ಕೊರಟಗೆರೆ-ನಿವೇಶನ-ಗುರುತಿಸಿ-ಭೂಮಿ-ವಿಂಗಡಿಸುತ್ತಿರುವ- ಸಂದರ್ಭದಲ್ಲಿ-ಭ್ರಷ್ಟಾಚಾರ-ಗ್ರಾ.ಪಂ.ಪಿಡಿಓಗೆ-ಛೀಮಾರಿ-ಹಾಕುವ- ಮೂಲಕ-ಚಾಟಿ-ಬೀಸಿದ-ಇಒ

ಕೊರಟಗೆರೆ :- ಗ್ರಾಮ ಪಂಚಾಯತಿ ಪಿಡಿಒಗಳ ಕಳ್ಳಾಟಕ್ಕೆ ಚಳಿ ಬಿಡಿಸುತ್ತಿರುವ ಕೊರಟಗೆರೆ ಇಓ ಅಪೂರ್ವ ಅನಂತರಾಮು ಬಡ ಜನತೆಗೆ ಸೂರು ಕಲ್ಪಿಸುವ ದೃಷ್ಟಿಯಿಂದ ನಿವೇಶನ ಹಂಚಿಕೆ ವಿಚಾರದಲ್ಲಿ ಲಕ್ಷಾಂತ ರೂ ಹಣ ಬಳಸಿಕೊಂಡು 10- 15 ಗಂಟೆ ಜೆಸಿಬಿ ಬಳಸಿ ಯಾಮರಿಸುತ್ತಿರುವುದರ ವಿರುದ್ಧ ಹೊಳವನಹಳ್ಳಿ ಗ್ರಾ .ಪಂ ನ ಪಿಡಿಓ ಗೆ ಛೀ ಮಾರಿ ಹಾಕುವ ಮೂಲಕ ಪಿಡಿಒ ಗಳಿಗೆ ಚಾಟಿ ಬೀಸಿದ್ದಾರೆ.

ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬಡ ಜನತೆಗೆ ನಿವೇಶನ ಹಂಚುವ ವಿಚಾರದಲ್ಲಿ ದುಗ್ಗೇನಹಳ್ಳಿ ಸರ್ವೆ ನಂಬರ್ 28 ರಲ್ಲಿ 2 ಎಕರೆ, ತೊಗರಿಘಟ್ಟ ಸರ್ವೆ ನಂಬರ್ 99ರಲ್ಲಿ 2 ಎಕರೆ ಅರಣ್ಯ ಪ್ರದೇಶ ಪಕ್ಕದಲ್ಲಿ ಗುರುತಿಸಿ ಭೂಮಿ ವಿಂಗಡಿಸುತ್ತಿರುವ ಸಂದರ್ಭದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಇಒ ಅಪೂರ್ವ ಅನಂತರಾಮು ಗ್ರಾಮ ಪಂಚಾಯತಿ ಪಿಡಿಒ ವಸಂತಕುಮಾರ್ ವಿರುದ್ಧ ಕಿಡಿ ಕಾಡಿದ್ದಾರೆ.

ಕೊರಟಗೆರೆ ತಾಲೂಕಿನಲ್ಲಿ ಹೊಳವನಹಳ್ಳಿ ಬಹಳ ಪ್ರತಿಷ್ಠಿತ ಹೋಬಳಿ ಕೇಂದ್ರವಾಗಿದ್ದು, ಜೊತೆಗೆ ಈ ಗ್ರಾಮ ಪಂಚಾಯಿತಿ ಗ್ರೇಡ್ 1 ಪಂಚಾಯತಿಯಾಗಿದ್ದು, ಹೋಬಳಿ ಕೇಂದ್ರವೊಂದರಲ್ಲಿಯೇ 8-10 ಸಾವಿರ ಜನಸಂಖ್ಯೆ ಇದ್ದು, ಅತಿ ಹೆಚ್ಚು ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರು ಸೇರಿದಂತೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗವಿರುವ ಪ್ರದೇಶವಾಗಿದ್ದು, ಬಹಳಷ್ಟು ಜನತೆ ಬಡತನ ರೇಖೆಗಿಂತ ಕೆಲವರ್ಗದವರಾಗಿದ್ದು, ಇವರಿಗೆ ಸೂರು ಕಲ್ಪಿಸುವಂತಹ ಸರ್ಕಾರದ ಮಹತ್ವಕಾಂಕ್ಷೆಯೊಂದಿಗೆ ಸದ್ಯಕ್ಕೆ ಚಾಲನೆ ನೀಡಲಾಗಿದೆ.

