ಚಿಕ್ಕಮಗಳೂರು;ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆಯಲ್ಲಿ ಸೆಪ್ಟೆಂಬರ್ 20 ನೇ ತಾರೀಖು ಶುಕ್ರವಾರದಂದು ವಿಶೇಷ ನೇತ್ರರೋಗ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ಶಿಬಿರವು ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದ್ದು,ಪರಿಪೂರ್ಣ ಕಣ್ಣಿನ ಆರೋಗ್ಯ ರಕ್ಷಣೆಯ ದೃಷ್ಠಿಯಿಂದ ಶಿಬಿರವನ್ನು ನಡೆಸಲಾಗುವುದು.
ಕಣ್ಣಿನ ನರ ದೌರ್ಬಲ್ಯ ಇದಕ್ಕೆ 2000 ರೂಪಾಯಿ ಮೌಲ್ಯದ ಸ್ಕ್ಯಾನಿಂಗ್ ಉಚಿತವಾಗಿ ಮಾಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ 08262 200372 ದೂರವಾಣಿಯನ್ನು ಸಂಪರ್ಕಿಸಬಹುದು.