ಕೊರಟಗೆರೆ– ಶಿಕ್ಷಣ ನೀಡಿದ ಗುರುಗಳನ್ನು ಸ್ಮರಿಸುವ ಮೂಲಕ ಮಾದರಿ ಕಾರ್ಯಕ್ರಮ ಮಾಡಿ ಶಾಲೆಯ ಹಳೆಯ ನೆನಪುಗಳು, ಪರಿಶ್ರಮ, ಶಿಕ್ಷಣದ ಮಹತ್ವ ಹಾಗೂ ಗುರುವಿನ ಶ್ರೇಷ್ಠತೆಯನ್ನು ತಿಳಿಸುತ್ತದೆ ಎಂದು ನಿವೃತ್ತ ಮುಖ್ಯ ಶಿಕ್ಷಕ ಕೆ.ಎಂ.ನಾಗಪ್ಪ ತಿಳಿಸಿದರು.
ಅವರು ಪಟ್ಟಣದ ಕಾಳಿದಾಸ ಪ್ರೌಢಶಾಲೆಯ 1993 ನೇ ಸಾಲಿನ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಗುರುವಂದನೆ ಸ್ವೀಕರಿಸಿ ಮಾತನಾಡಿ, ಈ ಕಾರ್ಯಕ್ರಮದಿಂದ ಅಕ್ಷರ ಕಲಿಸಿದ ಗುರುಗಳ ಕುರಿತು ವಿದ್ಯಾರ್ಥಿಗಳು ಹೊಂದಿರುವ ಗೌರವ, ಪ್ರೀತಿ ವಿಶ್ವಾಸ ಪ್ರಚರ ಪಡಿಸಲು ಹಾಗೂ ಹಳೆ ವಿದ್ಯಾರ್ಥಿಗಳು ಒಂದೆಡೆ ಸೇರಿ ವಿದ್ಯಾರ್ಥಿ ಜೀವನದ ನೆನಪುಗಳನ್ನು ಮೆಲುಕು ಹಾಕಲು ಇದೊಂದು ಒಳ್ಳೆಯ ಸಂದರ್ಭ ಎಂದ ಅವರು ಕಾಳಿದಾಸ ಪ್ರೌಢಶಾಲೆಯು 1975 ರಲ್ಲಿ ಬೆರಳೆಣಿಕೆ ಯಷ್ಟು ವಿದ್ಯಾರ್ಥಿಗಳಿಂದ ಪ್ರಾರಂಭವಾಗಿ 750 ಕ್ಕೂ ಹೆಚ್ಚು ವಿಧ್ಯಾಥಿಗಳು ದಾಖಲಾತಿಯಾಗಿ ತಾಲೂಕು ಮತ್ತು ಜಿಲ್ಲೆಯಲ್ಲಿಯೇ ಉತ್ತಮ ಶಾಲೆ ಎಂಬ ಹೆಸರು ಗಳಿಸಿದೆ ಇತಿಹಾಸವನ್ನು ನೆನೆದು ಮುಂದಿನ ದಿನಗಳಲ್ಲಿಯೂ ಪ್ರಸ್ತುತ ಕಾರ್ಯನಿರ್ವಹಿಸುವ ಶಿಕ್ಷಕ ವೃಂದ ಶಾಲೆಯ ಹೆಸರು ಉಳಿಸುವಂತೆ ಕಿವಿಮಾತು ಹೇಳಿದರು.

ಹಿರಿಯ ನಿವೃತ್ತ ಶಿಕ್ಷಕ ಹನುಮಂತರಾಯಪ್ಪ ಮಾತನಾಡಿ 1993 ನೇ ಸಾಲಿನ ಹತ್ತನೇ ತರಗತಿ ಎ ವಿಭಾಗದ ವಿದ್ಯಾರ್ಥಿಗಳು ಗುರುಗಳನ್ನು ಸ್ಮರಿಸುವ ಮೂಲಕ ಮಾದರಿ ಕಾರ್ಯಕ್ರಮ ಮಾಡಿದ್ದು ಶ್ಲಾಘನೀಯ ಗುರು-ಶಿಷ್ಯರ ಸಂಬಂಧ ದೊಡ್ಡದು ಎಂದು ನಿರೂಪಿಸಿದ್ದಾರೆ ಎಂದು ತಿಳಿಸಿದರು.
