Vibrant Mysore News https://vibrantmysorenews.com/ Vibrant Mysore News Wed, 02 Apr 2025 15:12:30 +0000 en-US hourly 1 https://wordpress.org/?v=6.7.2 https://i0.wp.com/vibrantmysorenews.com/wp-content/uploads/2024/08/cropped-vibrantmysorenews-logo-1.png?fit=32%2C32&ssl=1 Vibrant Mysore News https://vibrantmysorenews.com/ 32 32 183513056 ತುಮಕೂರು – ಕಳ್ಳಂಬೆಳ್ಳ- ಗ್ರಾಮಕ್ಕೆ- ಜಿಲ್ಲಾಧಿಕಾರಿ – ಭೇಟಿ https://vibrantmysorenews.com/tumkur-deputy-commissioner-visits-kallambella-village/ https://vibrantmysorenews.com/tumkur-deputy-commissioner-visits-kallambella-village/#respond Wed, 02 Apr 2025 15:12:27 +0000 https://vibrantmysorenews.com/?p=14167 ತುಮಕೂರು : ಜಿಲ್ಲೆಯ ಶಿರಾ ತಾಲೂಕಿನ ಕಳ್ಳಂಬೆಳ್ಳ ಗ್ರಾಮಕ್ಕೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಬುಧವಾರ ಭೇಟಿ ನೀಡಿ, ಅಲ್ಲಿನ ವಿವಿಧ ಸಮಸ್ಯೆಗಳ ಕುರಿತು ಪರಿಶೀಲನೆ ನಡೆಸಿದರು. ಕಳ್ಳಂಬೆಳ್ಳ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ ಅವರು, ಮೂಲ ಸೌಕರ್ಯಗಳ ಸ್ಥಿತಿಗತಿಯನ್ನು…

The post ತುಮಕೂರು – ಕಳ್ಳಂಬೆಳ್ಳ- ಗ್ರಾಮಕ್ಕೆ- ಜಿಲ್ಲಾಧಿಕಾರಿ – ಭೇಟಿ appeared first on Vibrant Mysore News.

]]>


ತುಮಕೂರು : ಜಿಲ್ಲೆಯ ಶಿರಾ ತಾಲೂಕಿನ ಕಳ್ಳಂಬೆಳ್ಳ ಗ್ರಾಮಕ್ಕೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಬುಧವಾರ ಭೇಟಿ ನೀಡಿ, ಅಲ್ಲಿನ ವಿವಿಧ ಸಮಸ್ಯೆಗಳ ಕುರಿತು ಪರಿಶೀಲನೆ ನಡೆಸಿದರು.

ಕಳ್ಳಂಬೆಳ್ಳ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ ಅವರು, ಮೂಲ ಸೌಕರ್ಯಗಳ ಸ್ಥಿತಿಗತಿಯನ್ನು ಪರಿಶೀಲಿಸಿದರು. ಅಲ್ಲದೆ, ಮಕ್ಕಳಿಗೆ ನೀಡಲಾಗುತ್ತಿರುವ ವ್ಯಾಕ್ಸಿನೇಷನ್ ಮತ್ತು ಕುಡಿಯುವ ನೀರಿನ ವ್ಯವಸ್ಥೆಯ ಬಗ್ಗೆ ಮಾಹಿತಿ ಪಡೆದ ಅವರು, ಅಂಗನವಾಡಿ ಕೇಂದ್ರದಲ್ಲಿ ಮೂಲಭೂತ ಸೌಕರ್ಯಗಳ ಕುರಿತು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಳ್ಳಂಬೆಳ್ಳ ಕೆನರಾ ಬ್ಯಾಂಕ್‌ನ ಕೆಸಿಸಿ ಸಾಲ ಪದ್ಧತಿ ಯೋಜನೆಯ ಕುರಿತು ರೈತರಿಗೆ ಸಾಲ ನೀಡಿರುವುದರ ಬಗ್ಗೆ ಪರಿಶೀಲನೆ ನಡೆಸಿದರು. ಪ್ರಾಥಮಿಕ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ, ರೈತರಿಗೆ ಕೃಷಿ ಇಲಾಖೆಯಿಂದ ವಿತರಿಸುವ ಪರಿಕರ ಹಾಗೂ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ನೀಡುವುದಕ್ಕೆ ತೆಗೆದುಕೊಂಡ ಕ್ರಮಗಳ ಬಗ್ಗೆ ಮಾಹಿತಿ ಪಡೆದರು.

ಕಳ್ಳಂಬೆಳ್ಳ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಪಿಡಿಒ ಕಚೇರಿಯಲ್ಲಿ ಪಿಎಂ ವಿಶ್ವಕರ್ಮ ಯೋಜನೆಯಡಿ ನೋಂದಣಿಯಾಗಿರುವ ಫಲಾನುಭವಿಗಳ ಮಾಹಿತಿಯನ್ನು ಪಡೆದರು.



ನಂತರ ಶಿರಾ ಪಟ್ಟಣದಲ್ಲಿ ಪಿಎಂ ವಿಶ್ವಕರ್ಮ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಕಾರ್ಯಾಚರಣೆಯನ್ನು ವೀಕ್ಷಿಸಿದರು. ಶಿರಾ ಪುರಸಭೆಗೆ ಭೇಟಿ ನೀಡಿ ಪಿಎಂ ಸ್ವಾನಿಧಿ ಯೋಜನೆಯ ಫಲಾನುಭವಿಗಳ ಮಾಹಿತಿ ಪಡೆದು ಪರಿಶೀಲಿಸಿದರು.
ಬಳಿಕ ಬಾಳೇನಹಳ್ಳಿ ಗ್ರಾಮದ ರಾಮಚಂದ್ರಪ್ಪ ಅವರ ಜಮೀನಿಗೆ ಭೇಟಿ ನೀಡಿ ಸಮಗ್ರ ಕೃಷಿ ಮಾಡುತ್ತಿರುವುದನ್ನು ವೀಕ್ಷಿಸಿ, ರೈತರೊಂದಿಗೆ ಸಂವಾದ ನಡೆಸಿದರು.

ಈ ಸಂದರ್ಭದಲ್ಲಿ ಶಿರಾ ತಾಲೂಕಿನ ತಹಶೀಲ್ದಾರ್ ಸಚ್ಚಿದಾನಂದ ಕುಚನೂರು, ಕೃಷಿ ಇಲಾಖೆ ಉಪನಿರ್ದೇಶಕ ಚಂದ್ರಶೇಖರ್, ಸಹಾಯಕ ಕೃಷಿ ನಿರ್ದೇಶಕ ನಾಗರಾಜು, ಮತ್ತಿತರ ಅಧಿಕಾರಿಗಳು ಇದ್ದರು.

The post ತುಮಕೂರು – ಕಳ್ಳಂಬೆಳ್ಳ- ಗ್ರಾಮಕ್ಕೆ- ಜಿಲ್ಲಾಧಿಕಾರಿ – ಭೇಟಿ appeared first on Vibrant Mysore News.

]]>
https://vibrantmysorenews.com/tumkur-deputy-commissioner-visits-kallambella-village/feed/ 0 14167
ತುಮಕೂರು-ವಿವಿಧ-ತರಬೇತಿಗಾಗಿ-ಅರ್ಜಿ-ಆಹ್ವಾನ https://vibrantmysorenews.com/tumkur-various-training-application-invitation/ https://vibrantmysorenews.com/tumkur-various-training-application-invitation/#respond Wed, 02 Apr 2025 15:07:00 +0000 https://vibrantmysorenews.com/?p=14165 ವೃತ್ತಿಪರ ತರಬೇತಿಗಾಗಿ ಇಂಜಿನಿಯರಿಂಗ್ ಪದವೀಧರರಿಂದ ಅರ್ಜಿ ಆಹ್ವಾನ ತುಮಕೂರು : IISc, IIT & NIT ಸಂಸ್ಥೆಗಳ ಮೂಲಕ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅಂಡ್ ಮೆಷಿನ್ ಲರ್ನಿಂಗ್ ವೃತ್ತಿಪರ ತರಬೇತಿ ಕೋರ್ಸುಗಳಲ್ಲಿ ಭಾಗವಹಿಸುವ ಪರಿಶಿಷ್ಟ ಪಂಗಡದ ಇಂಜಿನಿಯರಿಂಗ್ ಪದವೀಧರರಿಗೆ ಶಿಷ್ಯವೇತನ/ತರಬೇತಿ ನೀಡಲು ಅರ್ಜಿ…

The post ತುಮಕೂರು-ವಿವಿಧ-ತರಬೇತಿಗಾಗಿ-ಅರ್ಜಿ-ಆಹ್ವಾನ appeared first on Vibrant Mysore News.

