ಹಾಸನ;ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ನರಸೀಪುರ ಗ್ರಾಮದ ಸಂಶೋಧನಾ ವಿದ್ಯಾರ್ಥಿ ಗಿರಿಯಪ್ಪ ಎನ್.ಜಿ ರವರಿಗೆ ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯದ ಡಾ. ಆರ್.ಸಿ.ಹಿರೇಮಠ ಕನ್ನಡ ಅಧ್ಯಯನ ವಿಭಾಗದಿಂದ ಅವರು ಮಂಡಿಸಿದ ಮಾದಿಗ ಜನಾಂಗದ ವೃತ್ತಿ ಮತ್ತು ಕುಲ ಸಂಬಂಧಿ ಆಚರಣೆಗಳು (ಹಾಸನ ಜಿಲ್ಲೆ ಅನುಲಕ್ಷಿಸಿ) ಎಂಬ ಪ್ರೌಢ ಪ್ರಬಂಧಕ್ಕೆ ಕರ್ನಾಟಕ ವಿಶ್ವ ವಿದ್ಯಾಲಯವು ಪಿ.ಹೆಚ್.ಡಿ ಪದವಿ ಪ್ರದಾನ ಮಾಡಿದೆ.
ಕನ್ನಡ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ನಿಂಗಪ್ಪ ಎನ್ ಹಳ್ಳಿ ಅವರ ಮಾರ್ಗದರ್ಶನದಲ್ಲಿ ಈ ಸಂಶೋಧನಾ ಪ್ರಬಂಧವನ್ನು ಮಂಡಿಸಲಾಗಿದೆ.ಡಾಕ್ಟರೇಟ್ ಪದವಿ ಪುರಸ್ಕೃತರು ಪ್ರಸ್ತುತ ಹಳೇಬೀಡಿನ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಕನ್ನಡ ಭಾಷಾ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಕರ್ನಾಟಕ ವಿಶ್ವವಿದ್ಯಾಲಯದಿಂದ 74ನೇ ವಾರ್ಷಿಕ ಘಟಿಕೋತ್ಸವದಲ್ಲಿ ಉನ್ನತ ಶಿಕ್ಷಣ ಸಚಿವರಾದ ಡಾ.ಎಂ.ಸಿ.ಸುಧಾಕರ್ ಅವರ ಉಪಸ್ಥಿತಿಯಲ್ಲಿ ಡಾಕ್ಟರೇಟ್(ಪಿಹೆಚ್.ಡಿ)ಪದವಿ ಪ್ರಮಾಣ ಪತ್ರ ವಿತರಿಸಲಾಗಿದೆ.
ಇವರ ಈ ಸಾಧನೆಗೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಹಾಗೂ ಕುಟುಂಬ ವರ್ಗದವರು ಶುಭ ಹಾರಿಸಿದ್ದಾರೆ.