ಶಾಲೆಯ ಹಳೆ ವಿದ್ಯಾರ್ಥಿ ಹಾಗೂ ಸಮಾಜದ ಮುಖಂಡ ಕೇಬಲ್ ಎಂ.ಎಸ್.ಸೈಫುಲ್ಲಾ ಮಾತನಾಡಿ ನಮ್ಮ ಶಾಲಾ ಅವಧಿಯಲ್ಲಿ ಸೇವೆ ಸಲ್ಲಿಸಿದ ಗುರುಗಳಿಗೆ ಅಭಿನೆಂದನೆ ಸಲ್ಲಿಸುವ ಮೂಲಕ ವಿದ್ಯಾರ್ಥಿ ಜೀವನದ ನೂರಾರು ನೆನಪುಗಳು ಕಣ್ಣು ಮುಂದೆ ಬರುವಂತೆ ಮಾಡಿದೆ. ಗುರುವಿನ ಶ್ರೇಷ್ಠತೆಗೆ ವಿದ್ಯಾರ್ಥಿ ಜೀವನದಲ್ಲಿ ತಿಳಿಯುವುದಕ್ಕಿಂತ ವೃತ್ತಿ ಜೀವನದ ಪಯಣದಲ್ಲಿ ತಿಳಿಯುವುದು ಹೆಚ್ಚು ಗುರುಗಳ ಮಾರ್ಗದರ್ಶನದಲ್ಲಿ ನಾವು ವಿದ್ಯೆ ಸಂಸ್ಕಾರವನ್ನು ಕಲಿತು ನಮ್ಮ ಜೀವನದಲ್ಲಿ ಆಳವಡಿಸಿಕೊಂಡಿರುವುದರಿಂದ ಸಮಾಜದಲ್ಲಿ ದೊಡ್ಡಮಟ್ಟದಲ್ಲಿ ಬೆಳೆಯಲು ಸಾಧ್ಯವಾಗಿದೆ ಎಂದು ತಿಳಿಸಿದರೆ.
ಹಳೆ ವಿದ್ಯಾರ್ಥಿ ಹಾಗೂ ಉದ್ಯಮಿ ಮಲ್ಲಿಕಾಜರ್ಯನ್ ಮಾತನಾಡಿ ತಾಯಿಯಿಂದ ಉಸಿರು ಬರುತ್ತದೆ. ತಂದೆಯಿಂದ ಹೆಸರು ಬರುತ್ತದೆ. ಆದರೆ ಗುರುವಿನಿಂದ ಉಸಿರಿರುವರೆಗೂ ಹೆಸರು ಬರುವ ವಿದ್ಯೆ ಬರುತ್ತದೆ. ಬದುಕಿನ ಮೌಲ್ಯ ತಿಳಿಸುವ ಶಿಕ್ಷಕರನ್ನು ಸ್ಮರಿಸುವ ಹಾಗೂ ಗೌರವಿಸುವ ಅವಕಾಶ ನಮಗೆ ದೊರೆತಿದ್ದು ನಮ್ಮ ಸೌಭಾಗ್ಯ ಎಂದರು.

ಹಳೆ ವಿಧ್ಯಾರ್ಥಿ ಹಾಗೂ ಶಿಕ್ಷಕಿ ಉಷಾ ಮಾತನಾಡಿ ಹಳೆ ವಿಧ್ಯಾರ್ಥಿಗಳಾದ ನಾವುಗಳು ಕಳೆದ 30 ವರ್ಷಗಳ ನಂತರ ಒಂದೆಡೆ ಸೇರಿ ಕೇವಲ ಪಠ್ಯವಲ್ಲದೆ ಮೌಲ್ಯಾಧಾರಿತ ಶಿಕ್ಷಣ ನೀಡಿದ ಗುರುಗಳ ಆಶ್ರೀರ್ವಾದೊಂದಿಗೆ ವಿದ್ಯಾರ್ಥಿ ಜೀವನದ ನೆನೆಪುಗಳು ಮೆಲುಕು ಹಾಕಲು ಇದೊಂದು ಒಳ್ಳೆಯ ಸಂದರ್ಭ ಎಂದರು.
