ತುಮಕೂರು-ಶ್ರೀಮಠದಲ್ಲಿ ಕಲಿತ ಪ್ರತಿಯೊಂದು ಜ್ಞಾನವನ್ನು ನಿಮ್ಮ ಭವಿಷ್ಯಕ್ಕೆ ದಾರಿದೀಪವಾಗಲಿದೆ-ಬೆಂಗಳೂರು ಆಕ್ಸ್ಫರ್ಡ್ ಕಾಲೇಜು ಆಫ್ ಹೋಟೆಲ್ ಮ್ಯಾನೇಜ್ಮೆಂಟ್ ಪ್ರಾಂಶುಪಾಲ ಡಾ|| ಎಂ.ದೇವೇಂದ್ರ

ತುಮಕೂರು: ಶ್ರೀಮಠದಲ್ಲಿ ಕಲಿತ ಪ್ರತಿಯೊಂದು ಜ್ಞಾನವನ್ನು ನಿಮ್ಮ ಭವಿಷ್ಯಕ್ಕೆ ದಾರಿದೀಪವಾಗಲಿದೆ ಎಂದು ಬೆಂಗಳೂರು ಆಕ್ಸ್ಫರ್ಡ್ ಕಾಲೇಜು ಆಫ್ ಹೋಟೆಲ್ ಮ್ಯಾನೇಜ್ಮೆಂಟ್ ಪ್ರಾಂಶುಪಾಲ ಡಾ|| ಎಂ.ದೇವೇಂದ್ರ ಹೇಳಿದರು.

ಕೊರಟಗೆರೆ ತಾಲ್ಲೂಕಿನ ಎಲೆರಾಂಪುರದಲ್ಲಿರುವ ಕುಂಚಿಟಿಗರ ಮಹಾ ಸಂಸ್ಥಾನ ಮಠದಲ್ಲಿ 4ನೇ ವರ್ಷದ 10 ದಿನಗಳ ಸಂಸ್ಕಾರ ಶಿಬಿರದಲ್ಲಿ ಪಾಲ್ಗೊಂಡು, ಮಾತನಾಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕುಣಿಗಲ್‌ನ ದೊಂಬರಹಟ್ಟಿಯಲ್ಲಿನ ಶ್ರೀ ಶನಿಮಹಾತ್ಮ ದೇವಸ್ಥಾನದ ಸ್ವಾಮೀಜಿ ಆನಂದ್ ಗುರೂಜಿಯವರು ಮಾತನಾಡಿ, ಇಂತಹ ಶಿಬಿರಗಳ ಮೂಲಕ ಹಳ್ಳಿಗಾಡಿನ ಮಕ್ಕಳು ಭಗವದ್ಗೀತೆಯ ಪ್ರಾರ್ಥನಾ ಶ್ಲೋಕಗಳು, ಸಂಸ್ಕೃತ ಭಾಷೆಯು ಏಕಾಗ್ರತೆ ಮತ್ತು ಒಳ ಮನಸ್ಸಿನಿಂದ ಸ್ಪಷ್ಟವಾಗಿ ಉಚ್ಚರಿಸುತ್ತಿರುವುದನ್ನು ನೋಡಿದರೆ ಶ್ರೀಮಠವು ಸಂಸ್ಕೃತಿಯ ಕೇಂದ್ರ ಸ್ಥಾನವಾಗಿ ರೂಪಗೊಳ್ಳುತ್ತಿರುವುದು ಹರ್ಷದಾಯಕವಾಗಿದೆ. ಇಲ್ಲಿ ಕಲಿಯುವ ವಿಚಾರಗಳು ಜೀವನ ಪೂರ್ತಿಯಾಗಿ ಸ್ಮರಿಸಬೇಕು ಎಂದರು.

ಶ್ರೀ ಮಠದಲ್ಲಿ ಕಲಿತ ಪ್ರತಿಯೊಂದು ಜ್ಞಾನವನ್ನು ನಿಮ್ಮ ಭವಿಷ್ಯಕ್ಕೆ ನಿಮ್ಮ ಜೀವನ ಬದಲಾಯಿಸುವಂತಹ ಶಕ್ತಿ ಇದೆ, ಅತ್ಯಂತ ಅಮೂಲ್ಯವಾದ ಜ್ಞಾನವನ್ನು ಸಂಪಾದನೆ ಮಾಡಿದ್ದೀರಿ, ಇದರಿಂದ ಶ್ರೀಮಠದ ಸಾಮಾಜಿಕ ಧಾರ್ಮಿಕ ಸೇವೆ ಸಾರ್ಥಕ ಗೊಳ್ಳುತ್ತದೆ ಎಂದು ಇಡೀ ಜಗತ್ತಿಗೆ ತೋರಿಸಿ ಕೊಟ್ಟಿದ್ದೀರಿ ಎಂದು ಎಲೆರಾಂಪುರ ಕುಂಚಿಟಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯರಾದ ಹನುಮಂತನಾಥ ಮಹಾಸ್ವಾಮೀಜಿಯವರು ಆಶೀರ್ವಚನ ನೀಡಿದರು.

ಕಾರ್ಯಕ್ರಮದಲ್ಲಿ ಡಾ|| ಸಿ.ನಂಜುಂಡಯ್ಯ, ನಾಗರಾಜು, ಡಯಟ್ ಕಾಲೇಜಿನ ಹಿರಿಯ ಉಪನ್ಯಾಸಕರಾದ ಡಾ|| ಶ್ರೀನಿವಾಸ ರೆಡ್ಡಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು ಶಿಬಿರದ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

× How can I help you?