]]>

ವೃತ್ತಿಪರ ತರಬೇತಿಗಾಗಿ ಇಂಜಿನಿಯರಿಂಗ್ ಪದವೀಧರರಿಂದ ಅರ್ಜಿ ಆಹ್ವಾನ

ತುಮಕೂರು : IISc, IIT & NIT ಸಂಸ್ಥೆಗಳ ಮೂಲಕ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅಂಡ್ ಮೆಷಿನ್ ಲರ್ನಿಂಗ್ ವೃತ್ತಿಪರ ತರಬೇತಿ ಕೋರ್ಸುಗಳಲ್ಲಿ ಭಾಗವಹಿಸುವ ಪರಿಶಿಷ್ಟ ಪಂಗಡದ ಇಂಜಿನಿಯರಿಂಗ್ ಪದವೀಧರರಿಗೆ ಶಿಷ್ಯವೇತನ/ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸುವವರು ಕರ್ನಾಟಕ ರಾಜ್ಯದ ಮೂಲ ನಿವಾಸಿಯಾಗಿದ್ದು, ರಾಜ್ಯ/ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದಿರುವ ವಿಶ್ವವಿದ್ಯಾನಿಲಯಗಳಲ್ಲಿè BE/B.tech ಕೋರ್ಸುಗಳಲ್ಲಿ ವ್ಯಾಸಂಗ ಮಾಡಿರಬೇಕು ಹಾಗೂ ಕನಿಷ್ಠ ಶೇ.55ರಷ್ಟು ಅಂಕ ಗಳಿಸಿರಬೇಕು. ಈ ಯೋಜನೆಯಡಿ ಶಿಷ್ಯ ವೇತನ ಪಡೆಯಲು ಪದವಿ ಪೂರೈಸಿದ 5 ವರ್ಷದೊಳಗೆ ಅರ್ಜಿ ಸಲ್ಲಿಸತಕ್ಕದ್ದು. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗೆ ನಿಗಧಿತ ನಮೂನೆಯಲ್ಲಿ ಸಕ್ಷಮ ಪ್ರಾಧಿಕಾರದಿಂದ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆದಿರಬೇಕು. ಕುಟುಂಬದ ವಾರ್ಷಿಕ ಆದಾಯ 5 ಲಕ್ಷ ರೂ.ಗಳು ಮೀರಿರಬಾರದು.

ಆಸಕ್ತರು ಏಪ್ರಿಲ್ 11 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ನಮೂನೆ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು ಗ್ರೇಡ್-೧, ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾ ಪಂಚಾಯತ್ ಕಚೇರಿ ಹತ್ತಿರ, ತುಮಕೂರು ತಾಲ್ಲೂಕು ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.


ಅಣಬೆ ಬೇಸಾಯ ತರಬೇತಿಗೆ ಅರ್ಜಿ ಆಹ್ವಾನ

ತುಮಕೂರು : ಎಸ್‌ಬಿಐ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯು ಗ್ರಾಮೀಣ ಭಾಗದ ನಿರುದ್ಯೋಗಿ ಯುವಕ/ಯುವತಿಯರಿಗಾಗಿ ಉಚಿತ ಊಟ ಹಾಗೂ ವಸತಿಯೊಂದಿಗೆ 10 ದಿನಗಳ ಅಣಬೆ ಬೇಸಾಯ ತರಬೇತಿ ನೀಡಲು ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.
ಜಿಲ್ಲಾ ವ್ಯಾಪ್ತಿಯ ಗ್ರಾಮೀಣ ಭಾಗದ ಕನ್ನಡ ಓದಲು ಹಾಗೂ ಬರೆಯಲು ಬರುವ 18 ರಿಂದ 45 ವಯೋಮಾನದೊಳಗಿನ ಆಸಕ್ತ ಅಭ್ಯರ್ಥಿಗಳು ಖುದ್ದಾಗಿ ಅಥವಾ ಅಂಚೆ ಮೂಲಕ ಏಪ್ರಿಲ್ ೧೨ರೊಳಗಾಗಿ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ, ಸಿಂಗನಹಳ್ಳಿ ಕಾಲೋನಿ, ಹಿರೇಹಳ್ಳಿ ಕೈಗಾರಿಕಾ ಪ್ರದೇಶ, ತುಮಕೂರು ನಿರ್ಮಿತಿ ಕೇಂದ್ರದ ಹತ್ತಿರ, ತುಮಕೂರು-572104 ಅಥವಾ ದೂ.ವಾ.ಸಂ.0816-2243386,, ಮೊ.ಸಂ.9738351048/ 9663680001ನ್ನು ಸಂಪರ್ಕಿಸಬೇಕೆAದು ಸಂಸ್ಥೆಯ ನಿರ್ದೇಶಕ ವಾದಿರಾಜ್ ಕೆ.ಎನ್. ತಿಳಿಸಿದ್ದಾರೆ.


ರುಡ್‌ಸೆಟ್ ಸಂಸ್ಥೆ : ವಿವಿಧ ತರಬೇತಿಗಾಗಿ ಅರ್ಜಿ ಆಹ್ವಾನ

ತುಮಕೂರು : ರುಡ್‌ಸೆಟ್ ಸಂಸ್ಥೆಯ ವತಿಯಿಂದ ಮೇ 5 ರಿಂದ ಉಚಿತ ಎಂಬ್ರಾಯ್ಡರಿ, ಆರಿ ವರ್ಕ್ ಮತ್ತು ಫ್ಯಾಬ್ರಿಕ್ ಪೇಟಿಂಗ್ ಕುರಿತ 30 ದಿನಗಳ ತರಬೇತಿ ನೀಡಲು ಜಿಲ್ಲೆಯ ಗ್ರಾಮೀಣ ಆಸಕ್ತ ನಿರುದ್ಯೋಗಿ ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸುವವರು 18 ರಿಂದ 45 ವರ್ಷ ವಯೋಮಾನದವರಾಗಿದ್ದು, ಕನ್ನಡ ಭಾಷೆ ಓದಲು ಮತ್ತು ಬರೆಯಲು ಬಲ್ಲವರಾಗಿರಬೇಕು. ಅಭ್ಯರ್ಥಿಗಳು ಆಧಾರ್ ಕಾರ್ಡ್ನ್ನು ಹೊಂದಿರಬೇಕು ಹಾಗೂ ಬಿಪಿಎಲ್ ಕಾರ್ಡ್ ಅನ್ನು ಹೊಂದಿರುವ ಗ್ರಾಮೀಣ ಪ್ರದೇಶದ ಗ್ರಾಮೀಣ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.

ತರಬೇತಿಯು ಕಡ್ಡಾಯವಾಗಿ ವಸತಿಯುತವಾಗಿದ್ದು, ತರಬೇತಿಯ ಅವಧಿಯಲ್ಲಿ ಉಚಿತ ಊಟ ಮತ್ತು ವಸತಿ ನೀಡಲಾಗುವುದು. ತರಬೇತಿ ಪೂರ್ಣಗೊಂಡ ನಂತರ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ಪ್ರಮಾಣಪತ್ರವನ್ನು ವಿತರಿಸಲಾಗುವುದು. ಅರ್ಜಿ ಸಲ್ಲಿಸಲು ಏಪ್ರಿಲ್ 19 ಕೊನೆಯ ದಿನವಾಗಿದೆ.

ಅರ್ಜಿ ಹಾಗೂ ಹೆಚ್ಚಿನ ಮಾಹಿತಿಗಾಗಿ ರುಡ್‌ಸೆಟ್ ಸಂಸ್ಥೆ, ಅರಿಶಿನಕುಂಟೆ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮೊಬೈಲ್ ಸಂಖ್ಯೆ: 9380220884, 9380162042, 9740982585ನ್ನು ಸಂಪರ್ಕಿಸಬಹುದಾಗಿದೆ ಎಂದು ರುಡ್‌ಸೆಟ್ ಸಂಸ್ಥೆ ಬೆಂಗಳೂರು ಶಾಖೆಯ ನಿರ್ದೇಶಕ ರವಿಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


The post ತುಮಕೂರು-ವಿವಿಧ-ತರಬೇತಿಗಾಗಿ-ಅರ್ಜಿ-ಆಹ್ವಾನ appeared first on Vibrant Mysore News.

