ಚಿಕ್ಕಮಗಳೂರು– ಮೂಡಿಗೆರೆ ತಾಲ್ಲೂಕಿನ ನಿಡಗೋಡು ಗ್ರಾಮದ ಬಡಕುಟುಂಬಕ್ಕೆ ಅಜ್ಜಂಪುರ ಚಿಂತನ ಫೌಂಡೇಷನ್ ವತಿಯಿಂದ ಆಹಾರ ಕಿಟ್ ಹಾಗೂ ಮನೆ ನಿರ್ಮಿಸಿಕೊಳ್ಳಲು ಮೂಲ ಭೂತ ಸೌಲಭ್ಯವನ್ನು ಶನಿವಾರ ಒದಗಿಸಲಾಯಿತು.
ಈ ವೇಳೆ ಮಾತನಾಡಿದ ಚಿಂತನ ಫೌಂಡೇಷನ್ ನಿರ್ದೇಶಕ ಚೆನ್ನಪ್ಪ ಅತೀಯಾದ ಮಳೆಗಾಳಿಯಿಂದ ಹಾನಿಯಾದ ಬಡವರು, ಶೋಷಿತರಿಗೆ ಸಿಮೆಂಟ್, ಶೀಟ್, ಕಂಬ, ಬೋಡ್ರಸ್ ಕಲ್ಲು, ಹೀಗೆ ಹಲವಾರು ಪೀ ಠೋಪಕರಣಗಳನ್ನು ತಾಲ್ಲೂಕಿನ ಅನೇಕ ಗ್ರಾಮದ ಫಲಾನುಭವಿಗಳನ್ನು ಗುರುತಿಸಿ ಸಂಸ್ಥೆಯಿAದ ವಿತರಿ ಸಿದೆ. 32 ಮನೆಗಳ ಕಾಮಗಾರಿ ಪೂರೈಸಿದ್ದು 10 ಮನೆಗಳು ಪ್ರಗತಿಯಲ್ಲಿದೆ ಎಂದರು.
ಮನೆಹಾನಿ ಹಾಗೂ ಅಂಗವಿಕಲ ಕುಟುಂಬಕ್ಕೆ ದಿನಸಿ ಕಿಟ್ ವಿತರಿದೆ ಎಂದ ಅವರು ಇಂದು ಮಲೆ ನಾಡು ಭಾಗಕ್ಕೆ ಭೇಟಿ ನೀಡಿ ಫಲಾನುಭವಿಗಳೊಂದಿಗೆ ಅಭಿಪ್ರಾಯ ಹಂಚಿಕೊಳ್ಳಲಾಗಿದ್ದು, ಮುಂದಿನ ದಿನದಲ್ಲಿ ಉಳಿದಿರುವ ಮನೆಗಳನ್ನು ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.
ದಸಂಸ ಜಿಲ್ಲಾಧ್ಯಕ್ಷ ಸುಂದ್ರೇಶ್ ಹೊಯ್ಸಳಲು ಮಾತನಾಡಿ, ಇಂದು ಚಿಂತನ ಫೌಂಡೇಷನ್ ಸಂಸ್ಥೆಯ ನಿರ್ದೇಶಕರು ಮೂಡಿಗೆರೆಗೆ ಭೇಟಿ ನೀಡಿ ಅಭಿವೃದ್ದಿ ಪರಿಶೀಲಿಸಿದ್ದಾರೆ. ಆ ನಿಟ್ಟಿನಲ್ಲಿ ನಮ್ಮ ಸಂಘಟನೆಯ ಮುಖಂಡರು ಸಾಮಾಜಿಕ, ಆರ್ಥಿಕ ಅಭಿವೃದ್ಧಿಯಾಗಲು ಶ್ರಮಿಸುತ್ತೇನೆ. ಬಡವರಿಗೆ ನ್ಯಾಯ ಒದಗಿಸಲು ನಮ್ಮ ಸಂಘಟನೆ ಸದಾಕಾಲ ಜೊತೆಗಿರಲಿದೆ ಎಂದರು.

ಚಿಂತನ ಫೌಂಡೇಷನ್ ಅಧ್ಯಕ್ಷ ಪೂವಪ್ಪ ಮಾತನಾಡಿ ಮಲೆನಾಡ ಜನರು ಸಂಸ್ಥೆಯಬಗ್ಗೆ ಉತ್ತಮ ಅಭಿಪ್ರಾಯ ಸೂಚಿಸಿದ್ದು, ಹೆಚ್ಚು ಯುವನಾಯಕರು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವುದು, ಸಂಸ್ಥೆಯು ಹೆಚ್ಚು ಹೆಗ್ಗಳಿಕೆಯನ್ನು ಪಡೆದುಕೊಂಡಿದೆ ಎಂದರು.
ಈ ಸಂಧರ್ಭದಲ್ಲಿ ಚಿಂತನ ಫೌಂಡೇಷನ್ ಕಾರ್ಯಕರ್ತರು, ಚಂದನ್ ಆನೆದಿಬ್ಬ, ಪೂರ್ಣೆಶ್ ಬೆಟ್ಟದ ಮನೆ, ದಸಂಸ ಮೂಡಿಗೆರೆ ತಾಲ್ಲೂಕು ಅಧ್ಯಕ್ಷ ಮಂಜುನಾಥ್ ಜೈನುಬೈಲು ಹಾಜರಿದ್ದರು.
- ಸುರೇಶ್ ಎನ್.