ಕೊರಟಗೆರೆ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದ್ವೀತಿಯ ದರ್ಜೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದ ಚಂದ್ರಶೇಖರ್ ಕೆ.ಆರ್ ಅವರು ಏ.29ರಂದು ವೃತ್ತಿಯಿಂದ ವಯೋನಿವೃತ್ತಿ ಹೊಂದಿದ್ದು 28ವರ್ಷಗಳ ನಿರಂತರ ಸೇವೆಗೆ ಕಾಲೇಜಿನ ಪ್ರಾಶುಂಪಾಲರು ಅಭಿನಂದನೆ ಸಲ್ಲಿಸಿ ಬೀಳ್ಕೋಡುಗೆ ನೀಡಿದರು.
ನಿವೃತ್ತ ಚಂದ್ರಶೇಖರ್ ಕೆ.ಆರ್ ಅವರು 3ಏಪ್ರಿಲ್1965ರಲ್ಲಿ ಜನಿಸಿದ್ದು, ಎಸ್‍ಎಸ್‍ಎಲ್‍ಸಿ ಆಧಾರದ ಮೇಲೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸಿ ಉತ್ತೀರ್ಣರಾಗಿ ಗುಬ್ಬಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 22 ಫೆಬ್ರವರಿ1997 ವೃತ್ತಿ ಜೀವನ ಆರಂಭಿಸಿದ್ದು 2000ರವರೆಗೆ ಪರಿಚಾರಕರಾಗಿ ಸೇವೆ ಸಲ್ಲಿಸಿ, 2000ದಿಂದ 2005ರವರೆಗೆ ತುಮಕೂರಿನ ಸರ್ಕಾರಿ ಕಲಾ ಕಾಲೇಜಿನಲ್ಲಿ ಪರಿಚಾರಕರಾಗಿ ಸೇವೆ ಸಲ್ಲಿಸಿದರು.

ನಂತರ 2005ರಿಂದ 2016ರವರೆಗೆ ಕೊರಟಗೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪರಿಚಾರಕರಾಗಿ, 2016ರಿಂದ 2020ರವರೆಗೆ ಅಟೆಂಡರ್ ಆಗಿ, 2020ರಿಂದ 29 ಏಪ್ರಿಲ್ 2025ರವರೆಗೆ ದ್ವೀತಿಯ ದರ್ಜೆ ಸಹಾಯಕರಾಗಿ ಕಾರ್ಯನಿರ್ವಹಿಸಿದ್ದು, ಸುಮಾರು 28ವರ್ಷಗಳ ಸರ್ಕಾರಿ ನೌಕರರಾಗಿ ಸೇವೆ ಸಲ್ಲಿಸಿ ಇತ್ತೀಚಿಗಷ್ಟೇ ವೃತ್ತಿಯಿಂದ ವಯೋನಿವೃತ್ತಿ ಹೊಂದಿದ್ದು ಕಾಲೇಜಿನ ನೆನಪುಗಳ ಬಗ್ಗೆ ಕಾರ್ಯಕ್ರಮದಲ್ಲಿ ಮೆಲುಕು ಹಾಕಿದರು.
ಕಾಲೇಜಿನ ಪ್ರಾಶುಂಪಾಲ ಈರಪ್ಪನಾಯಕ ಮಾತನಾಡಿ, ಕರ್ತವ್ಯ ನಿಷ್ಠೆ ಮತ್ತು ಪ್ರಮಾಣಿಕತೆಯಿಂದ ದುಡಿದರೆ ಸರ್ಕಾರಿ ನೌಕರ ತನ್ನ ವೃತ್ತಿ ಬದುಕಿನಲ್ಲಿ ಯಶಸ್ಸು ಗಳಿಸಲು ಸಾಧ್ಯ. ಚಂದ್ರಶೇಖರ್ ಕೆ.ಆರ್ ರವರು ಸರ್ಕಾರಿ ನೌಕರರಾಗಿ ಹಲವಾರು ವರ್ಷಗಳಿಂದ ಅತ್ಯುತ್ತುಮವಾಗಿ ಕಾರ್ಯನಿರ್ವಹಿಸಿದ್ದು, ಸುಮಾರು 28ವರ್ಷಗಳ ನಿರಂತರ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ್ದು, ಕರ್ತವ್ಯದ ವೇಳೆ ಎಲ್ಲಾ ನೌಕರರ ಅಚ್ಚುಮೆಚ್ಚಿನವಾರಗಿ ತಮ್ಮ ಜವಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಈ ಕಾರ್ಯಕ್ರಮದಲ್ಲಿ ನಿವೃತ್ತ ನೌಕರರ ಸೇವಾ ಅವಧಿಯ ಪ್ರಾಶುಂಪಾಲರಾದ ಡಾ.ಲೀಲಾವತಿ, ಡಾ.ಬಾಲಪ್ಪ, ಡಾ.ರಾಜಾ ರೆಡ್ಡಿ, ಕೆಯುಡಬ್ಲ್ಯೂಜೆ ಅಧ್ಯಕ್ಷ ಕೆ.ವಿ ಪುರುಷೋತ್ತಮ್, ಎನ್.ಪದ್ಮನಾಭ್, ಚಿದಂಬರಂ, ಕಾಲೇಜಿನ ಸ್ಥಳೀಯ ಘಟಕದ ಕಾರ್ಯದರ್ಶಿ ಡಾ.ರಮೇಶ್, ಖಚಾಂಚಿ ಡಾ.ಚೈತಾಲಿ, ಡಾ.ಕೆ.ಎಸ್ ಸಿದ್ದಗಂಗಯ್ಯ, ಶಿವರಾಮಯ್ಯ, ಡಾ.ರೇಣುಕಾ, ಡಾ.ಅಮಿತಾ, ರೂಪ, ಎಂ.ಎನ್ ಮುನಿರಾಜು, ಅಧೀಕ್ಷಕರಾದ ಜಯರಾಮರೆಡ್ಡಿ, ಸರಳ, ಜ್ಞಾನಮಣಿ, ಗಂಗಮ್ಮ, ಲಲಿತಾ, ಚಂದ್ರಯ್ಯ ಹಾಜರಿದ್ದರು.
- ನರಸಿಂಹಯ್ಯ ಕೋಳಾಲ