]]>
https://vibrantmysorenews.com/tumkur-various-training-application-invitation/feed/ 0 14165
ಮೈಸೂರು-“ಚಿಂತನ” – ವಾರ್ಷಿಕ-ವಿಶೇಷ-ಸಂಚಿಕೆ-ಬಿಡುಗಡೆ https://vibrantmysorenews.com/mysore-chinthan-annual-special-issue-release/ https://vibrantmysorenews.com/mysore-chinthan-annual-special-issue-release/#respond Wed, 02 Apr 2025 15:00:36 +0000 https://vibrantmysorenews.com/?p=14162 ಮೈಸೂರು- ನಗರದ ಕೃಷ್ಣಮೂರ್ತಿಪುರಂನಲ್ಲಿರುವ ಶಾರದಾವಿಲಾಸ ಪದವಿಪೂರ್ವ ಕಾಲೇಜಿನ ವಾರ್ಷಿಕ ವಿಶೇಷ ಸಂಚಿಕೆ “ಚಿಂತನ” ಪುಸ್ತಕವನ್ನು ಇಂದು (೦೨.೦೪.೨೦೨೫) ಸಂಸ್ಥೆಯ ಆವರಣದಲ್ಲಿ ಬಿಡುಗಡೆಗೊಳಿಸಲಾಯಿತು. ಈ ವೇಳೆ ಸಂಸ್ಥೆಯ ಗೌರವ ಕಾರ್ಯದರ್ಶಿ ಆರ್.ದಿನೇಶ್, ಆಡಳಿತ ಮಂಡಳಿ ಸದಸ್ಯರಾದ ಶರತ್ ಎಸ್ ಭಾರಧ್ವಾಜ್, ಶೈಕ್ಷಣಿಕ ಸಲಹೆಗಾರರಾದ…

The post ಮೈಸೂರು-“ಚಿಂತನ” – ವಾರ್ಷಿಕ-ವಿಶೇಷ-ಸಂಚಿಕೆ-ಬಿಡುಗಡೆ appeared first on Vibrant Mysore News.

]]>

ಮೈಸೂರು- ನಗರದ ಕೃಷ್ಣಮೂರ್ತಿಪುರಂನಲ್ಲಿರುವ ಶಾರದಾವಿಲಾಸ ಪದವಿಪೂರ್ವ ಕಾಲೇಜಿನ ವಾರ್ಷಿಕ ವಿಶೇಷ ಸಂಚಿಕೆ “ಚಿಂತನ” ಪುಸ್ತಕವನ್ನು ಇಂದು (೦೨.೦೪.೨೦೨೫) ಸಂಸ್ಥೆಯ ಆವರಣದಲ್ಲಿ ಬಿಡುಗಡೆಗೊಳಿಸಲಾಯಿತು.

ಈ ವೇಳೆ ಸಂಸ್ಥೆಯ ಗೌರವ ಕಾರ್ಯದರ್ಶಿ ಆರ್.ದಿನೇಶ್, ಆಡಳಿತ ಮಂಡಳಿ ಸದಸ್ಯರಾದ ಶರತ್ ಎಸ್ ಭಾರಧ್ವಾಜ್, ಶೈಕ್ಷಣಿಕ ಸಲಹೆಗಾರರಾದ ಡಾ.ಸತ್ಯನಾರಾಯಣ, ಆಡಳಿತಾಧಿಕಾರಿ ಶ್ರೀಕಾಂತ್‌ಬೇವೂರ್, ಪ್ರಾಂಶುಪಾಲರಾದ ಸಿ.ಕೆ.ಅಶೋಕ್ ಕುಮಾರ್, ಚಿಂತನ ಸಂಚಿಕೆಯ ಸಂಪಾದಕರಾದ ಮನೋಜ್ ಕುಮಾರ್ ಎಸ್, ಉಪನ್ಯಾಸಕರಾದ ರಾಜೇಂದ್ರ ಪ್ರಸಾದ್ ಹೊನ್ನಲಗೆರೆ ರವರನ್ನು ಚಿತ್ರದಲ್ಲಿ ಕಾಣಬಹುದು.

The post ಮೈಸೂರು-“ಚಿಂತನ” – ವಾರ್ಷಿಕ-ವಿಶೇಷ-ಸಂಚಿಕೆ-ಬಿಡುಗಡೆ appeared first on Vibrant Mysore News.

]]>
https://vibrantmysorenews.com/mysore-chinthan-annual-special-issue-release/feed/ 0 14162
ಚಿಕ್ಕಮಗಳೂರು-ಮುಖ್ಯಮಂತ್ರಿಗಳಿಂದ-ಚಿನ್ನದ-ಪದಕ-ವಿತರಣೆ https://vibrantmysorenews.com/chikmagalur-chief-ministers-distribute-gold-medals/ https://vibrantmysorenews.com/chikmagalur-chief-ministers-distribute-gold-medals/#respond Wed, 02 Apr 2025 14:57:07 +0000 https://vibrantmysorenews.com/?p=14159 ಚಿಕ್ಕಮಗಳೂರು- ಬೆಂಗಳೂರಿನ ಕೆ.ಎಸ್.ಆರ್.ಪಿ. ಪೆರೇಡ್ ಮೈದಾನದಲ್ಲಿ ತಾಲ್ಲೂ ಕಿನ ಚಿಕ್ಕಗೌಜ ಗ್ರಾಮದ ನಿವಾಸಿ ಪೊಲೀಸ್ ಸಬ್‌ಇನ್ಸ್ಪೆಕ್ಟರ್ ಸಿ.ಎಸ್.ಸುರೇಶ್ ಅವರ ಸೇವೆ ಗುರುತಿಸಿ ಮುಖ್ಯಮಂತ್ರಿಗಳು ಚಿನ್ನದ ಪದಕ ನೀಡಿ ಗೌರವಿಸಿದ್ದಾರೆ. ಈ ಸಂದರ್ಭದಲ್ಲಿ ಗೃಹ ಸಚಿವ ಜಿ.ಪರಮೇಶ್ವರ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು…

The post ಚಿಕ್ಕಮಗಳೂರು-ಮುಖ್ಯಮಂತ್ರಿಗಳಿಂದ-ಚಿನ್ನದ-ಪದಕ-ವಿತರಣೆ appeared first on Vibrant Mysore News.

]]>


ಚಿಕ್ಕಮಗಳೂರು- ಬೆಂಗಳೂರಿನ ಕೆ.ಎಸ್.ಆರ್.ಪಿ. ಪೆರೇಡ್ ಮೈದಾನದಲ್ಲಿ ತಾಲ್ಲೂ ಕಿನ ಚಿಕ್ಕಗೌಜ ಗ್ರಾಮದ ನಿವಾಸಿ ಪೊಲೀಸ್ ಸಬ್‌ಇನ್ಸ್ಪೆಕ್ಟರ್ ಸಿ.ಎಸ್.ಸುರೇಶ್ ಅವರ ಸೇವೆ ಗುರುತಿಸಿ ಮುಖ್ಯಮಂತ್ರಿಗಳು ಚಿನ್ನದ ಪದಕ ನೀಡಿ ಗೌರವಿಸಿದ್ದಾರೆ. ಈ ಸಂದರ್ಭದಲ್ಲಿ ಗೃಹ ಸಚಿವ ಜಿ.ಪರಮೇಶ್ವರ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

  • ಸುರೇಶ್‌ ಎನ್.

The post ಚಿಕ್ಕಮಗಳೂರು-ಮುಖ್ಯಮಂತ್ರಿಗಳಿಂದ-ಚಿನ್ನದ-ಪದಕ-ವಿತರಣೆ appeared first on Vibrant Mysore News.

