ತುಮಕೂರು: ಗ್ರಾಮಾಂತರ ತಾಲೂಕಿನ ಕೋರವಲಯದ ಸೋರೆ ಕುಂಟೆ ಕಾರ್ಯಕ್ಷೇತ್ರದ ಬೊಮ್ಮಲಿಂಗೇಶ್ವರ ಪ್ರೌಢಶಾಲೆಯಲ್ಲಿ ಕಳೆದ ಮೂರು ತಿಂಗಳಿನಿಂದ ಮಹಿಳಾ ಜ್ಞಾನವಿಕಾಸಕಾರ್ಯಕ್ರಮದ ಅಡಿಯಲ್ಲಿ 10ನೇ ತರಗತಿ ಮಕ್ಕಳಿಗೆ ಟ್ಯೂಷನ್ ಕ್ಲಾಸ್ ಕಾರ್ಯಕ್ರಮವನ್ನು ಏರ್ಪಡಿಸಿದ್ದು ಈ ದಿನ ಸಮಾರೋಪ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ತುಮಕೂರು 1 ಜಿಲ್ಲೆಯ ಮಾನ್ಯ ನಿರ್ದೇಶಕರಾದ ಸತೀಶ್ ಸುವರ್ಣ ರವರು ದೀಪ ಬೆಳಗಿಸುವುದರ ಮುಖಾಂತರ ಉದ್ಘಾಟನೆ ಮಾಡಲಾಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಕ್ಕಳಿಗೆ ಶುಭ ಹಾರೈಕೆ ಮಾಡಿ ಹಾಗೂ ಶಾಲೆಗೆ,ಪೋಷಕರಿಗೆ ಉತ್ತಮ ಅಂಕಗಳಿಸುವುದರ ಮುಖಾಂತರ ಒಳ್ಳೆಯ ಹೆಸರು ತಂದು ಕೊಡಬೇಕು ಹಾಗೂ ಸಂಸ್ಥೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಮಾರ್ಗದರ್ಶನ ನೀಡಿದರು.
ಈ ಕಾರ್ಯಕ್ರಮದಲ್ಲಿ ತಾಲ್ಲೋಕಿನ ಯೋಜನಾಧಿಕಾರಿಗಳಾದ ಪಿ.ಬಿ.ಸಂದೇಶ್,ತುಮಕೂರು ತಾಲ್ಲೋಕು ಜ್ಞಾನವಿಕಾಸ ಸಮನ್ವಯ ಅಧಿಕಾರಿ ಧನಲಕ್ಷ್ಮಿ, ಶಾಲೆಯ ಮುಖ್ಯೋಪಾಧ್ಯಾಯರು ಹಾಗು ಶಾಲೆಯ ಶಿಕ್ಷಕ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
- ಕೆ.ಬಿ.ಚಂದ್ರಚೂಡ