ಕೆ.ಆರ್.ಪೇಟೆ: ತಾಲ್ಲೂಕಿನ ಕಸಬಾ ಹೋಬಳಿಯ ಅಗ್ರಹಾರಬಾಚಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಆಡಳಿತ ಮಂಡಳಿಯ ನಿರ್ದೇಶಕರ 12ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಪಕ್ಷದ 7 ಅಭ್ಯರ್ಥಿಗಳು, ಕಾಂಗ್ರೆಸ್-ರೈತ ಸಂಘದ 5 ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ.
ಜೆಡಿಎಸ್-ಬಿಜೆಪಿ ಮೈತ್ರಿ ಪಕ್ಷದ ಅಭ್ಯರ್ಥಿಗಳಾದ ಅಗ್ರಹಾರಬಾಚಹಳ್ಳಿ ಚಂದ್ರೇಗೌಡ, ಚಿಕ್ಕೋಸಹಳ್ಳಿ ಸುರೇಶ್, ಮಹಿಳಾ ಮೀಸಲು ಕ್ಷೇತ್ರದಿಂದ ಚಿಲ್ಲದಹಳ್ಳಿ ಮಣಿಯಮ್ಮ, ರಾಧಮಹೇಶ್, ಬಿಸಿಎಂ.ಬಿ.ಕ್ಷೇತ್ರದಿಂದ ಎಲ್.ಎಂ.ಚಲುವರಾಜೇಗೌಡ, ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಚಿಕ್ಕೋಸಹಳ್ಳಿ ಪಾರ್ವತಮ್ಮ, ಸಾಲಗಾರರಲ್ಲದ ಸಾಮಾನ್ಯ ಕ್ಷೇತ್ರದಿಂದ ಅಶೋಕ್ ಗೆಲುವು ಸಾಧಿಸಿದ್ದಾರೆ.
ಅದೇ ರೀತಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಅರೆಬೊಪ್ಪನಹಳ್ಳಿ ಅಶೋಕ್, ಎ.ಬಿ.ಮಹೇಂದ್ರ, ಎ.ಸಿ.ವೆಂಕಟೇಶ್ವರ್(ಸರ್ವೆ ದೇವರಾಜ್), ಬಿಸಿಎಂ ಮೀಸಲು ಕ್ಷೇತ್ರದಿಂದ ನಗರೂರು ಕುಮಾರ್, ಪ.ಜಾ ಮೀಸಲು ಕ್ಷೇತ್ರದಿಂದ ವಳಗೆರೆ ಮೆಣಸ ಕೆ.ಬಲರಾಮ್, ಗೆಲುವು ಸಾಧಿಸಿದ್ದಾರೆ. ಈ ಪೈಕಿ ಅರೆಬೊಪ್ಪನಹಳ್ಳಿ ಅಶೋಕ್ ಮತ್ತು ಎ.ಬಿ.ಮಹೇಂದ್ರ ಅವರು ಮೂರನೇ ಭಾರಿಗೆ ಭರ್ಜರಿ ಗೆಲುವು ಸಾಧಿಸಿ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.
ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸಮಿತಿ ಅಧ್ಯಕ್ಷ ಎ.ಬಿ.ಕುಮಾರ್ ಮಾತನಾಡಿ ಕಳೆದ ಸಲದ ಸೊಸೈಟಿ ಚುನಾವಣೆಯಲ್ಲಿ ಕೇವಲ 1ಸ್ಥಾನ ಪಡೆದಿದ್ದ ಕಾಂಗ್ರೆಸ್ ಪಕ್ಷವು ಈ ಭಾರಿ ಐದು ಸ್ಥಾನಗಳಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಉತ್ತಮ ಸಾಧನೆ ಮಾಡಿದೆ. ಇದು ಮುಂಬರುವ ತಾ.ಪಂ, ಜಿ.ಪಂ. ಹಾಗೂ ಗ್ರಾ.ಪಂ.ಚುನಾವಣೆಯಲ್ಲಿ ಪಕ್ಷವು ಉತ್ತಮ ಸಾಧನೆ ಮಾಡಲು ಸಹಕಾರಿಯಾಗಲಿದೆ ಎಂದು ಎ.ಬಿ.ಕುಮಾರ್ ವಿಶ್ವಾಸ ವ್ಯಕ್ತಪಡಿಸಿ, ನಮ್ಮ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡಿದ ಸೊಸೈಟಿ ವ್ಯಾಪ್ತಿಯ ಎಲ್ಲಾ 12ಗ್ರಾಮಗಳ ಮುಖಂಡರಿಗೆ ಹಾಗೂ ಶೇರುದಾರ ಮತದಾರರಿಗೆ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು.