ಕಾರ್ಯಕ್ರಮದಲ್ಲಿ 1993 ಸಾಲಿನಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ್ದ ನಿವೃತ್ತ ಹಿರಿಯ ಶಿಕ್ಷಕರುಗಳಾದ ಕನ್ನಡ ನಿವೃತ್ತ ಶಿಕ್ಷಕ ಮಲ್ಲೇಶಯ್ಯ, ಜಿ.ಶಿವಣ್ಣ, ಜಿ.ಸಾವಿತ್ರಮ್ಮ. ಕೆ.ವಿ.ತಿಮ್ಮಾಜಮ್ಮ, ರಾಮಕೃಷ್ಣಯ್ಯ, ಎನ್.ಪದ್ಮನಾಭಯ್ಯ, ರಂಗಶ್ಯಾಮಯ್ಯ ರವರನ್ನು ಸ್ಥಾನಿಸಿಗೌರವಿಸಿದರು. ಇದರೊಂದಿಗೆ ಶಾಲಾ ಆಡಳಿತ ಮಂಡಲಿಯ ನಿರ್ದೇಶಕ ಜಿ. ಡಿ.ನಾಗಭೂಷಣ್, ಮುಖ್ಯ ಶಿಕ್ಷಕಿ ಸೀತಾದೇವಿ, ಶಾಲೆಗೆ ಕಂಪ್ಯೂಟರ್‌ಗಳನ್ನು ನೀಡಿದ ಹಳೆ ವಿದ್ಯಾರ್ಥಿ ಬಾಲಾಜಿ ದರ್ಶನ್ ರವರನ್ನು ಗೌರವಿಸಿದರು.
1993 ನೇ ಸಾಲಿನ ವಿದ್ಯಾರ್ಥಿಗಳು ಶಾಲೆಯ ಬಿಸಿ ಊಟದ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಕುಡಿಯುವ ನೀರು ಮತ್ತು ಕೈತೊಳೆಯುವ ನೀರಿನ ವ್ಯವಸ್ಥೆಯನ್ನು ನಿರ್ಮಿಸಿ ಕೊಟ್ಟು ಇನ್ನಿತರ ಹಳೆ ವಿದ್ಯಾರ್ಥಿಗಳು ಮಾದರಿಯಾದರು.
ಕಾರ್ಯಕ್ರಮದಲ್ಲಿ 1993 ನೇ ಸಾಲಿನ ಹಳೆ ವಿಧ್ಯಾರ್ಥಿಗಳಾದ ಎಂ.ಪಿ.ಶತೀಶ್, ಪ್ರಸನ್ನಕುಮಾರ್, ಕಂದಾಯ ಇಲಾಖೆಯ ನಟರಾಜು, ಡಾ.ರೇಣುಕಾ, ಹೇಮಮಾಲಿನಿ, ಎಂ.ವೀಣಾಶ್ರೀ, ಇಂದ್ರಾಣಿ, ಗೀತಾ, ಪಾತಿಮಾ ಬೇಗಂ, ಶ್ರೀನಿವಾಸ್, ವಿನಯ್, ಲಕ್ಷ್ಮೀ ಪ್ರಸಾದ್, ಸೈಯದ್‌ಗೌಸ್, ಅಜ್ಜರ್‌ಭಾಷ, ಮೋಹನ್ ಸೇರಿದಂತೆ ಇನ್ನಿತರ ಹಾಜರಿದ್ದರು.
– ಶ್ರೀನಿವಾಸ್ ಕೊರಟಗೆರೆ