ಕೊರಟಗೆರೆ-ವಿರೋಧ ಪಕ್ಷಗಳಿಂದ ಎತ್ತಿನಹೊಳೆ ಯೋಜನೆ ಬಗ್ಗೆ ಹುರುಳಿಲ್ಲದ ಟೀಕೆ-ಡಾ ಜಿ ಪರಮೇಶ್ವರ್ ಬೇಸರ

ಕೊರಟಗೆರೆ:-ಎತ್ತಿನಹೊಳೆ ಯೋಜನೆಯನ್ನು ಪ್ರಾರಂಬಿಸಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅದನ್ನು ಪೂರ್ಣಗೊಳಿಸಿದ್ದು ಸಿದ್ದರಾಮಯ್ಯ ಇದನ್ನು ಸಹಿಸದ ವಿರೋಧ ಪಕ್ಷಗಳು ಯೋಜನೆ ಬಗ್ಗೆ ಹುರುಳಿಲ್ಲದ ಟೀಕೆ ಮಾಡುತ್ತಿವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.

ಅವರು ಕೊರಟಗೆರೆ ಪಟ್ಟಣದ ಪ್ರವಾಸಿಮಂದಿರದಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿ ಮಾತನಾಡಿ,ಸಿದ್ದಾರಾಮಯ್ಯ ನವರು 2013- 2018 ರವಗೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಈ ಯೋಜನೆಯನ್ನು 12500 ಕೋಟಿ ರೂಗಳ ಅಂದಾಜು ವೆಚ್ಚದಲ್ಲಿ ಜಾರಿಗೊಳಿಸಿ ಹಣ ಬಿಡುಗಡೆ ಮಾಡಿದರು. ನಂತರ ಈ ಯೋಜನೆಯ ಮೊತ್ತವೂ ಹೆಚ್ಚಿತು.ನಾಲ್ಕು ವರ್ಷಗಳ ಕಾಲ ಆಳಿದ ಬಿಜೆಪಿ ಸರ್ಕಾರ ಈ ಯೋಜನೆಗೆ 5000 ಕೋಟಿಯಿಂದ 10000 ಸಾವಿರ ಕೋಟಿಗಳ ಹಣ ಬಿಡುಗಡೆ ಮಾಡಬಹುದಿತ್ತು ಆದರೆ ಅವರು ಬಿಡುಗಡೆ ಮಾಡಿದ್ದು ಕೇವಲ 1500 ಕೋಟಿ ಮಾತ್ರ.ಈಗ ಪೂರ್ಣಗೋಳ್ಳುತ್ತಿರುವ ಈ ಯೋಜನೆಯನ್ನು ಕಾದು ನೋಡದೆ ಟೀಕಿಸುವುದು ಸರಿಯಿಲ್ಲ ಎಂದರು.

ಎತ್ತಿನಹೋಳೆ ಯೋಜನೆಯನ್ನು ಈಗಾಗಲೆ ಮುಖ್ಯಮಂತ್ರಿಗಳು ಉಪಮುಖ್ಯಮಂತ್ರಿಗಳು ಸರ್ಕಾರದ ಸಚಿವರು ಶಾಸಕರು ಸೇರಿದಂತೆ ಹಲವರು ಸೇರಿ ಉದ್ಘಾಟನೆ ಮಾಡಿದ್ದೇವೆ.ಈ ಯೋಜನೆಯಲ್ಲಿ 18 ಟಿಎಂಸಿ ನೀರು ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ತಲುಪುವುದು ಕಡೆಯ ಹಂತವಾಗಿದೆ.ಸದ್ಯ ಮೊದಲ ಹಂತವಾಗಿ ವಾಣಿವಿಲಾಸ ಸಾಗರಕ್ಕೆ 18000 ಕ್ಯೂಸೆಕ್ಸ್ ನೀರು ತುಂಬಿಸಲಾಗುವುದು.ಮೊದಲನೆಯದಾಗಿ ಅರಸೀಕೆರೆ, ತುಮಕೂರಿಗೆ ನೀರು ಹರಿಸಲಾಗುವುದು.2027 ಇಸವಿಗೆ ಈ ಯೋಜನೆ ಸಂಪೂರ್ಣವಾಗಲಿದ್ದು ಈ ಯೋಜನೆಗೆ ಇನ್ನೂ ಅಗತ್ಯವಿರುವ 7000 ಕೋಟಿಗಳನ್ನು ಬಿಡುಗಡೆಗೊಳಿಸುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ.ತುಮಕೂರಿನ ಕೊರಟಗೆರೆ,ಮಧುಗಿರಿ,ಪಾವಗಡ ತಾಲ್ಲೂಕಿನ 69 ಕೆರೆಗಳಿಗೆ ನೀರು ಹರಿಯಲಿದ್ದು ಕೊರಟಗೆರೆ ತಾಲ್ಲೂಕಿನ 39 ಕೆರೆಗಳಿಗೆ ನೀರು ಬರಲಿದೆ ಎಂದರು.

ಇತ್ತಿಚೆಗೆ ಕೊರಟಗೆರೆ ಮಧುಗಿರಿ ರಾಜ್ಯ ಹೆದ್ದಾರಿಯಲ್ಲಿ ಆಗಿರುವ ಅಪಘಾತಕ್ಕೆ ಅತಿವೇಗ ಕಾರಣ ಎಂದು ತಿಳಿದು ಬಂದಿದ್ದು ನೊಂದ ಕುಟುಂಬಕ್ಕೆ ಸಾಂತ್ವಾನ ಹೇಳಲಾಗಿದೆ.ರಾಜ್ಯದಲ್ಲಿ ರಸ್ತೆ ಅಪಘಾತ ತಡೆಯಲು ವಿಶೇಷ ಕ್ರಮಗಳನ್ನು ಪೋಲೀಸ್ ಇಲಾಖೆ ತೆಗೆದುಕೊಂಡಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಅಪಘಾತ ಪ್ರಕರಣಗಳು ಅರ್ದದಷ್ಟು ಕಡಿಮೆಯಾಗಿದ್ದು ಇಲಾಖೆಯು ರಸ್ತೆ ಸಾರಿಗೆ ನಿಯಮ ಪಾಲಿಸದ್ದಿದರೆ ತಕ್ಷಣ ಕ್ರಮಕೈಗೊಳ್ಳುತ್ತಿದೆ. ನಮ್ಮ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೆಚ್ಚು ಅಪಘಾತವಾಗುತ್ತಿದ್ದು ಅದನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದರು.

—————————–ಶ್ರೀನಿವಾಸ್ ಕೊರಟಿಗೆರೆ

Leave a Reply

Your email address will not be published. Required fields are marked *

× How can I help you?