ಎಚ್.ಡಿ. ಕೋಟೆ – ಮಕ್ಕಳು ಮೌಲ್ಯಾಧಾರಿತ ಮತ್ತು ಗುಣಮಟ್ಟದ ಶಿಕ್ಷಣವನ್ನು ಪಡೆಯಬೇಕೆಂದರೆ ಮೊಬೈಲ್ ಗೀಳಿಗೆ ಬೀಳಬಾರದು ಬದಲಾಗಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಕಡೆ ಗಮನಹರಿಸಬೇಕು ಎಂದು ಜೀವಿಕ ರಾಜ್ಯ ಸಂಪನ್ಮೂಲ ವ್ಯಕಿ ಉಮೇಶ್. ಬಿ. ನೂರಲಕುಪ್ಪೆ ಹೇಳಿದರು.
ತಾಲೂಕಿನ ಪಡುಕೋಟೆ ಗ್ರಾಮ ಪಂಚಾಯ್ತಿ ವತಿಯಿಂದ ಮಕ್ಕಳ ಗ್ರಾಮ ಸಭೆಯನ್ನು ಉದ್ದೇಶಿಸಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಇವತ್ತಿನ ತಂತ್ರಜ್ಞಾನ ಜಗತ್ತನ್ನೆ ವ್ಯಾಪಿಸಿಕೊಂದಿದ್ದು ರಭಸದಿಂದ ಓಡುತ್ತಿದ್ದು ಇದು ಪೂರಕವು ಹೌದು ಮತ್ತು ಅಷ್ಟೇ ಮಾರಕವು ಆಗಿದೆ. ಅದ್ದರಿಂದ ನಾವು ಸಕಾರಾತ್ಮಕ ಚಿಂತನೆಯ ಮೂಲಕ ಜಗತ್ತಿನೊಂದಿಗೆ ವಿಸ್ತರಿಸಿ ಕೊಳ್ಳಬೇಕಾಗಿದೆ, ಇದರಿಂದ ಮಕ್ಕಳ ಮೇಲೆ ಅಥವಾ ಮಕ್ಕಳ ಹಕ್ಕುಗಳ ಮೇಲಾಗುವ ದುಷ್ಪರಿಣಾಮಗಳನ್ನು ತಡೆಯಬೇಕಾಗಿದೆ ಎಂದು ಹೇಳಿ ಮಕ್ಕಳ ಹಕ್ಕುಗಳನ್ನ ವಿಸ್ತಾರವಾಗಿ ವಿವರಿಸಿದರು.
ಪ್ರಾಸ್ತಾವಿಕವಾಗಿ ಪಂಚಾಯತಿ ಕಾರ್ಯದರ್ಶಿ ವೆಂಕಟೇಶ ಮಾತಾನಾಡಿ ಸರ್ಕಾರ ಆದೇಶದಂತೆ ನಾವು ಇಂದು ನಮ್ಮ ವ್ಯಾಪ್ತಿಯ ಏಳು ಶಾಲೆಗಳ ಮಕ್ಕಳು ಪೋಷಕರು ಮತ್ತು ಮುಖ್ಯಶಿಕ್ಷಕ ಭಾಗವಹಿಸುವಿಕೆಯಲ್ಲಿ ಮಕ್ಕಳ ಗ್ರಾಮ ಸಭೆ ನಡೆಸುತ್ತಿದ್ದು ಕಳೆದ ಸಾಲಿನಲ್ಲಿ ಸಭೆಯಲ್ಲಿ ಮಕ್ಕಳಿಂದ ಬಂದಂತ ಕೆಲವು ಸಮಸ್ಯೆಗಳಾದ ಶೌಚಾಲಯ, ಮೈದಾನ, ಕುಡಿಯುವ ನೀರು, ರಂಗಮಂದಿರ ಗಳ ಕೆಲಸವನ್ನು ಪೂರ್ಣಗೊಳಿಸಿದ್ದು ಉಳಿದಂತೆ ಈ ಸಾಲಿನಲ್ಲಿ ಮುಂದಿನ ಕಾಮಗಾರಿಗಳನ್ನು ಪೂರ್ಣಗೊಳಿಸುತ್ತೆವೆ ಎಂದರು.

ಈ ಸಭೆಯಲ್ಲಿ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ನಜ್ ಮುನ್ನುಸಾ, ಉಪಾಧ್ಯಕ್ಷ ಶ್ರೀಮತಿ ಸುಮಿತ್ರಾ, ಸದಸ್ಯರಾದ ಶ್ರೀಮತಿ ಲೈಲಾ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಅಂಕಪ್ಪ ಎಸ್, ಮುಖ್ಯಶಿಕ್ಷಕರಾದ ಆನಂದ್. ಶ್ರೀಪಾದ. ಸಿಸ್ಟರ್ ಅಪೋಲಿಯನ್, ಸಿಸ್ಟರ್ ಜೆಸ್ಸಿ, ಶ್ರೀಮತಿ ಗೀತಾ, ನಿಂಗೇಗೌಡ, ಸುಬ್ರಹ್ಮಣ್ಯ, ಉಷಾ, ನಾಗಸುಂದ್ರ, ಸ್ವಾಮಿ, ಧನಂಜಯ, ಪೀಪಲ್ ಟ್ರೀ ಸಂಸ್ಥೆ ರುದ್ರಪ್ಪ, ಜವರೇಗೌಡ, ಚೆನ್ನಬಸಪ್ಪ, ಮಣಿಕಂಠ, ಮಂತ್ರಿಮಂಡಲದ ಸಹೀದ್, ನಯನ, ಸಿಬ್ಬಂದಿಗಳಾದ ಮಂಜುನಾಥ್, ದಾಸನಾಯ್ಕ, ಸದಾನಂದ, ವಸಂತ ಕುಮಾರ್, ಮಾನಸ, ಶ್ರೀಮತಿ ಸಿ, ವಿಜಯ್ ಮತ್ತು ಮಕ್ಕಳು ಭಾಗವಹಿಸಿದ್ದರು
- ಶಿವು, ಕೋಟೆ