ಚಿಕ್ಕಮಗಳೂರು, ಮೇ.05:- ನಗರದ ಸರ್ಕಾರಿ ಮಹಿಳಾ ಆಸ್ಪತ್ರೆಯಲ್ಲಿ ದಸಂಸ ಮಹಿಳಾ ಸಂಚಾಲಕಿ ಗೀತಾ ಅವರ ಜನ್ಮದ ಪ್ರಯುಕ್ತ ಬಾಣಂತಿಯರಿಗೆ ಹಣ್ಣು ವಿತರಿಸಿ ಮತ್ತು ರಕ್ತದಾನ ಮಾಡುವ ಮೂಲಕ ಭಾನುವಾರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರಾದ ಕಬ್ಬಿಕೆರೆ ಮೋಹನ್ ಕುಮಾರ್, ಓಬಿಸಿ ಸಂಚಾಳಕ ಜಿ.ಸತ್ಯನಾರಾಯಣ್, ದೌರ್ಜನ್ಯ ನಿಯಂತ್ರಣ ಸಮಿತಿ ಸದಸ್ಯ ಹುಣಸೇಮಕ್ಕಿ ಲಕ್ಷ್ಮಣ್, ಭೂಮಿಕಾ ಟಿವಿ ಸಂಪಾದಕ ಅನಿಲ್‌ಆನಂದ್, ಮುಖಂಡ ಉಮೇಶ್ ರಾಜ್, ಸೋನಿಕ, ಶ್ರೇಯಸ್ ಇದ್ದರು.
- ಸುರೇಶ್ ಎನ್.