ಮಂಡ್ಯ – ಪಟ್ಟಣದ ಬನ್ನೂರು ರಸ್ತೆಯಲ್ಲಿರುವ ಅಂತರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸ್ವರ್ಣಿಮ ಮಹೋತ್ಸವ ಹಾಗೂ ಈಶ್ವರೀಯ ಸೇವಾಧಾರಿಗಳ ಸಮರ್ಪಣಾ ಸಮಾರಂಭವನ್ನು ಒಳಕ್ರೀಡಾಂಗಣದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮೈಸೂರು ಉಪ ವಿಭಾಗದ ಮುಖ್ಯ ಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿ ಲಕ್ಷ್ಮೀಜಿ ಮಾತನಾಡಿ, ಈಶ್ವರನ ಸೇವೆಯಲ್ಲಿ ಸಮರ್ಪಣೆ ಯಾಗುವುದು ಎಂದರೆ ಸತ್ಯತೆ ಮತ್ತು ಸಭ್ಯತೆಯನ್ನು ತಮ್ಮ ಜೀವನದ ಅಂಗವನ್ನಾಗಿ ಮಾಡಿಕೊಳ್ಳಲು ಬಹಳ ಅವಶ್ಯಕತೆ ಇದೆ ಸೇವಾಧಾರಿಗಳ ಮುಖದಲ್ಲಿ ಜ ಚಲನೆಯಲ್ಲಿ ಸತ್ಯತೆ ಮತ್ತು ಸಭ್ಯತೆಯ ಸಂಸ್ಕಾರ ಪ್ರತ್ಯಕ್ಷವಾಗಿರಬೇಕು ಯಾರೇ ಎದುರಿಗೆ ಬಂದರೂ ಮುಗುಳ್ನಗುತ್ತಾ ಅವರ ಸಂಪರ್ಕದಲ್ಲಿ ಬರಬೇಕು ಎಂದೂ ಯಾರ ಜೊತೆಯಲ್ಲಿ ಮುನಿಸಿಕೊಳ್ಳಬಾರದು.
ಪ್ರತಿಯೊಬ್ಬರಿಗೂ ಸುಖವನ್ನು ಕೊಡುವಂತ ಕರ್ಮಮಾಡಬೇಕು ದುಃಖವನ್ನು ಕೊಡುವಂತಹದಲ್ಲ ಎಂದು ತಿಳಿಸಿದರು. ಪಟ್ಟಣದಲ್ಲಿ 1975ರಲ್ಲಿ ಚಿಕ್ಕದಾದ ಪ್ರಮಾಣದಲ್ಲಿ ಆರಂಭವಾದ ಈ ಆಧ್ಯಾತ್ಮಿಕ ಶಾಖೆ ಇಂದು ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಹಳ್ಳಿಯವರೆಗೂ ಸೇವಾ ವಿಸ್ತಾರವೂ ಅನೇಕರ ಜೀವನದಲ್ಲಿ ದುಃಖ ಶಾಂತಿ ದೂರವಾಗಿ ಸುಖ ಶಾಂತಿಮಯ ಜೀವನವನ್ನು ಮಾಡಿಕೊಂಡಿರುತ್ತಾರೆ ಈ ಸೇವೆಯಲ್ಲಿ ತೊಡಗಿದ ಅನೇಕರಿಗೆ ಸನ್ಮಾನವನ್ನು ಮಾಡಲಾಯಿತು ಹಾಗೂ ಇದೇ ಸಂದರ್ಭದಲ್ಲಿ ಈಶ್ವರೀಯ ಸೇವಾಧಾರಿಗಳಾಗಿ ಗೀತಾಂಜಲಿ ಭುವನ ಗಿರಿಜಾ ಪ್ರಶಾಂತ ಶಾಂತರಾಜು ಸಮರ್ಪಣೆ ಹೊಂದಿದರು.

ಕಾರ್ಯಕ್ರಮದಲ್ಲಿ ಮಂಡ್ಯ ಈಶ್ವರೀಯ ವಿಶ್ವವಿದ್ಯಾಲಯಗಳ ಜಿಲ್ಲಾ ಸಂಚಾಲಕಿ ರಾಜಯೋಗಿನಿಙ ಬ್ರಹ್ಮಾಕುಮಾರಿ ಶಾರದಾಜಿ ರಾಜಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರೀಜಿ ಪ್ರಭಾಮಣೀಜೀ ರತ್ನಾಜೀ ಮೀನಾಜಿ ಗಾಯತ್ರೀಜೀ ಧನಲಕ್ಷ್ಮೀಜಿ ಮೀನಾಕ್ಷೀಜೀ, ತಿಮ್ಮಯ್ಯಣ್ಣ, ಓಂಶಾಂತಿ ನ್ಯೂಸ್ ಸರ್ವಿಸ್ನ ಬಿಕೆ ಆರಾಧ್ಯ ಹಾಜರಿದ್ದರು