ಎಚ್.ಡಿ.ಕೋಟೆ:ಶಾಸಕ ಅನಿಲ್ ಚಿಕ್ಕಮಾದು ರವರಿಂದ ನಾಯಕ ಸಮುದಾಯವನ್ನು ಇಬ್ಬಾಗ ಮಾಡುಲು ಪಿತೂರಿ -ಮಾಜಿ ಶಾಸಕ ಚಿಕ್ಕಣ್ಣ ಆರೋಪ

ಎಚ್.ಡಿ.ಕೋಟೆ:ಎಲ್ಲಾ ಜನಾಂಗದ ಮತ ಪಡೆದು ಆಯ್ಕೆಯಾದ ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು ತಾಲೂಕಿನ ನಾಯಕ ಸಮುದಾಯವನ್ನು ಒಡೆದು ಇಬ್ಬಾಗ ಮಾಡಿ ಸ್ವಂತ ಪ್ರಚಾರಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಮಾಜಿ ಶಾಸಕ ಚಿಕ್ಕಣ್ಣ ಮತ್ತು ತಾಲೂಕು ನಾಯಕ ಸಂಘದ ಅಧ್ಯಕ್ಷ ಎಂ.ಸಿ.ದೊಡ್ಡನಾಯ್ಕ ನೇರ ಆರೋಪ ಮಾಡಿದ್ದಾರೆ.

ತಾಲೂಕು ಪತ್ರಕರ್ತ ಸಂಘದ ಸುದ್ಧಿಗೋಷ್ಠಿಯಲ್ಲಿ ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ ಮಾತನಾಡಿ, ನಾಳೆ ಎಚ್.ಡಿ.ಕೋಟೆ ತಾಲೂಕು ಕೇಂದ್ರ ಸ್ಥಾನದಲ್ಲಿ ಎಚ್.ಡಿ.ಕೋಟೆ ಮತ್ತು ಸರಗೂರು ತಾಲೂಕುಗಳ ಅಶ್ರಯದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಗೆ ಸಿದ್ಧತೆ ನಡೆದು ಕಾರ್ಯಕ್ರಮಕ್ಕೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಆಹ್ವಾನಿಸಲಾಗಿದೆ.

ಕಾರ್ಯಕ್ರಮದ ಆಹ್ವಾನ ಪತ್ರಿಕೆ ಮುಖಮಟದಲ್ಲಿ ತಾಲೂಕು ನಾಯಕ ಸಮಾಜದಿಂದ ಕಾರ್ಯಕ್ರಮ ಎಂದು ಮುದ್ರಿತವಾಗಿದೆ. ಆದರೆ ಒಳ ಪುಟಗಳಲ್ಲಿ ಸರ್ಕಾರಿ ಕಾರ್ಯಕ್ರಮದಂತೆ ಮುದ್ರಣಗೊಂಡಿದೆ. ಇನ್ನು ಎಚ್.ಡಿ.ಕೋಟೆ ತಾಲೂಕು ಕೇಂದ್ರ ಸ್ಥಾನದಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿದೆಯಾದರೂ ತಾಲೂಕಿನ ನಾಯಕ ಸಮುದಾಯದ ಅಧ್ಯಕ್ಷರಾದ ದೊಡ್ಡನಾಯಕರ ಬದಲಿಗೆ ಶಂಭುಲಿಂಗನಾಯ್ಕರು ಅಧ್ಯಕ್ಷರು ಎಂದು ಮುದ್ರಿಸಿ ನಾಯಕ ಸಮುದಾಯವನ್ನು ಇಬ್ಬಾಗ ಮಾಡಿ ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಈ ರೀತಿಯ ಒಡೆದು ಆಳುವ ನೀತಿ ಟೀಕಿಸದೇ ಅನ್ಯ ಮಾರ್ಗ ಇಲ್ಲ. ತಾಲೂಕಿನ ನಾಯಕ ಸಮಾಜವನ್ನು ಶಾಶಕರಿಗೆ ಮಾರಾಟ ಮಾಡಿಲ್ಲ ಅಥವಾ ಅಡಮಾನ ಇರಿಸಿಲ್ಲ. ಅಕಸ್ಮಾತ್ ತಾಲೂಕಿನ ನಾಯಕ ಸಮಾಜ ನನ್ನದೇ ಎಂದು ಶಾಸಕರು ಊಹಿಸಿಕೊಂಡಿದ್ದರೆ ಅದು ಅವರ ತಪ್ಪು ಕಲ್ಪನೆ. ನಾವು ಸರ್ಕಾರಿ ಕಾರ್ಯಕ್ರಮ ಅಥವಾ ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಪತ್ರಿಕೆ ಹೇಳಿಕೆ ನೀಡಿಲ್ಲ. ತಾಲೂಕಿನ ಶಾಸಕರು ತಾಲೂಕಿನ ಸರ್ವ ಸಮುದಾಯವನ್ನೂ ಒಗ್ಗೂಡಿಸಿಕೊಂಡು ಅಭಿವೃದ್ಧಿ ಕೆಲಸಗಳನ್ನು ಮಾಡಲಿ ಎನ್ನುವ ಉದ್ದೇಶದಿಂದ ಪತ್ರಿಕಾಗೋಷ್ಠಿ ನಡೆಸಿರುವುದಾಗಿ ಎಂದ ಅವರು 12ರ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ನಾಯಕರು ಬಹಿಷ್ಕರಿಸುವುದಾಗಿ ತಿಳಿಸಿದರು.