]]>
https://vibrantmysorenews.com/chikmagalur-chief-ministers-distribute-gold-medals/feed/ 0 14159
ಚಿಕ್ಕಮಗಳೂರು- ಗ್ರಾ.ಪಂ.ಸಿಬ್ಬಂದಿಗಳಿಗೆ-ಆರೋಗ್ಯ-ವಿಮೆ-ಒದಗಿಸಿ- ಲೋಕಸಭಾ-ಸದಸ್ಯ- ಕೋಟಾ-ಶ್ರೀನಿವಾಸ್-ಪೂಜಾರಿ-ಭೇಟಿ-ಮನವಿ https://vibrantmysorenews.com/chikkamagaluru-gram-panchayat-staff-provide-health-insurance-lok-sabha-member-kota-srinivas-pujari-meet-appeal/ https://vibrantmysorenews.com/chikkamagaluru-gram-panchayat-staff-provide-health-insurance-lok-sabha-member-kota-srinivas-pujari-meet-appeal/#respond Wed, 02 Apr 2025 14:54:15 +0000 https://vibrantmysorenews.com/?p=14154 ಚಿಕ್ಕಮಗಳೂರು:- ಗ್ರಾಮ ಪಂಚಾಯಿತಿ ನೌಕರರಿಗೆ ಆರೋಗ್ಯವಿಮೆ ಸೌಲಭ್ಯ ನೀಡಬೇಕು ಎಂದು ಕೇಂದ್ರ ಕಾರ್ಮಿಕ ಸಚಿವ ಡಾ.ಮನ್ಸುಕ್ ಮಾಂಡವೀಯ ಅವರನ್ನು ಉಡುಪಿ-ಚಿಕ್ಕಮಗಳೂರು ಲೋಕ ಸಭಾ ಸದಸ್ಯ ಕೋಟಾ ಶ್ರೀನಿವಾಸ್ ಪೂಜಾರಿ ಭೇಟಿ ಮಾಡಿ ಮನವಿ ಸಲ್ಲಿಸಿದರು. ದೇಶದಲ್ಲಿ 2.55 ಲಕ್ಷ, ರಾಜ್ಯದಲ್ಲಿ 5995…

The post ಚಿಕ್ಕಮಗಳೂರು- ಗ್ರಾ.ಪಂ.ಸಿಬ್ಬಂದಿಗಳಿಗೆ-ಆರೋಗ್ಯ-ವಿಮೆ-ಒದಗಿಸಿ- ಲೋಕಸಭಾ-ಸದಸ್ಯ- ಕೋಟಾ-ಶ್ರೀನಿವಾಸ್-ಪೂಜಾರಿ-ಭೇಟಿ-ಮನವಿ appeared first on Vibrant Mysore News.

]]>

ಚಿಕ್ಕಮಗಳೂರು:- ಗ್ರಾಮ ಪಂಚಾಯಿತಿ ನೌಕರರಿಗೆ ಆರೋಗ್ಯವಿಮೆ ಸೌಲಭ್ಯ ನೀಡಬೇಕು ಎಂದು ಕೇಂದ್ರ ಕಾರ್ಮಿಕ ಸಚಿವ ಡಾ.ಮನ್ಸುಕ್ ಮಾಂಡವೀಯ ಅವರನ್ನು ಉಡುಪಿ-ಚಿಕ್ಕಮಗಳೂರು ಲೋಕ ಸಭಾ ಸದಸ್ಯ ಕೋಟಾ ಶ್ರೀನಿವಾಸ್ ಪೂಜಾರಿ ಭೇಟಿ ಮಾಡಿ ಮನವಿ ಸಲ್ಲಿಸಿದರು.

ದೇಶದಲ್ಲಿ 2.55 ಲಕ್ಷ, ರಾಜ್ಯದಲ್ಲಿ 5995 ಗ್ರಾಮ ಪಂಚಾಯಿತಿಗಳು ಕಾರ್ಯನಿರ್ವಹಿಸುತ್ತಿದೆ. ಈ ಪೈಕಿ 16.77 ಲಕ್ಷ ಮಂದಿ ಪಂಚಾಯಿತಿ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಆರೋಗ್ಯವಿಮೆ ಲಭಿಸದೇ ತೀವ್ರ ಕಂ ಗಲಾಗಿದ್ದಾರೆ ಎಂದು ಹೇಳಿದರು.

ಗ್ರಾಮ ಪಂಚಾಯಿತಿಗಳಲ್ಲಿ ಬಡವರ ಮಧ್ಯೆ ಕಡಿಮೆ ಸಂಬಳಕ್ಕೆ ದುಡಿಯುತ್ತಿರುವ ನೀರುಗಂಟಿ, ಜಾಡ ಮಾಲಿ, ವಾಟರ್ ಮೆನ್, ಕಂಪ್ಯೂಟರ್ ಆಪರೇಟರ್, ಜವಾನ ಸೇರಿದಂತೆ 10 ಕ್ಕಿಂತ ಕಡಿಮೆ ಸಿಬ್ಬಂದಿಗಳಿರುವುದರಿ ಂದ ಆರೋಗ್ಯ ವಿಮೆಯಿಂದ ವಂಚಿತರಾಗಿ ಸಂಕಷ್ಟಪಡುತ್ತಿವೆ ಎಂದು ತಿಳಿಸಿದರು.

ಆ ನಿಟ್ಟಿನಲ್ಲಿ ಮಾನವೀಯ ನೆಲೆಯಲ್ಲಿ ಕೇಂದ್ರ ಸರಕಾರ ಎಲ್ಲಾ ರಾಜ್ಯಗಳಿಂದ ಮಾಹಿತಿಯೊಂದಿಗೆ ವರದಿ ಪಡೆದು ಪಂಚಾಯತ್ ಸಿಬ್ಬಂದಿಗಳಿಗೂ ಆರೋಗ್ಯವಿಮೆ ಸೌಲಭ್ಯ ನೀಡಿ ಬಡ ಸಿಬ್ಬಂದಿಗಳ ಕುಟುಂಬಕ್ಕೆ ನೆರವಾಗಬೇಕು ಎಂದು ಕೇಂದ್ರ ಸಚಿವರನ್ನು ಒತ್ತಾಯಿಸಿದರು. ಮನವಿ ಸ್ವೀಕರಿಸಿದ ಸಚಿವರು ಈ ಬಗ್ಗೆ ಅಗತ್ಯ ನಿ ರ್ಧಾರ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.

– ಸುರೇಶ್‌ ಎನ್.

The post ಚಿಕ್ಕಮಗಳೂರು- ಗ್ರಾ.ಪಂ.ಸಿಬ್ಬಂದಿಗಳಿಗೆ-ಆರೋಗ್ಯ-ವಿಮೆ-ಒದಗಿಸಿ- ಲೋಕಸಭಾ-ಸದಸ್ಯ- ಕೋಟಾ-ಶ್ರೀನಿವಾಸ್-ಪೂಜಾರಿ-ಭೇಟಿ-ಮನವಿ appeared first on Vibrant Mysore News.

]]>
https://vibrantmysorenews.com/chikkamagaluru-gram-panchayat-staff-provide-health-insurance-lok-sabha-member-kota-srinivas-pujari-meet-appeal/feed/ 0 14154
ಚಿಕ್ಕಮಗಳೂರು-ಕಾಯಕ-ದಾಸೋಹ-ಜ್ಞಾನ-ಬೋಧಿಸಿದ-ಸಂತರು- ದಾಸಿಮಯ್ಯನವರು-ಜಿಲ್ಲಾ-ದೇವಾಂಗ-ಸಂಘದ-ಅಧ್ಯಕ್ಷ-ಭಗವತಿ- ಹರೀಶ್ https://vibrantmysorenews.com/chikmagalur-kayaka-dasoha-jnana-taught-saints-dasimayya-district-devanga-sangha-president-bhagavati-harish/ https://vibrantmysorenews.com/chikmagalur-kayaka-dasoha-jnana-taught-saints-dasimayya-district-devanga-sangha-president-bhagavati-harish/#respond Wed, 02 Apr 2025 14:50:28 +0000 https://vibrantmysorenews.com/?p=14150 ಚಿಕ್ಕಮಗಳೂರು:- ಕಾಯಕ, ದಾಸೋಹ ಮತ್ತು ಜ್ಞಾನ ಬೋಧನೆಗಳೆಂಬ ತತ್ವಪದಗಳ ಮೂ ಲಕ ಸಮಾಜದಲ್ಲಿರುವ ಜಾತೀಯತೆ, ಮೂಢನಂಬಿಕೆ ಹೋಗಲಾಡಿಸಿ ಸಮಾನತೆಯನ್ನು ಸಾರಿದ ಶ್ರೇಷ್ಟರು ಶ್ರೀ ದೇವರ ದಾಸಿಮಯ್ಯನವರು ಎಂದು ಜಿಲ್ಲಾ ದೇವಾಂಗ ಸಂಘದ ಅಧ್ಯಕ್ಷ ಭಗವತಿ ಹರೀಶ್ ಹೇಳಿದರು. ನಗರದ ಎಂ.ಜಿ.ರಸ್ತೆ ಸಮೀಪದ…

The post ಚಿಕ್ಕಮಗಳೂರು-ಕಾಯಕ-ದಾಸೋಹ-ಜ್ಞಾನ-ಬೋಧಿಸಿದ-ಸಂತರು- ದಾಸಿಮಯ್ಯನವರು-ಜಿಲ್ಲಾ-ದೇವಾಂಗ-ಸಂಘದ-ಅಧ್ಯಕ್ಷ-ಭಗವತಿ- ಹರೀಶ್ appeared first on Vibrant Mysore News.

