ಮೂಡಿಗೆರೆ:ಗ್ರಾಮಸ್ಥರ ಉಪಯೋಗಕ್ಕಾಗಿ ಸರ್ಕಾರ ನಿರ್ಮಿಸಿರುವ ಮಣ್ಣಿಕೆರೆ ಗ್ರಾಮದ ಸಮುದಾಯಭವನವನ್ನು ಹಾವೇರಿ ಮೂಲದ ಗುತ್ತಿಗೆದಾರನೊಬ್ಬ ರಾಷ್ಟ್ರೀಯ ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿ ನಡೆಸಲು ಕಾಮಗಾರಿಯ ಸಿಮೆಂಟ್ ಮತ್ತಿತರೆ ಸಲಕರ ಣೆಗಳನ್ನು ಸಂಗ್ರಹಿಸಿಡಲು ಕಾನೂನು ಬಾಹಿರವಾಗಿ ಗೋಡಾನ್ ಮಾಡಿಕೊಂಡಿದ್ದು ಇದರಿಂದ ಗ್ರಾಮದಲ್ಲಿ ಸಭೆ ಸಮಾರಂಭ ನಡೆಸಲು ದೂರದ ಊರುಗಳ ಸಭಾಭವನಗಳನ್ನು ಬಾಡಿಗೆಗೆ ಪಡೆಯಬೇಕಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಗ್ರಾಮದಲ್ಲಿ ಈ ಹಿಂದೆ ಸಮುದಾಯ ಭವನವಿರಲಿಲ್ಲ.ಗ್ರಾಮಸ್ಥರ ಒತ್ತಾಯಕ್ಕೆ ಮಣಿದ ಜಿಲ್ಲಾಡಳಿತ ಕಳೆದ 4 ವರ್ಷದ ಹಿಂದೆ ಗ್ರಾಮದಲ್ಲಿ ಸಮುದಾಯಭವನ ನಿರ್ಮಿಸಿಕೊಟ್ಟಿದ್ದು ನಂತರದ ದಿನಗಳಲ್ಲಿ ಅದರಲ್ಲಿ ಅನೇಕ ಕಾರ್ಯಕ್ರಮಗಳನ್ನು ನಡೆಸಲಾಗಿತ್ತು.
ಕಳೆದ 8 ತಿಂಗಳಿನಿ0ದ ಜಲಜೀವನ್ ಮಿಷನ್ ಗುತ್ತಿಗೆದಾರರೊಬ್ಬರು ಅದರಲ್ಲಿ ಸಿಮೆಂಟ್ ಮತ್ತು ಕಾಮಗಾರಿಯ ಸಲಕರಣೆಗಳನ್ನು ಸಂಗ್ರಹಿಸಿಟ್ಟ ನoತರ ಭವನ ಸಂಪೂರ್ಣ ಶಿಥಿಲಗೊಂಡಿದೆ. ಈ ಬಗ್ಗೆ ಗೋಣೀಬೀಡು ಗ್ರಾ.ಪಂ.ಅಧಿಕಾರಿಗಳನ್ನು ಪ್ರಶ್ನಿಸಿದರೆ ಬೇಜವಬ್ದಾರಿ ಉತ್ತರವನ್ನು ನೀಡುತ್ತಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಈ ಬಗ್ಗೆ ತಾ.ಪಂ.ಇಒ ದಯಾವತಿ ಮತ್ತು ಜಿ.ಪಂ.