ಕೆ ಆರ್ ಪೇಟೆ: ತಾಲ್ಲೂಕು ಶೀಳನೆರೆ ಹೋಬಳಿ ಸಿಂಧುಘಟ್ಟ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಅಭ್ಯರ್ಥಿಗಳು ಪ್ರಚಂಡ ಗೆಲುವು ಸಾಧಿಸಿದ್ದಾರೆ.
ಡೇರಿಯ ನೂತನ ಆಡಳಿತ ಮಂಡಳಿಯ 10 ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜೆಡಿ ಎಸ್ ಬಿಜೆಪಿಯ 6 ಮಂದಿ ಅಭ್ಯರ್ಥಿಗಳು ಜಯಭೇರಿ ಬಾರಿಸಿದರೆ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ 4 ಅಭ್ಯರ್ಥಿಗಳು ಜಯಭೇರಿ ಬಾರಿಸಿ ತೃಪ್ತಿ ಪಡಬೇಕಾಯಿತು.
ಡೇರಿಯ ನೂತನ ನಿರ್ದೇಶಕರನ್ನು ಗ್ರಾಮದ ಹಿರಿಯ ಮುಖಂಡರು,ಜೆಡಿಎಸ್ ಬಿಜೆಪಿ ಮುಖಂಡರು ಅಭಿನಂದಿಸಿದರು.

ಡೇರಿಯ ಆಡಳಿತ ಮಂಡಳಿಯ ನಿರ್ದೇಶಕರಾಗಿ ಆಯ್ಕೆಯಾದ ಅಭ್ಯರ್ಥಿಗಳ ವಿವರ
ಎಸ್ ಎಂ ಮೋಹನ್ ಕುಮಾರ್-415, ಹೇಮಂತ್ ಕುಮಾರ್-359,ಮುದ್ದುಕುಮಾರ್- 304, ಕೃಷ್ಣೇಗೌಡ-251,ಎಸ್ ಮೋಹನ್-287,ಅನುಸೂಯ-279, ಶೋಭ-223,ಸೌಭಾಗ್ಯ-184, ಎಸ್ ಎಂ ರವಿ-244 ಮತಗಳನ್ನು ಪಡೆದು ಡೇರಿ ಆಡಳಿತ ಮಂಡಳಿಯ ನೂತನ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಸಿಂಧುಘಟ್ಟ ಗ್ರಾಮ ಪಂಚಾಯತಿ ಅಧ್ಯಕ್ಷ ಕುಮಾರ್, ಮಾಜಿ ಅಧ್ಯಕ್ಷ ಚಿದಂಬರ್, ಗಿರೀಶ್ ,ಸುರೇಶ್,ಸದಸ್ಯರಾದ ನವೀನ್, ನಂಜಪ್ಪ,ಬಾಬು, ಶ್ರೀಕಂಠ,ಡೇರಿ ಮಾಜಿ ಅಧ್ಯಕ್ಷ ಜಗದೀಶ್, ಮಹಾದೇವ, ಸುಮಾಚಲುವರಾಜು,ಹೇಮಂತ್, ಪ್ರಧಾನರಾದ ಮಂಜಣ್ಣ,ಸೊಸೈಟಿ ಅಧ್ಯಕ್ಷ ನಾಗೇಶ್,ಉಯ್ಗೋನಹಳ್ಳಿ ಕಿಟ್ಟಿ ಅತ್ತಿಮರನಹಳ್ಳಿ ಮಹದೇವ್,ಸೋಮೇಶ್ ಸೇರಿದಂತೆ ಇತರರು ಜೆಡಿಎಸ್ -ಬಿಜೆಪಿ ಮೈತ್ರಿ ಅಭ್ಯರ್ಥಿಗಳನ್ನು ಅಭಿನಂದಿಸಿದರು.
-ಶ್ರೀನಿವಾಸ್ ಆರ್.