ತಾಲೂಕು ನಾಯಕ ಸಂಘದ ಅಧ್ಯಕ್ಷ ಎಂ.ಸಿ.ದೊಡ್ಡನಾಯಕ ಮಾತನಾಡಿ, ನಾಯಕ ಸಮುದಾಯ ಒಗ್ಗೂಡಿಸಿ ಕಾರ್ಯಕ್ರಮ ನಡೆಸದೆ ಅಧ್ಯಕ್ಷರು ಪದಾಧಿಕಾರಿಗಳನ್ನು ಕಡೆಗಣಿಸಿ ಶಾಸಕರಿಗೆ ಬೇಕಾದ ಹಿಂಬಾಲಕರ ಮೂಲಕ ಕಾರ್ಯಕ್ರಮ ನಡೆಸುತ್ತಿರುವುದು ಖಂಡನೀಯ.ಶಾಸಕರ ಅಪ್ತರು ಅವರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಶಾಸಕರು ಎಚ್ಚರವಹಿಸಿ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು. ಸಮುದಾಯದ ಅಧ್ಯಕ್ಷರು ಪದಾಧಿಕಾರಿಗಳ ವಿಶ್ವಾಸ ಪಡೆಯದೇ ಪೂರ್ವಭಾವಿ ಸಭೆಗೂ ಆಹ್ವಾನಿಸದೇ ಕಡೆಗಣಿಸುವುದು ಶೋಭೆ ತರುವಂತಹದ್ದಲ್ಲ ಎಂದರು.

ಸಂಘದ ಉಪಾಧ್ಯಕ್ಷ ಮರಸಭೆ ಸದಸ್ಯ ನಾಗರಾಜು ಕಾರ್ಯದರ್ಶಿ ಚಾಕಳ್ಳಿ ಕೃಷ್ಣ ನಾಗನಾಯ್ಕ, ಸೋಮನಾಯ್ಕ, ಬಿಲ್‌ನಾಯ್ಕ ಬೆಟ್ಟನಾಯ್ಕ, ಸಣ್ಣನಾಯ್ಕ, ರಾಜ ನಾಯ್ಕ ಜವರನಾಯ್ಕ, ದೇವನಾಯ್ಕ, ಸೂರಿ ಸೇರಿದಂತೆ ಮತ್ತಿತರರಿದ್ದರು.

————-—–ಶಿವು ಕೋಟೆ

Leave a Reply

Your email address will not be published. Required fields are marked *

× How can I help you?