗಳಿಂದ ವಿಶೇಷ ಆಶೀರ್ವಚನ

ಮೂಡಿಗೆರೆ:ಪ್ರವಾದಿ ಮೊಹಮ್ಮದ್ ಅವರ ಜನ್ಮ ದಿನಾಚರಣೆ ಅಂಗವಾಗಿ ಸೋಮವಾರ ಈದ್ ಮಿಲಾದ್ ಹಬ್ಬವನ್ನು ತಾಲೂಕಿನಾದ್ಯಂತ ಮುಸ್ಲಿಮರು ಸಂಭ್ರಮ ಸಡಗರದಿಂದ ಆಚರಿಸಿದರು.

ಮೂಡಿಗೆರೆ ಅಂಜುಮನ್ ಇಸ್ಲಾಂ ಸಂಸ್ಥೆಯಿoದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.ಹಬ್ಬದ ಪ್ರಯುಕ್ತ ಮುಸ್ಲಿಂ ಸಮುದಾಯದ ಮನೆಗಳು ಮತ್ತು ವಿವಿಧ ಮಸೀದಿಗಳು ಸೇರಿದಂತೆ ಪ್ರಮುಖ ಬೀದಿಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು.

ತಳಿರುತೋರಣಗಳಿಂದ ಎಲ್ಲ ಮಸೀದಿಗಳ ಪ್ರದೇಶ ಕಂಗೊಳಿಸುತ್ತಿತ್ತು.ಪಟ್ಟಣದ ಬದ್ರಿಯಾ ಜುಮ್ಮಾ ಮಸೀದಿ, ಜಾಮಿಯ ಜದೀದ್ ಮಸೀದಿ ಹಾಗೂ ಪಟ್ಟಣದ ಹೊರವಲಯದ ಹ್ಯಾಂಡ್‌ಪೋಸ್ಟ್,ಅರಳೀಗಂಡಿ,ಬಿಳಗುಳ,ಅಣಜೂರು, ಕಿತ್ತಲೆಗಂಡಿ, ಹಂಡುಗುಳಿ,ಅಣಜೂರು,ಚಕಮಕ್ಕಿ,ಬಣಕಲ್,ಕೊಟ್ಟಿಗೆಹಾರ

ಸೇರಿದಂತೆ ತಾಲೂಕಿನ 18 ಮಸೀದಿಗಳಲ್ಲಿ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮ ದಿನಾಚರಣೆ ಆಚರಿಸಲಾಯಿತು.

ಮಸ್ಲೀಮರು ಸೋಮವಾರ ಮಸೀದಿಗೆ ಆಗಮಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.ಮಸ್ಲಿಂ ಧರ್ಮಗುರುಗಳು ಪ್ರವಾದಿ ಮೊಹಮ್ಮದ್ ಪೈಗಂಬರ್ ಬಗ್ಗೆ ಮಾತನಾಡಿ ಅವರು ಸರ್ವರ ಏಳಿಗೆ ಬಯಸಿದ್ದರು.ಉಳ್ಳವರು ಇಲ್ಲದವರಿಗೆ ದಾನಮಾಡಬೇಕೆಂದು ಅವರು ಜಗತ್ತಿಗೆ ಹೇಳಿಕೊಟ್ಟಿದ್ದರಿಂದ ಮುಸ್ಲಿಂ ಸಮುದಾಯದಲ್ಲಿ ದಾನ ಧರ್ಮಗಳು ಹೆಚ್ಚಾಗಿ ನಡೆಯುತ್ತಿದೆ ಎಂದರು.ಪ್ರವಾದಿಯವರು ನೀಡಿದ ಸಂದೇಶವನ್ನು ಪ್ರತಿಯೊಬ್ಬರೂ ಪಾಲಿಸುವಂತೆ ತಿಳಿಸಿ ಆಶೀರ್ವಚನ ನೀಡಿದರು. ನಂತರ ಮಸ್ಲಿಂ ಸಮುದಾಯದವರು ಪರಸ್ಪರ ಶುಭಾಶಯ ಕೋರಿದರು.

…………..ವರದಿ: ವಿಜಯಕುಮಾರ್.ಟಿ,ಮೂಡಿಗೆರೆ

Leave a Reply

Your email address will not be published. Required fields are marked *

× How can I help you?