]]>

ಚಿಕ್ಕಮಗಳೂರು:- ಕಾಯಕ, ದಾಸೋಹ ಮತ್ತು ಜ್ಞಾನ ಬೋಧನೆಗಳೆಂಬ ತತ್ವಪದಗಳ ಮೂ ಲಕ ಸಮಾಜದಲ್ಲಿರುವ ಜಾತೀಯತೆ, ಮೂಢನಂಬಿಕೆ ಹೋಗಲಾಡಿಸಿ ಸಮಾನತೆಯನ್ನು ಸಾರಿದ ಶ್ರೇಷ್ಟರು ಶ್ರೀ ದೇವರ ದಾಸಿಮಯ್ಯನವರು ಎಂದು ಜಿಲ್ಲಾ ದೇವಾಂಗ ಸಂಘದ ಅಧ್ಯಕ್ಷ ಭಗವತಿ ಹರೀಶ್ ಹೇಳಿದರು.

ನಗರದ ಎಂ.ಜಿ.ರಸ್ತೆ ಸಮೀಪದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಸಭಾಂಗಣದಲ್ಲಿ ಜಿಲ್ಲಾ ದೇವಾಂಗ ಸಂಘ, ಬನಶಂಕರಿ ಮಹಿಳಾ ಸಂಘ ಸಹಯೋಗದಲ್ಲಿ ಆಯೋಜಿಸಿದ್ದ 1045 ನೇ ಶ್ರೀ ದೇವರ ದಾಸಿಮಯ್ಯ ಜಯಂತಿಯನ್ನು ಬುಧವಾರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ವಚನಗಳ ಮೂಲಕ ಸಮಾಜದ ಅಂಕುಡೊಂಡುಗಳನ್ನು ತಿದ್ದುವ ಕೆಲಸ ಮಾಡಿದ ದೇವರ ದಾಸಿಮಯ್ಯ ೧೦ನೇ ಶತಮಾನದಲ್ಲಿದ್ದ ಆದ್ಯ ವಚನಕಾರ, ಸ್ತ್ರೀ ಸಮಾನತೆ ಬಗ್ಗೆ ಒತ್ತಿ ಹೇಳಿದ, ಕಾಯಕದ ಮಹತ್ವ ತಿಳಿಸಿದ, ಜಾತೀಯತೆ ಮುಕ್ತ ಸಮಾಜದ ನಿರ್ಮಾಣಕ್ಕೆ ಶ್ರಮಿಸಿದ ಮಹಾಜ್ಞಾನಿ ಎಂದರು.

ಸಮಾಜದಲ್ಲಿ ಮೌಢ್ಯ, ಕಂದಾಚಾರದ ವಿರುದ್ಧ ಕ್ರಾಂತಿಕಾರ ಹೆಜ್ಜೆನಗಳನ್ನಿಟ್ಟ ಶರಣರು ವೈಚಾರಿಕ ಚಿಂತನೆ ಗಳ ಮೂಲಕ ಜನರಿಗೆ ಅರಿವಿನ ದಾರಿ ತೋರಿದವರು. ಮನುಷ್ಯನಲ್ಲಿನ ಅಹಂಕಾರವನ್ನು ತೊರೆದು ಭಕ್ತಿ ಮಾರ್ಗದಲ್ಲಿ ನಡೆದಾಗ ಮಾತ್ರ ಭಗವಂತನ ಸಾಕ್ಷಾತ್ಕಾರವಾಗಲಿದೆ ಎಂಬ ತತ್ವವನ್ನು ಸಾರಿದವರು ಎಂದರು.ಸಾಹಿತಿ ಹೆಚ್.ಹೇಮಾವತಿ ಚಂದ್ರಶೇಖರಯ್ಯ ವಿಶೇಷ ಉಪನ್ಯಾಸ ನೀಡಿ ಮಾತನಾಡಿ ದೇವಾಂಗ ಜನಾಂಗ ಶಿವನಪಾಲ ನೇತ್ರದಿಂದ ಜನನಗೊಂಡವರೆಂಬ ಹಿರಿಮೆಯಿದೆ. ಬದುಕಿನಲ್ಲಿ ಸಿರಿಸಂಪತ್ತು ಕ್ಷಣಿಕ, ಜ್ಞಾನ ಸಂಪತ್ತು ಶಾಶ್ವತ ಎಂಬ ತತ್ವ ಸಾರಿದ ಸಂತರು ಎಂದ ಅವರು ನೇಕಾರಿಕೆಯಲ್ಲಿ ದಾಸಿಮಯ್ಯನವರು ನೇಯ್ಯುತ್ತಿ ದ್ದರೆ ಖುದ್ದು ಶಿವನ ನೃತ್ಯಗೈಯ್ಯುವ ಎಂಬ ಪ್ರತೀತಿಯಿದೆ ಎಂದು ಹೇಳಿದರು.‌

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ದೇವಾಂಗ ಸಂಘದ ಅಧ್ಯಕ್ಷ ಕೆ.ಶ್ರೀನಿವಾಸ್ ಸಮಾಜದಲ್ಲಿನ ಕಂದಾಚಾರ, ಮೌಡ್ಯ , ಅಂಧ ಶ್ರದ್ದೆಗಳ ಬಗ್ಗೆ ದನಿ ಎತ್ತಿದವರು ದೇವರ ದಾಸಿಮಯ್ಯ, ಜನ ಸಾಮಾನ್ಯರ ಬದುಕು, ಭಾವನೆಗಳನ್ನು ಕಾವ್ಯವನ್ನಾಗಿಸಿ, ತಮ್ಮ ಅನುಭವದ ಮೂಲಕ ವಚನಗಳನ್ನು ರಚಿಸಿ, ಕಾಯಕದ ಮಹತ್ವವನ್ನು ತಿಳಿ ಸಿದ ವಚನಕಾರರು ಎಂದು ಬಣ್ಣಿಸಿದರು.

ಶ್ರೀ ದೇವರ ದಾಸಿಮಯ್ಯ ಜಯಂತಿ ಏಪ್ರಿಲ್ 13 ರಂದು ಶಿವನಿ ಗ್ರಾಮದಲ್ಲಿ ಅತ್ಯಂತ ವಿಜೃಂಭ್ರಣೆಯಿಂದ ಹಮ್ಮಿಕೊಳ್ಳಲಾಗಿದ್ದು ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ದಾಸಿಮಯ್ಯನವರ ವಿಚಾರಧಾರೆ-ತತ್ವಪದಗಳನ್ನು ಎಲ್ಲೆಡೆ ಪಸರಿಸುವ ಕಾರ್ಯ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ರಾಜ್ಯ ದೇವಾಂಗ ಸಂಘದ ಸಂಘಟನಾ ಕಾರ್ಯದರ್ಶಿ ಸಿ.ಎಸ್.ರವಿಕುಮಾರ್, ನಿರ್ದೇಶಕ ಹರೀಶ್, ಜಿಲ್ಲಾ ದೇವಾಂಗ ಸಂಘದ ಉಪಾಧ್ಯಕ್ಷ ಕುಮಾರಸ್ವಾಮಿ, ಸಂಘಟನಾ ಕಾರ್ಯದರ್ಶಿ ದಿನೇ ಶ್, ಬನಶಂಕರಿ ಮಹಿಳಾ ಮಂಡಳಿ ಅಧ್ಯಕ್ಷೆ ಸುವರ್ಣ ಕೇಶವಮೂರ್ತಿ, ಮುಖಂಡರಾದ ಸಿ.ಆರ್.ಚಂದ್ರಶೇಖರ ಯ್ಯ, ವಾಣಿ, ಉಮಾ ಪ್ರೇಮ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

– ಸುರೇಶ್‌ ಎನ್.

The post ಚಿಕ್ಕಮಗಳೂರು-ಕಾಯಕ-ದಾಸೋಹ-ಜ್ಞಾನ-ಬೋಧಿಸಿದ-ಸಂತರು- ದಾಸಿಮಯ್ಯನವರು-ಜಿಲ್ಲಾ-ದೇವಾಂಗ-ಸಂಘದ-ಅಧ್ಯಕ್ಷ-ಭಗವತಿ- ಹರೀಶ್ appeared first on Vibrant Mysore News.

