ತುಮಕೂರು: ಕಣ್ಣು ದೇಹದ ಬಹು ಮುಖ್ಯ ಅಂಗ,ಅದನ್ನು ಕಾಲ ಕಾಲಕ್ಕೆ ಸರಿಯಾಗಿ ಪರೀಕ್ಷೆ ನಡೆಸಿ ಉತ್ತಮ ಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕು,ವರ್ಷಕ್ಕೆ ಒಮ್ಮೆಯಾದರೂ ಆರೋಗ್ಯವನ್ನು ತಪಾಸಣೆ ಮಾಡಿಸಿಕೊಂಡು ವೈದ್ಯರ ಸಲಹೆ ಪಡೆಯಬೇಕು,ಆರೋಗ್ಯವೇ ಭಾಗ್ಯ ಎಂದು 31ನೇ ವಾರ್ಡಿನ ಮಾಜಿ ಮಹಾನಗರ ಪಾಲಿಕೆ ಸದಸ್ಯ ಸಿ.ಎನ್.ರಮೇಶ್ ತಿಳಿಸಿದರು.
ಅವರು ಇಂದು ನಗರದ ೩೧ನೇ ವಾರ್ಡಿನ ಜಯನಗರ ಪಶ್ಚಿಮ ಬಡಾವಣೆಯಲ್ಲಿರುವ ಜಿಲ್ಲಾ ಬ್ರಾಹ್ಮಣಸಭಾದ ವಿಪ್ರಭವನದಲ್ಲಿ ಸಂಕಲ್ಪ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ಎನ್.ಜಿ.ಓ ಮತ್ತು ವಾಸನ್ ಐ-ಕೇರ್ ಸಂಸ್ಥೆ ಇವರುಗಳು ಸಹಯೋಗದಲ್ಲಿ ಉಚಿತ ಕಣ್ಣು ಪರೀಕ್ಷೆ ಮತ್ತು ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಸಂಕಲ್ಪ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ಎನ್.ಜಿ.ಓದ ಅಧ್ಯಕ್ಷರಾದ ರಮೇಶ್ ರವರು ಮಾತನಾಡುತ್ತಾ ಮನುಷ್ಯನಿಗೆ ಹಣ ಎಷ್ಟಿದ್ದರೂ ಸಾಲುವುದಿಲ್ಲ,ಒಮ್ಮೆ ಆರೋಗ್ಯ ಕೈ ಕೊಟ್ಟರೆ ಹಣ ಯಾವ ಪ್ರಯೋಜನಕ್ಕೂ ಬಾರದು,ಎಲ್ಲರೂ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕೆಂದು ಸದುದ್ದೇಶದಿಂದ ನಮ್ಮ ಸಂಸ್ಥೆ ವತಿಯಿಂದ ಇಂದು ನಗರದ ಜನರಿಗೆ ಉಚಿತ ಕಣ್ಣು ತಪಾಸಣೆ,ವೈದ್ಯರ ಸಲಹೆ,ಆರೋಗ್ಯ ಶಿಬಿರವನ್ನು ಏರ್ಪಡಿಸಿದ್ದೇವೆ ಇನ್ನು ಮುಂದೆ ವರ್ಷಕ್ಕೆ ಒಮ್ಮೆ ನಮ್ಮ ಎನ್.ಜಿ.ಓ.ವತಿಯಿಂದ ಸಾರ್ವಜನಿಕರಿಗೆ ಆರೋಗ್ಯ ಶಿಬಿರ ಮತ್ತು ಕಣ್ಣು ತಪಾಸಣೆಯನ್ನು ಉಚಿತವಾಗಿ ಮಾಡಲಿದ್ದೇವೆ ಎಂದು ತಿಳಿಸಿದರು.

ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾದ ಹೆಬ್ಬಳಲು ಚಂದ್ರಶೇಖರ್ ಮಾತನಾಡುತ್ತಾ ಇಂದು ನಗರದಲ್ಲಿ ಜನರಿಗೆ ಉಚಿತವಾಗಿ ಕಣ್ಣು ತಪಾಸಣೆ,ಆರೋಗ್ಯ ತಪಾಸಣೆ ಮಾಡುತ್ತಿರುವುದು ಹೆಮ್ಮೆಯ ವಿಚಾರ,ಎನ್.ಜಿ.ಓ.ಗಳು ಜನರ ಕಷ್ಟಗಳಿಗೆ ಸ್ಪಂದಿಸಬೇಕು,ಅದರಲ್ಲೂ ಬಡಜನರ ಸಮುದಾಯ ಅಭಿವೃದ್ಧಿ,ಬಡಜನರ ಆರೋಗ್ಯ,ರೋಗ-ರುಜಿನಬಗ್ಗೆ ಅರಿವು,ವೈದ್ಯರ ಸಲಹೆಗಳನ್ನು ನೀಡುವಂತಹ ಇಂತಹ ಕಾರ್ಯಕ್ರಮ ಜನ ಮೆಚ್ಚುಗೆ ಪಡೆಯುತ್ತಿದೆ ಇದೇ ದೇಶ ಸೇವೆ ಭಗವಂತನ ಸೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಕಲ್ಪ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ಎನ್.ಜಿ.ಓದ ಕಾರ್ಯದರ್ಶಿ ಗೀತಾನಾಗೇಶ್, ಜ್ಯೋತಿ, ಶ್ರೀನಿವಾಸಮೂರ್ತಿ ,ವಾಸನ್ ಕಣ್ಣಿನ ಆಸ್ಪತ್ರೆಯ ಸಿಬ್ಬಂದಿಗಳಾದ ನಾಗರಾಜು,ರಾಕೇಶ್,ದೀಪಿಕಾ ಮುಂತಾದವರು ಉಪಸ್ಥಿತರಿದ್ದರು.
ಈ ಶಿಬಿರದಲ್ಲಿ ಸುಮಾರು 2೦೦ಕ್ಕೂ ಹೆಚ್ಚು ಜನರು ಆಗಮಿಸಿ ಕಣ್ಣು ತಪಾಸಣೆ ಮಾಡಿಸಿಕೊಂಡರು.
- ಕೆ.ಬಿ.ಚಂದ್ರಚೂಡ