ಕೊರಟಗೆರೆ ತಾಲೂಕಿನಲ್ಲಿ ನಿವೇಶನ ರಹಿತ ಬಡ ಕುಟುಂಬಗಳಿಗೆ ನಿವೇಶನ ಹೊದಗಿಸಲು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗೃಹ ಸಚಿವರಾದ ಡಾ. ಜಿ ಪರಮೇಶ್ವರ್ ಬಹಳ ಮಹತ್ವಕಾಂಕ್ಷೆಯೊಂದಿಗೆ ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ 4 ಸಾವಿರ ಫಲಾಸುಭವಿಗಳಿಗೆ ನಿವೇಶನ ಹಂಚಲು ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿ .ಪಂ ಸಿ ಇ ಒ ಪ್ರಭು, ಕೊರಟಗೆರೆ ತಾಸಿಲ್ದಾರ್ ಕೆ ಮಂಜುನಾಥ್ ಪ್ರತಿ ಗ್ರಾಮ ಪಂಚಾಯತಿಗಳಲ್ಲಿ ಜಮೀನುಗಳನ್ನು ಗುರುತಿಸಿ ಗ್ರಾಮ ಪಂಚಾಯತ್ ಮುಖೇನ ಹಂಚಿಕೆ ಮಾಡಲು ಸಕಲ ಸಿದ್ಧತೆ ನಡೆಸಿದರಾದರೂ ಕೊನೆ ಕ್ಷಣದಲ್ಲಿ ಸ್ವಲ್ಪ ಬದಲಾವಣೆಯಾಗಿ ಮುಂದಿನ ದಿನದಲ್ಲಿ 4 ಸಾವಿರ ನಿವೇಶನ ರಹಿತ ಫಲಾನುಭವಿಗಳಿಗೆ ಮನೆ ಹಂಚಿಕೆ ಮಾಡಲು ಸಕಲ ಸಿದ್ಧತೆ ನಡೆಸಲಾಗಿದ್ದು, ಪೂರ್ವಭಾವಿಯಾಗಿ ಪ್ರತಿ ಪಂಚಾಯತಿಗಳು ನಿವೇಶನ ಗುರುತಿಸಿದ ಸ್ಥಳದಲ್ಲಿ ನಿವೇಶನ ಸಿದ್ಧತೆಗೆ ಕ್ರಮ ತೆಗೆದುಕೊಂಡು ಅದರಲ್ಲಿ ಬಹಳಷ್ಟು ಪಂಚಾಯಿತಿಗಳು ನಿವೇಶನ ಸಿದ್ಧತೆ ನಡೆಸುವ ಸಂದರ್ಭದಲ್ಲಿ ಭ್ರಷ್ಟಾಚಾರ ನಡೆಸಲಾಗಿ ಅದರ ಭಾಗವಾಗಿ ಹೊಳವನಹಳ್ಳಿ ಪಿಡಿಒ ವಸಂತ್ ಕುಮಾರ್ ಕಡಿಮೆ ಗಂಟೆ ಜೆಸಿಬಿ ಬಳಸಿ ಲಕ್ಷಾಂತರ ರೂ ಡ್ರಾ ಮಾಡಿರುವುದರ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