]]>
https://vibrantmysorenews.com/chikmagalur-kayaka-dasoha-jnana-taught-saints-dasimayya-district-devanga-sangha-president-bhagavati-harish/feed/ 0 14150
ತುಮಕೂರು-ವಿಶ್ವ-ದಾಖಲೆ-ಮುಡಿಗೇರಿಸಿಕೊಂಡ-ಚಂದನ ಜಿ.ವೈ https://vibrantmysorenews.com/tumkur-world-record-folded-chandana-g-y/ https://vibrantmysorenews.com/tumkur-world-record-folded-chandana-g-y/#respond Wed, 02 Apr 2025 14:46:07 +0000 https://vibrantmysorenews.com/?p=14146 ತುಮಕೂರು: ಬೆಂಗಳೂರಿನ ಸೆಂಟ್, ಕ್ಲಾರೆಟ್ ಕಾಲೇಜಿನಲ್ಲಿ ದ್ವೀತಿಯ ಪಿಯುಸಿ ಓದುತ್ತಿರುವ ತುಮಕೂರು ಜಿಲ್ಲೆ ಸಿರಾ ತಾಲ್ಲೂಕು ಸೀಗಲಹಳ್ಳಿ ಗ್ರಾಮದ ಉಮಾ ರವರ ಪುತ್ರಿ ಚಂದನ ಜಿ.ವೈ ಪೆಬ್ರವರಿ 9ರಂದು ಬೆಂಗಳೂರು ಲಗ್ಗೆರೆಯ ಮೌಟ್ ಸೇನೋರಿಯ ಶಾಲೆಯಲ್ಲಿ ನಡೆದ ಪೈರ್ ಟೈಲ್ ಹೊಡೆಯುವ…

The post ತುಮಕೂರು-ವಿಶ್ವ-ದಾಖಲೆ-ಮುಡಿಗೇರಿಸಿಕೊಂಡ-ಚಂದನ ಜಿ.ವೈ appeared first on Vibrant Mysore News.

]]>


ತುಮಕೂರು: ಬೆಂಗಳೂರಿನ ಸೆಂಟ್, ಕ್ಲಾರೆಟ್ ಕಾಲೇಜಿನಲ್ಲಿ ದ್ವೀತಿಯ ಪಿಯುಸಿ ಓದುತ್ತಿರುವ ತುಮಕೂರು ಜಿಲ್ಲೆ ಸಿರಾ ತಾಲ್ಲೂಕು ಸೀಗಲಹಳ್ಳಿ ಗ್ರಾಮದ ಉಮಾ ರವರ ಪುತ್ರಿ ಚಂದನ ಜಿ.ವೈ ಪೆಬ್ರವರಿ 9ರಂದು ಬೆಂಗಳೂರು ಲಗ್ಗೆರೆಯ ಮೌಟ್ ಸೇನೋರಿಯ ಶಾಲೆಯಲ್ಲಿ ನಡೆದ ಪೈರ್ ಟೈಲ್ ಹೊಡೆಯುವ ಸ್ಪರ್ಧೆಯಲ್ಲಿ 28 ಸೆಂಕೆಂಡ್ ಗಳಲ್ಲಿ 29 ಪೈರ್ ಟೈಲ್ ಹೊಡೆಯುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ.



ನುರಿತ ಕರಾಟೆ ತರಬೇತುದಾರರಾದ ಗಜರಾಜು ಪೈರ್ ಟೈಲ್ಸ್ ಹೊಡೆಯುವುದರ ಕುರಿತು ತರಬೇತಿ ನೀಡಿದ್ದರು. ಚಂದನಳ ಈ ವಿಶ್ವ ದಾಖಲೆಗೆ ಕಾಲೇಜು ಆಡಳಿತ ಮಂಡಳಿ ಮತ್ತು ಗಣ್ಯರು ಸನ್ಮಾನಿಸಿ ಗೌರವಿಸಿದ್ದಾರೆ.

The post ತುಮಕೂರು-ವಿಶ್ವ-ದಾಖಲೆ-ಮುಡಿಗೇರಿಸಿಕೊಂಡ-ಚಂದನ ಜಿ.ವೈ appeared first on Vibrant Mysore News.

]]>
https://vibrantmysorenews.com/tumkur-world-record-folded-chandana-g-y/feed/ 0 14146
ತುಮಕೂರು-ಹೇಮಾವತಿ-ಹೆಗ್ಗಡೆರವರ-ಹುಟ್ಟುಹಬ್ಬದ-ನಿಮಿತ್ತ-ಉಚಿತ-ಆರೋಗ್ಯ-ತಪಾಸಣಾ-ಶಿಬಿರ https://vibrantmysorenews.com/tumkur-hemavati-heggade-birthday-free-health-checkup-camp/ https://vibrantmysorenews.com/tumkur-hemavati-heggade-birthday-free-health-checkup-camp/#respond Wed, 02 Apr 2025 14:42:55 +0000 https://vibrantmysorenews.com/?p=14142 ತುಮಕೂರು: ಧರ್ಮಸ್ಥಳದ ಧರ್ಮಾಧಿಕಾರಿಗಳ ಧರ್ಮಪತ್ನಿಯವರು ಮತ್ತು ರಾಜ್ಯ ಜ್ಞಾನ ವಿಕಾಸ ಕೇಂದ್ರದ ಅಧ್ಯಕ್ಷರಾದ ಮಾತೃಶ್ರೀ ಹೇಮಾವತಿ ಹೆಗ್ಗಡೆರವರ ಹುಟ್ಟುಹಬ್ಬದ ಪ್ರಯುಕ್ತ ಮೈದಾಳ ಕಾರ್ಯಕ್ಷೇತ್ರದ ಮಹಾಲಕ್ಷ್ಮಿ ವೃದ್ಧಾಶ್ರಮದಲ್ಲಿ ವೃದ್ಧರಿಗೆ ಆರೋಗ್ಯ ತಪಾಸಣಾ ಶಿಬಿರವನ್ನು ಕಸ್ತೂರಬಾ ಆಸ್ಪತ್ರೆಯ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದು ಕಾರ್ಯಕ್ರಮವನ್ನು ತುಮಕೂರು-1 ಜಿಲ್ಲಾ…

The post ತುಮಕೂರು-ಹೇಮಾವತಿ-ಹೆಗ್ಗಡೆರವರ-ಹುಟ್ಟುಹಬ್ಬದ-ನಿಮಿತ್ತ-ಉಚಿತ-ಆರೋಗ್ಯ-ತಪಾಸಣಾ-ಶಿಬಿರ appeared first on Vibrant Mysore News.

]]>


ತುಮಕೂರು: ಧರ್ಮಸ್ಥಳದ ಧರ್ಮಾಧಿಕಾರಿಗಳ ಧರ್ಮಪತ್ನಿಯವರು ಮತ್ತು ರಾಜ್ಯ ಜ್ಞಾನ ವಿಕಾಸ ಕೇಂದ್ರದ ಅಧ್ಯಕ್ಷರಾದ ಮಾತೃಶ್ರೀ ಹೇಮಾವತಿ ಹೆಗ್ಗಡೆರವರ ಹುಟ್ಟುಹಬ್ಬದ ಪ್ರಯುಕ್ತ ಮೈದಾಳ ಕಾರ್ಯಕ್ಷೇತ್ರದ ಮಹಾಲಕ್ಷ್ಮಿ ವೃದ್ಧಾಶ್ರಮದಲ್ಲಿ ವೃದ್ಧರಿಗೆ ಆರೋಗ್ಯ ತಪಾಸಣಾ ಶಿಬಿರವನ್ನು ಕಸ್ತೂರಬಾ ಆಸ್ಪತ್ರೆಯ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದು ಕಾರ್ಯಕ್ರಮವನ್ನು ತುಮಕೂರು-1 ಜಿಲ್ಲಾ ನಿರ್ದೇಶಕರಾದ ಸತೀಶ್ ಸುವರ್ಣ, ಡಾ||ಶಿವಕುಮಾರ್, ಮಾನ್ಯ ತುಮಕೂರು ತಾಲ್ಲೋಕಿನ ಯೋಜನಾಧಿಕಾರಿ ಪ್ರಭಾಕರ್‌ರಾಮ್ ನಾಯಕ್ ರವರುಗಳು ಜಂಟಿಯಾಗಿ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ನಿರ್ದೇಶಕರಾದ ಸತೀಶ್ ಸುವರ್ಣರವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ನಡೆಯುತ್ತಿರುವಂತಹ ಸಮಾಜ ಮುಖಿ ಕಾರ್ಯಕ್ರಮಗಳ ಬಗ್ಗೆ,ವಾತ್ಸಲ್ಯ ಕಾರ್ಯಕ್ರಮಗಳ ಬಗ್ಗೆ, ಜನಮಂಗಲ ಕಾರ್ಯಕ್ರಮಗಳ ಬಗ್ಗೆ ಅಲ್ಲಿಯ ಸದಸ್ಯರಿಗೆ ತುಂಬಾ ಉತ್ತಮವಾದ ಮಾಹಿತಿಯನ್ನು ನೀಡಿದರು.


