ಮೂಡಿಗೆರೆ-ಹಿಂದೂ ಧರ್ಮದ ವಿವಿಧ ಆಚರಣೆಗಳ ನಡೆಸಲು ಅಡ್ಡಿಪಡಿಸಲಾಗುತ್ತಿದೆ.ಇದನ್ನು ಪ್ರಶ್ನಿಸದಿದ್ದರೆ ನಮ್ಮ ಧರ್ಮ ಹಾಗೂ ದೇಶ ಸಂಕಷ್ಟಕ್ಕೆ ಸಿಲುಕುವ ಅಪಾಯವಿದೆ-ಶ್ರೀ ರಾಜಶೇಖರಾನಂದ ಸ್ವಾಮೀಜಿ

ಮೂಡಿಗೆರೆ:ಹಿಂದೂ ಧರ್ಮದ ವಿವಿಧ ಆಚರಣೆಗಳ ನಡೆಸಲು ಅಡ್ಡಿಪಡಿಸಲಾಗುತ್ತಿದೆ.ಇದನ್ನು ಪ್ರಶ್ನಿಸದಿದ್ದರೆ ನಮ್ಮ ಧರ್ಮ ಹಾಗೂ ದೇಶ ಸಂಕಷ್ಟಕ್ಕೆ ಸಿಲುಕುವ ಅಪಾಯವಿದೆ ಎಂದು ಗುರುಪುರದ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ತಿಳಿಸಿದರು.

ಅವರು ಶುಕ್ರವಾರ ಪಟ್ಟಣದ ಅಡ್ಯಂತಾಯ ರಂಗಮoದಿರದಲ್ಲಿ ಸಾರ್ವಜನಿಕ ಶ್ರೀ ಮಹಾ ಗಣಪತಿ ಸೇವಾ ಸಮಿತಿ ವತಿಯಿಂದ ಏರ್ಪಡಿಸಿದ್ದ 108 ತೆಂಗಿನಕಾಯಿ ಗಣಪತಿ ಹೋಮ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ
ಮಾತನಾಡಿದರು.

ಈ ದೇಶದ ಸರ್ವ ಧರ್ಮಿಯರು ಒಗ್ಗಟ್ಟು ಮತ್ತು ಸಾಮರಸ್ಯದಿಂದ ಬದುಕಬೇಕೆಂಬ ಉದ್ದೇಶದಿಂದ ಬಾಲಗಂಗಾಧರ್ ತಿಲಕ್ ಅವರು ಸ್ವತಂತ್ರ ಪೂರ್ವದಲ್ಲೇ ಗಣಪತಿ ಉತ್ಸವಾಚರಣೆಯನ್ನು ಪ್ರಾರಂಭಿಸಿದರು.ಇದನ್ನು ಅರಿತುಕೊಂಡು ತಿಲಕರ ಆಶಯವನ್ನು ಪರಿಪಾಲಿಸುವುದು ಪ್ರತಿಯೊಬ್ಬ ಭಾರತೀಯರ ಕರ್ತವ್ಯವಾಗಿದೆ.

ನಮ್ಮ ಯುವ ಜನತೆ ವಿದೇಶಿ ಸಂಸ್ಕೃತಿಯತ್ತ ಮಾರು ಹೋಗುತ್ತಿದ್ದಾರೆ.ಪೋಷಕರು ಹಾಗೂ ಮಕ್ಕಳ ನಡುವೆ ಇರುವ
ಅಮೂಲ್ಯ ಸಂಬoಧ ಕಳಚಿ,ಅಂತರ ಸೃಷ್ಟಿಯಾಗುತ್ತಿದೆ.ಯುವ ಜನಾಂಗ ಮಾದಕ ವಸ್ತುಗಳಿಗೆ ಬಲಿಯಾಗುತ್ತಿದೆ.ಇದರ ನಡುವೆ ಹೊಲಸು ರಾಜಕಾರಣದಿಂದಾಗಿ ಧರ್ಮ,ಜಾತಿ ಹೆಸರಿನಲ್ಲಿ ನಿರಂತರ ಗಲಭೆ ಹಾಗೂ ಅಶಾಂತಿ ಉoಟಾಗುತ್ತಿದೆ.

ಬಾಲ ಗಂಗಾಧರ್ ತಿಲಕ್ ಅವರು ಹಿಂದೂ ಸಂಸ್ಕೃತಿ,ಶಿಕ್ಷಣ,ಸ್ವದೇಶಿ ಪರಂಪರೆ ಉಳಿಯಬೇಕು.ಮಾದಕ ವಸ್ತುಗಳು ಸಂಪೂರ್ಣ ನಿಯoತ್ರಣವಾಗಬೇಕು.ಸ್ವಾತಂತ್ರ್ಯದಿಂದ ಎಲ್ಲವೂ ಸದೃಢವಾಗುತ್ತದೆ ಎಂಬ ಕನಸು ಕಂಡಿದ್ದರು. ಆದರೆ ಈಗ ಅಶಾಂತಿ, ಧರ್ಮ ಧರ್ಮಗಳ ನಡುವೆ ಗಲಭೆಗಳು ಹೆಚ್ಚಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್, ಗಣಪತಿ ಸೇವಾ ಸಮಿತಿ ಅಧ್ಯಕ್ಷ ಪಿ.ಜಿ.ಅನುಕುಮರ್, ಹಾಸ್ಯನಟ ರಮೇಶ್ ಯಾದವ್, ಮಂಚೇಗೌಡ, ದೀಪಕ್ ದೊಡ್ಡಯ್ಯ, ಯೋಗೇಶ್ ಪೂಜಾರಿ ಮತ್ತಿತರರಿದ್ದರು.

……………………………..ವಿಜಯಕುಮಾರ್-ಮೂಡಿಗೆರೆ

Leave a Reply

Your email address will not be published. Required fields are marked *

× How can I help you?