ಕಾಮಗಾರಿ ಮುಂದೆ ಸ್ವತಹ ಪಿ ಡಿ ಓ

ಕೊರಟಗೆರೆ ತಾಲೂಕು ಪಂಚಾಯಿತಿ ಇಒ ಅಪೂರ್ವ ಅನಂತರಾಮು ಹೊಳವನಹಳ್ಳಿ ಪಿಡಿಒ ವಸಂತ್ ಕುಮಾರ್ ವಿರುದ್ಧ ತಾಲೂಕು ಪಂಚಾಯತಿಯಲ್ಲಿ ವಸತಿರಹಿತ ಫಲಾನುಭವಗಳಿಗೆ ವಿತರಿಸಲು ವಿಂಗಡಿಸುತ್ತಿರುವ ಜಮೀನಿನಲ್ಲಿ 10 ರಿಂದ 15 ಗಂಟೆ ಜೆಸಿಬಿ ಬಳಸಿ ಗ್ರಾಮ ಪಂಚಾಯತಿ ಅನುದಾನದಲ್ಲಿ (1.6ಲಕ್ಷ ) ಒಂದು ಲಕ್ಷ ಅರವತ್ತು ಸಾವಿರ ಹಣ ಬಳಕೆ ಮಾಡಿರುವುದರ ವಿರುದ್ಧ ಪಿಡಿಒ‌ಗೆ ತರಾಟೆಗೆ ತೆಗೆದುಕೊಂಡ ನಂತರ ಸ್ವತಹ ತಾನೇ ಜೆಸಿಬಿ ಮುಂದೆ ನಿಂತು ಕಾಮಗಾರಿ ನಡೆಸುತ್ತಿರುವುದು ಹಲವು ನಾಗರೀಕರಿಗೆ ಅನುಮಾನ ಹುಟ್ಟಿರುವುದರ ಜೊತೆಗೆ ಉಪ್ಪು ತಿಂದವರು ನೀರು ಕುಡಿಯಲೇ ಬೇಕು , ಪಿಡಿಒ ಸುಳ್ಳು ಲೆಕ್ಕಕ್ಕೆ ಸ್ವತಹ ಫೀಲ್ಡ್ ಗಿಳಿದು ಆತುರಾತುರದಲ್ಲಿ ಕಾಮಗಾರಿ ನಡೆಸುತ್ತಿದ್ದಾರೆ ಎಂದು ಗ್ರಾಮ ಪಂಚಾಯತಿ ಸದಸ್ಯರುಗಳೇ ಆರೋಪ ಮಾಡುತ್ತಿದ್ದು ಕಂಡು ಬಂತು.

ಒಟ್ಟರೆ ಇತ್ತೀಚಿಗೆ ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಪೂರ್ವ ಅನಂತ ರಾಮ ಗ್ರಾಮ ಪಂಚಾಯತಿ ಪಿಡಿಒಗಳ ಬೆವರುಲಿಸುತ್ತಿದ್ದು, ಭ್ರಷ್ಟ ಪಿಡಿಒಗಳಿಗೆ ಸಿಂಹ ಸ್ವಪ್ನ ವಾಗಿರುವುದಲ್ಲದೆ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ 24 ಗ್ರಾಮ ಪಂಚಾಯತಿಗಳಿಗೂ ಪ್ರತಿದಿನ ಸುತ್ತುತ್ತಿದ್ದು, ಪಿ ಡಿ ಓ ಗಳಿಗೆ ನೋಂಗಲಾರದ ತುತ್ತಗಿದೆ, ಇಂತಹ ಬಹಳಷ್ಟು ಭ್ರಷ್ಟ ಪಿಡಿಒಗಳಿಗೆ ಛೀ ಮಾರಿ ಹಾಕಿ ಗ್ರಾಮ ಪಂಚಾಯತಿ ಅನುದಾನ ದುರ್ಬಳಕೆಗೆ ಕಡಿವಾಣವಾಗುತ್ತಿರುವುದು ಸಾಮಾನ್ಯವಾಗಿದೆ.

ವರದಿ- ಶ್ರೀನಿವಾಸ್ ಕೊರಟಗೆರೆ

Leave a Reply

Your email address will not be published. Required fields are marked *

× How can I help you?