ಈ ವೇಳೆ ತೇಜಸ್ವಿನಿ, ಮಹಾಲಕ್ಷ್ಮಿ ವೃದ್ಧಾಶ್ರಮದ ವ್ಯವಸ್ಥಾಪಕರು, ಒಕ್ಕೂಟದ ಅಧ್ಯಕ್ಷ ರಾಜಪ್ಪ, ವಲಯದ ಮೇಲ್ವಿಚಾರಕ ಹೆಚ್.ಎಸ್.ಲೋಕೇಶ್, ಜ್ಞಾನವಿಕಾಸ ಸಮನ್ವಯಾಧಿಕಾರಿ ನಾಗಮಣಿ, ಸೇವಾ ಪ್ರತಿನಿಧಿ ಸಿದ್ದಮ್ಮ, ಕಸ್ತೂರಬಾ ಆಸ್ಪತ್ರೆಯ ಸಿಬ್ಬಂದಿ ವರ್ಗ ಹಾಗೂ ಸದಸ್ಯರು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

– ಕೆ.ಬಿ.ಚಂದ್ರಚೂಡ

The post ತುಮಕೂರು-ಹೇಮಾವತಿ-ಹೆಗ್ಗಡೆರವರ-ಹುಟ್ಟುಹಬ್ಬದ-ನಿಮಿತ್ತ-ಉಚಿತ-ಆರೋಗ್ಯ-ತಪಾಸಣಾ-ಶಿಬಿರ appeared first on Vibrant Mysore News.

]]>
https://vibrantmysorenews.com/tumkur-hemavati-heggade-birthday-free-health-checkup-camp/feed/ 0 14142
ಮಂಡ್ಯ-ರಾಜ್ಯ- ಗುಪ್ತವಾರ್ತೆ-ನಿರ್ದೇಶಕ-ಹೇಮಂತ್- ಎಂ- ನಿಂಬಾಳ್ಕರ್‌ಗೆ-ಮುಖ್ಯಮಂತ್ರಿಗಳ-ಸ್ವರ್ಣಪದಕ-ಪ್ರದಾನ https://vibrantmysorenews.com/mandya-state-secret-reporter-director-hemant-m-nimbalkar-presented-chief-ministers-gold-medal/ https://vibrantmysorenews.com/mandya-state-secret-reporter-director-hemant-m-nimbalkar-presented-chief-ministers-gold-medal/#respond Wed, 02 Apr 2025 14:39:15 +0000 https://vibrantmysorenews.com/?p=14139 ಮಂಡ್ಯ:- ರಾಜ್ಯದಲ್ಲಿ ನಕ್ಸಲ್ ಚಟುವಟಿಕೆಗಳನ್ನು “ಶೂನ್ಯ”ಗೊಳಿಸಲು ವಿಶೇಷ ಮುತುವರ್ಜಿಯಿಂದ ಪೊಲೀಸ್ ಕಾರ್ಯಾಚರಣೆಗೆ ಮುಂದಾಳತ್ವ ವಹಿಸಿ,ಮಾರ್ಗದರ್ಶನ ನೀಡುವ ಮೂಲಕ ಎಲ್ಲ ನಕ್ಸಲರನ್ನು ಶರಣಾಗುವಂತೆ ಮಾಡಿದ ರಾಜ್ಯ ಗುಪ್ತವಾರ್ತೆ ನಿರ್ದೇಶಕ ಹೇಮಂತ್ ಎಂ ನಿಂಬಾಳ್ಕರ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವರ್ಣಪದಕ ಪ್ರದಾನ ಮಾಡಿದರು. ಬೆಂಗಳೂರಿನ…

The post ಮಂಡ್ಯ-ರಾಜ್ಯ- ಗುಪ್ತವಾರ್ತೆ-ನಿರ್ದೇಶಕ-ಹೇಮಂತ್- ಎಂ- ನಿಂಬಾಳ್ಕರ್‌ಗೆ-ಮುಖ್ಯಮಂತ್ರಿಗಳ-ಸ್ವರ್ಣಪದಕ-ಪ್ರದಾನ appeared first on Vibrant Mysore News.

]]>


ಮಂಡ್ಯ:-
 ರಾಜ್ಯದಲ್ಲಿ ನಕ್ಸಲ್ ಚಟುವಟಿಕೆಗಳನ್ನು “ಶೂನ್ಯ”ಗೊಳಿಸಲು ವಿಶೇಷ ಮುತುವರ್ಜಿಯಿಂದ ಪೊಲೀಸ್ ಕಾರ್ಯಾಚರಣೆಗೆ ಮುಂದಾಳತ್ವ ವಹಿಸಿ,ಮಾರ್ಗದರ್ಶನ ನೀಡುವ ಮೂಲಕ ಎಲ್ಲ ನಕ್ಸಲರನ್ನು ಶರಣಾಗುವಂತೆ ಮಾಡಿದ ರಾಜ್ಯ ಗುಪ್ತವಾರ್ತೆ ನಿರ್ದೇಶಕ ಹೇಮಂತ್ ಎಂ ನಿಂಬಾಳ್ಕರ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವರ್ಣಪದಕ ಪ್ರದಾನ ಮಾಡಿದರು.

ಬೆಂಗಳೂರಿನ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಇಂದು ಬೆಳಿಗ್ಗೆ ಪೊಲೀಸ್ ಧ್ವಜ ದಿನಾಚರಣೆ ಸಮಾರಂಭದಲ್ಲಿ ಪದಕ ಪ್ರದಾನ ಮಾಡಲಾಯಿತು.

1998ರ ಬ್ಯಾಚಿನ ಐಪಿಎಸ್ ಅಧಿಕಾರಿಯಾಗಿರುವ ಹೇಮಂತ್ ಎಂ.ನಿAಬಾಳ್ಕರ್ ಅವರು ಪ್ರಸ್ತುತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

The post ಮಂಡ್ಯ-ರಾಜ್ಯ- ಗುಪ್ತವಾರ್ತೆ-ನಿರ್ದೇಶಕ-ಹೇಮಂತ್- ಎಂ- ನಿಂಬಾಳ್ಕರ್‌ಗೆ-ಮುಖ್ಯಮಂತ್ರಿಗಳ-ಸ್ವರ್ಣಪದಕ-ಪ್ರದಾನ appeared first on Vibrant Mysore News.

]]>
https://vibrantmysorenews.com/mandya-state-secret-reporter-director-hemant-m-nimbalkar-presented-chief-ministers-gold-medal/feed/ 0 14139
ಮಂಡ್ಯ-ಪೊಲೀಸ್-ಇಲಾಖೆ-ಜನಸ್ನೇಹಿ-ಎಂದು-ಸಾರ್ವಜನಿಕರಿಗೆ- ಮನದಟ್ಟು-ಮಾಡಬೇಕಿದೆ-ಜಿಲ್ಲಾ-ಪೊಲೀಸ್-ವರಿಷ್ಠಾಧಿಕಾರಿ-ಮಲ್ಲಿಕಾರ್ಜುನ-ಬಾಲದಂಡಿ https://vibrantmysorenews.com/mandya-police-department-needs-to-convince-the-public-that-it-is-people-friendly-district-superintendent-of-police-mallikarjuna-baldandi/ https://vibrantmysorenews.com/mandya-police-department-needs-to-convince-the-public-that-it-is-people-friendly-district-superintendent-of-police-mallikarjuna-baldandi/#respond Wed, 02 Apr 2025 14:36:03 +0000 https://vibrantmysorenews.com/?p=14131 ಮಂಡ್ಯ: ಸಮಾಜದ ಶಾಂತಿ ಸುವ್ಯವಸ್ಥೆ ಕಾಪಾಡುವ ಮೂಲಕ ಪೊಲೀಸ್ ಇಲಾಖೆ ಜನಸ್ನೇಹಿ ಎಂದು ಸಾರ್ವಜನಿಕರಿಗೆ ಮನದಟ್ಟು ಮಾಡಬೇಕಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು ಹೇಳಿದರು. ಇಂದು (ಎ.2) ನಗರದ ಜಿಲ್ಲಾ ಪೊಲೀಸ್ ಕವಾಯಾತು ಮೈದಾನದಲ್ಲಿ ನಡೆದ ಪೊಲೀಸ್…

