ಮಧುಗಿರಿ;ಬಲಿಜ ಸಮುದಾಯದ ಜಿ ಆರ್ ಸುಜಾತ ಶಂಕರ್ ರವರು ಪುರಸಭೆಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದು ಅವರನ್ನು ತಾಲೂಕಿನ ಬಲಿಜ ಸಂಘದ ಮುಖಂಡರು ಸನ್ಮಾನಿಸಿದರು.
ಬಲಿಜ ಸಮುದಾಯದ ಹೆಣ್ಣುಮಗಳೊಬ್ಬರು ಉನ್ನತ ಸ್ಥಾನಕ್ಕೇರಿರುವುದು ಸಮುದಾಯಕ್ಕೆ ಸಂತಸ ತಂದಿದೆ.ಪಟ್ಟಣದಲ್ಲಿ ಸಾಕಷ್ಟು ಸಮಸ್ಯೆಗಳಿದ್ದು ಅವುಗಳ ನಿವಾರಣೆಗೆ ನಿಮ್ಮಿಂದ ಪ್ರಾಮಾಣಿಕ ಕೆಲಸಗಳಾಗಲಿ ಎಂದು ಸಂಘದ ಸದಸ್ಯರಾದ ಎಂ.ವೆಂಕಟರಾಮು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಸಂಘದ ಸದಸ್ಯರುಗಳಾದ ಉಮೇಶ್ ಬಾಬು, ಯತೀಶ್ ಬಾಬು,ಪೂಲಾ ವೆಂಕಟೇಶ್ ಮುಂತಾದವರು ಇದ್ದರು.
ವರದಿ- ಸುದರ್ಶನ್ ಮಧುಗಿರಿ