ಗ್ರಾ.ಪಂ.ಮಾಜಿ ಅಧ್ಯಕ್ಷ ಮೆಣಸ ನಾಗೇಂದ್ರ, ನಂಜುಂಡೇಗೌಡ, ಸೊಸೈಟಿ ಮಾಜಿ ಅಧ್ಯಕ್ಷ ಸಿ.ಆರ್.ಪಿ.ಕುಮಾರ್, ಟಿಎಪಿಸಿಎಂಎಸ್ ನಿರ್ದೇಶಕ ಬೊಪ್ಪನಹಳ್ಳಿ ಅಶೋಕ್, ಗ್ರಾ.ಪಂ.ಮಾಜಿ ಅಧ್ಯಕ್ಷ ನಗರೂರು ಕುಮಾರ್, ಮಾಜಿ ಉಪಾಧ್ಯಕ್ಷ ಬೊಪ್ಪನಹಳ್ಳಿ ರಮೇಶ್, ರೂಪಾ ಎ.ಬಿ.ದೇವರಾಜು, ಅರೆಬೊಪ್ಪನಹಳ್ಳಿ ರೇವತಿ ಹರೀಶ್, ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಗೆಲುವು ಸಾಧಿಸಿದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಅಭಿನಂದಿಸಿದರು.
ಗೆಲುವು ಸಾಧಿಸಿದ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಗಳನ್ನು ಶಾಸಕ ಹೆಚ್.ಟಿ.ಮಂಜು, ಟಿಎಪಿಸಿಎಂಎಸ್ ನಿರ್ದೇಶಕ ಎಚ್.ಟಿ.ಲೋಕೇಶ್, ತಾ.ಪಂ.ಮಾಜಿ ಅಧ್ಯಕ್ಷ ಮೆಣಸ ಮಹದೇವೇಗೌಡ, ಮೈತ್ರಿ ಪಕ್ಷದ ಮುಖಂಡರಾದ ಎ.ಪಿ.ಕೇಶವಗೌಡ, ಹರೀನಹಳ್ಳಿ ರಘು, ಚಿಲ್ಲದಹಳ್ಳಿ ಮಹೇಂದ್ರ, ಜವರಣ್ಣನ ರಮೇಶ್, ಗ್ರಾ.ಪಂ.ಸದಸ್ಯರಾದ ಬಿ.ಆರ್.ರಮೇಶ್, ಚನ್ನೇಗೌಡ, ಸೊಸೈಟಿ ಮಾಜಿ ಅಧ್ಯಕ್ಷ ಚಿಕ್ಕೋಸಹಳ್ಳಿ ಸುರೇಶ್, ಮಾಜಿ ಉಪಾಧ್ಯಕ್ಷ ರಾಧಾಮಹೇಶ್ ಇತರರು ಅಭಿನಂದಿಸಿದರು.
ಶಾಸಕ ಹೆಚ್.ಟಿ.ಮಂಜು ಹಾಗೂ ಶಾಸಕರ ಸಹೋದರ ಟಿಎಪಿಸಿಎಂಎಸ್ ಮಾಜಿ ನಿರ್ದೇಶಕ ಹೆಚ್.ಟಿ.ಲೋಕೇಶ್ ಅವರ ಸಹಕಾರದಿಂದ 7ಸ್ಥಾನಗಳಲ್ಲಿ ಗೆಲುವು ಸಾಧಿಸಲು ಸಾಧ್ಯವಾಯಿತು ಎಂದು ಮುಖಂಡರು ಹೇಳಿದರು.

ಈ ಸಂದರ್ಭದಲ್ಲಿ ಮುಖಂಡರಾದ ಗ್ರಾ.ಪಂ.ಮಾಜಿ ಸದಸ್ಯ ಹಿಂದ್ಲಟ್ಟಿ ಅಣ್ಣೇಗೌಡ, ಗೌರಿಚನ್ನಪ್ಪನ ನಾಗಣ್ಣ, ನಿಂಗಣ್ಣನ ಬೋರಣ್ಣನ ರಮೇಶ್, ಸೊಸೈಟಿ ಮಾಜಿ ಅಧ್ಯಕ್ಷ ಅಂಗಡಿ ಮಹದೇವೇಗೌಡ, ಪ್ರಥಮ ದರ್ಜೆ ಗುತ್ತಿಗೆದಾರ ಎ.ಸಿ.ಲೋಹಿತಾಶ್ವ, ಈಶ್ವರ್, ಸಣ್ಣಪ್ಪನ ಪುಟ್ಟಸ್ವಾಮಿಗೌಡ, ಪ್ರಧಾನರ ಎ.ವಿ.ಪ್ರದೀಪ್, ಪ್ರಧಾನರ ರವಿ ಸೇರಿದಂತೆ ಸೊಸೈಟಿ ವ್ಯಾಪ್ತಿಯ ಹಲವಾರು ಗ್ರಾಮಗಳ ಮುಖಂಡರು ಸಹಕಾರ ಸಂಘದ ವ್ಯಾಪ್ತಿಯ ಮುಖಂಡರು ಹಾಜರಿದ್ದರು.
– ಶ್ರೀನಿವಾಸ್ ಆರ್.