The post ಮಂಡ್ಯ-ಪೊಲೀಸ್-ಇಲಾಖೆ-ಜನಸ್ನೇಹಿ-ಎಂದು-ಸಾರ್ವಜನಿಕರಿಗೆ- ಮನದಟ್ಟು-ಮಾಡಬೇಕಿದೆ-ಜಿಲ್ಲಾ-ಪೊಲೀಸ್-ವರಿಷ್ಠಾಧಿಕಾರಿ-ಮಲ್ಲಿಕಾರ್ಜುನ-ಬಾಲದಂಡಿ appeared first on Vibrant Mysore News.

]]>


ಮಂಡ್ಯ:
ಸಮಾಜದ ಶಾಂತಿ ಸುವ್ಯವಸ್ಥೆ ಕಾಪಾಡುವ ಮೂಲಕ ಪೊಲೀಸ್ ಇಲಾಖೆ ಜನಸ್ನೇಹಿ ಎಂದು ಸಾರ್ವಜನಿಕರಿಗೆ ಮನದಟ್ಟು ಮಾಡಬೇಕಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು ಹೇಳಿದರು.

ಇಂದು (ಎ.2) ನಗರದ ಜಿಲ್ಲಾ ಪೊಲೀಸ್ ಕವಾಯಾತು ಮೈದಾನದಲ್ಲಿ ನಡೆದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು 1963 ರಲ್ಲಿ ಕರ್ನಾಟಕ ಪೊಲೀಸ್ ಧ್ವಜವನ್ನು ಅಧಿಕೃತವಾಗಿ ಅಂಗಿಕರಿಸಿ ಜಾರಿಗೆ ತರಲಾಯಿತು, ಅಂದಿನಿAದ ಇಂದಿನವರೆಗೂ ಎಪ್ರಿಲ್ 2 ರಂದು ಪೊಲೀಸ್ ಧ್ವಜ ದಿನಾಚರಣೆ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.

2024 ರಲ್ಲಿ ಪೊಲೀಸ್ ಧ್ವಜವನ್ನು ಜಿಲ್ಲೆಯಲ್ಲಿ ಮಾರಟ ಮಾಡಿ ರೂ 22.50 ಲಕ್ಷ ರೂಪಾಯಿ ಸಂಗ್ರಹಿಸಲಾಗಿದೆ, ಇಂದಿನವರೆಗೂ ಜಿಲ್ಲಾ ಪೊಲೀಸ್ ಖಾತೆಯ ಉಳಿತಾಯ ಠೇವಣಿಯ ಮೊತ್ತ ರೂ. 30.25 ಲಕ್ಷ ಉಳಿದುಕೊಂಡಿದೆ, ಸದರಿ ಮೊತ್ತವನ್ನು ನಿವೃತ್ತ ಪೊಲೀಸ್ ಹಾಗೂ ಸೇವೆ ಸಲ್ಲಿಸುತ್ತಿರುವ ಪೊಲೀಸ್ ಸಿಬ್ಬಂದಿಗಳ ಆರೋಗ್ಯ ಮತ್ತು ಕುಟುಂಬ ಕಲ್ಯಾಣಕ್ಕಾಗಿ ಬಳಸಲಾಗುತ್ತದೆ ಎಂದು ತಿಳಿಸಿದರು.

ಧ್ವಜ ದಿನಾಚರಣೆಯಲ್ಲಿ ಸಂಗ್ರಹವಾಗುವ ಹಣವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮೂಲಕ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವುದರ ಜೊತೆಗೆ , ಎಸ್ ಎಸ್ ಎಲ್ ಸಿ. ಪಿ ಯು.ಪಿ. ಪದವಿ. ಸ್ನಾತಕೋತ್ತರ ಪದವಿ, ವೃತ್ತಿಪರ ಶಿಕ್ಷಣಗಳಲ್ಲಿ ಉನ್ನತ ಅಂಕಗಳನ್ನು ಪಡೆದ ಪೊಲೀಸ್ ಸಿಬ್ಬಂದಿಯ ಮಕ್ಕಳಿಗೆ ಪ್ರೋತ್ಸಾಹ ಧನ ನೀಡಲಾಗುವುದು, ಪ್ರತಿ ತಿಂಗಳು (ಬಿ. ಎಂ. ಐ.) ಬಾಡಿ ಮಾಸ್ ಇಂಡೆಕ್ಸ್ ನಡಿ ಉತ್ತಮ ಆಹಾರ ವ್ಯಾಯಾಮ ಯೋಗಾಭ್ಯಾಸದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದರು.


ದೇಹದ ತೂಕ ಕಡಿಮೆ ಮಾಡಿಕೊಳ್ಳುವ ಪೊಲೀಸ್ ಸಿಬ್ಬಂದಿಗೆ ಬಹುಮಾನ ವಿತರಣಾ ಮಾಡಲಾಗುವುದು, ಪ್ರತಿ ವರ್ಷ ಪೊಲೀಸ್ ಸಿಬ್ಬಂದಿಗೆ ಉಚಿತ ಆರೋಗ್ಯ ತಪಾಸಣಾ ನಡೆಸಿ ಆರೋಗ್ಯ ಕುರಿತು ಗಮನ ಹರಿಸಿಲಾಗುತ್ತಿದೆ, ವ್ಯದ್ಯಾಕೀಯ ಚಿಕಿತ್ಸೆ ಭರಿಸಬಹುದಾದ ವೆಚ್ಚ ಭರಿಸಲಾಗುತ್ತದೆ. ಪೊಲೀಸ್ ಇಲಾಖೆ ಸಮಾಜಕ್ಕೆ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸೋಣ ಎಂದು ಹೇಳಿದರು.

ನಿವೃತ ಆರಕ್ಷಕ ಉಪ ಅಧೀಕ್ಷಕರಾದ ಎಲ್.ಕೆ . ರಮೇಶ್ ರವರು ಮಾತನಾಡಿ ಪೊಲೀಸ್ ಧ್ವಜಕ್ಕೆ ತನ್ನದೇ ಆದ ಮಹತ್ವವಿದೆ ಯಾವುದೇ ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳು ಕರ್ತವ್ಯದಲ್ಲಿ ಲೋಪ ಎಸಗಿದರೆ ಅದು ಧ್ವಜಕ್ಕೆ ಮಾಡುವ ಅವಮಾನ, ಇಲಾಖೆಗೆ ಯಾವುದೇ ರೀತಿಯ ಕಳಂಕ ತೆರೆದಂತೆ ಎಲ್ಲಾ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಾರ್ಯ ನಿರ್ವಹಿಸಿ ಎಂದರು.

ಸಭೆಯಲ್ಲಿ ಅಪಾರ ಪೊಲೀಸ್ ವರಿಷ್ಠಾಧಿಕಾರಿಗಳಾದ ಸಿ. ಈ ತಿಮ್ಮಯ್ಯ, ಎಸ್. ಈ ಗಂಗಾಧರ ಸ್ವಾಮಿ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

The post ಮಂಡ್ಯ-ಪೊಲೀಸ್-ಇಲಾಖೆ-ಜನಸ್ನೇಹಿ-ಎಂದು-ಸಾರ್ವಜನಿಕರಿಗೆ- ಮನದಟ್ಟು-ಮಾಡಬೇಕಿದೆ-ಜಿಲ್ಲಾ-ಪೊಲೀಸ್-ವರಿಷ್ಠಾಧಿಕಾರಿ-ಮಲ್ಲಿಕಾರ್ಜುನ-ಬಾಲದಂಡಿ appeared first on Vibrant Mysore News.

]]>
https://vibrantmysorenews.com/mandya-police-department-needs-to-convince-the-public-that-it-is-people-friendly-district-superintendent-of-police-mallikarjuna-baldandi/feed/ 0 14131