ಸಿಇಒ ಕೀರ್ತನಾ ಅವರಿಗೆ ಗ್ರಾಮಸ್ಥರು ದೂರು ನೀಡಿದ್ದು ಭವನದಲ್ಲಿ ಸಂಗ್ರಹಿಸಿಟ್ಟದ್ದ ಸಿಮೆಂಟ್ ಮತ್ತಿತರೆ ವಸ್ತುಗಳನ್ನು ತೆರೆವುಗೊಳಿಸಿ ಕಟ್ಟಡವನ್ನು ದುರಸ್ತಿಗೊಳಿಸಿ ಕೊಡಬೇಕು. ಅಕ್ರಮವಾಗಿ ಸಿಮೆಂಟ್ ಸಂಗ್ರಹ ಮಾಡಿದ ಗುತ್ತಿಗೆದಾರನ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಸರ್ಕಾರದ ಅನುದಾನದಲ್ಲಿ ನಿರ್ಮಿಸಿದ್ದ ಸಮುದಾಯಭವನದಲ್ಲಿ ಗುತ್ತಿಗೆದಾರನೊಬ್ಬ ಅಕ್ರಮವಾಗಿ ಸಿಮೆಂಟ್ ಮತ್ತಿತರೆ ಸಲಕರಣೆಗಳನ್ನು ಸಂಗ್ರಹಿಸಿಟ್ಟು ಭವನವನ್ನು ದರುರುಪಯೋಗಪಡಿಸಿಕೊಂಡಿದ್ದಾರೆ. ಈ ಬಗ್ಗೆ ಗ್ರಾ.ಪಂ. ತಾ.ಪಂ. ಜಿ.ಪಂ.ಗೆ ದೂರು ನೀಡಲಾಗಿದೆ. ಭವನದಲ್ಲಿ ಶೇಖರಿಸಿಟ್ಟಿರುವ ಸಾಮಗ್ರಗಳನ್ನು ಅಧಿಕಾರಿಗಳು ಹೊರಹಾಕಿ
ಗುತ್ತಿಗೆದಾರನ ವಿರುದ್ದ ಕ್ರಮ ಕೈಗೊಳ್ಳಬೇಕು
–ಸುನಿಲ್,ಮಣ್ಣಿಕೆರೆ ನಿವಾಸಿ.
ಕಳೆದ 8 ತಿಂಗಳ ಹಿಂದೆ ಗುತ್ತಿಗೆದಾರರೊಬ್ಬರು ಜೆಜೆಎಂ ಕಾಮಗಾರಿಯ ಸಿಮೆಂಟ್ ಮತ್ತಿತರೆ ಸಲಕರಣೆಗಳನ್ನು ಸಂಗ್ರಹಿಸಿಟ್ಟುಕೊಳ್ಳಲು ಸಮುದಾಯ ಭವನ ನೀಡುವಂತೆ ಗ್ರಾ.ಪo.ಗೆ ಮನವಿ ನೀಡಿದ್ದರು.
ಮಣ್ಣಿಕೆರೆ ಗ್ರಾಮದ ಗ್ರಾ.ಪಂ.ಸದಸ್ಯರ ಒಪ್ಪಿಗೆ ಪಡೆದ ನಂತರ ಒಪ್ಪಿಗೆ ನೀಡಲಾಗಿದೆ. ಸಂಗ್ರಹಿಸಿಟ್ಟರುವ ಸಿಮೆಂಟ್ ತೆರೆವುಗೊಳಿಸಿದ ನಂತರ ಭವನವನ್ನು ಸ್ವಚ್ಛಗೊಳಿಸಿ ಕೊಡಬೇಕೆಂದು ಷರತ್ತು ವಿಧಿಸಲಾಗಿದೆ. ಭವನದ ಉಸ್ತುವಾರಿ ಗ್ರಾ.ಪಂ. ವಹಿಸಿಕೊoಡಿದೆ. ಬೇರೆ ಕಟ್ಟಡವಿಲ್ಲದಿರುವುದರಿಂದ ಇದೇ ಭವನವನ್ನು ಗುತ್ತಿಗೆದಾರರಿಗೆ ನೀಡಲಾಗಿತ್ತು. ಅವರಿಗೆ ವಿಧಿಸಿರುವ ಶರತ್ತಿನಂತೆ ಸಿಮೆಂಟ್ ಮತ್ತಿತರೆ ಪರಿಕರಗಳನ್ನು ತೆರೆವುಗೊಳಿಸಿ ಕಟ್ಟಡವನ್ನು ಸ್ವಚ್ಛಗೊಳಿಸಿಕೊಡಲು ಗುತ್ತಿಗೆದಾರರಿಗೆ ತಿಳಿಸಲಾಗಿದೆ
–ಜಿ.ಎಸ್.ದಿನೇಶ್ ಗೋಣೀಬೀಡು ಗ್ರಾ.ಪಂ.ಅಧ್ಯಕ್ಷ
—————--ವಿಜಯಕುಮಾರ್.ಟಿ.ಮೂಡಿಗೆರೆ