ಎಚ್.ಡಿ.ಕೋಟೆ-ರಕ್ತದಾನದಿಂದ-ಮತ್ತೊಂದು-ಜೀವಕ್ಕೆ-ಮರುಜನ್ಮ‌- ನೀಡಿದಂತೆ-ತಾಲೂಕು-ಆರೋಗ್ಯಾಧಿಕಾರಿ-ಟಿ.ರವಿಕುಮಾ‌ರ್

ಎಚ್.ಡಿ.ಕೋಟೆ: ಒಬ್ಬ ವ್ಯಕ್ತಿ ರಕ್ತದಾನ ಮಾಡುವುದರಿಂದ ಪ್ರಾಣಾಪಾಯದ ಅಂಚಿನಲ್ಲಿರುವ ಮೂರು ಜೀವವನ್ನು ಉಳಿಸಬಹುದಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಟಿ. ರವಿಕುಮಾ‌ರ್ ತಿಳಿಸಿದರು.

ಪಟ್ಟಣದ ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಶುಕ್ರವಾರ ಮೈಸೂರಿನ ಕೆ.ಆರ್.ಆಸ್ಪತ್ರೆಯ ರಕ್ತ ನಿಧಿ ಕೇಂದ್ರ, ಆದಿಚುಂಚನ ಗಿರಿ ಪ್ರಥಮ ದರ್ಜೆ ಕಾಲೇಜು, ರಾಷ್ಟ್ರೀಯ ಸೇವಾ ಯೋಜನೆ, ಎಚ್.ಡಿ. ಕೋಟೆಯ ರೋಟರಿ ಕ್ಲಬ್ ಮತ್ತು ಲಯನ್ಸ್ ಕ್ಲಬ್. ಮೈಸೂರಿನ ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರವನ್ನು ಉದ್ದೇಶಿಸಿ ಮಾತನಾಡಿದರು.

ಆರೋಗ್ಯವಂತ ವ್ಯಕ್ತಿಯೋರ್ವ ಎಂಟು ವಾರಗಳಿಗೊಮ್ಮೆ ರಕ್ತದಾನ ಮಾಡಬಹುದು. ಇಂದಿನ ದಿನಗಳಲ್ಲಿ ರಕ್ತದಾನದ ಜೊತೆ-ಜೊತೆಗೆ ಅಂಗಾಂಗ ದಾನ ಮಾಡುವವರ ಸಂಖ್ಯೆಗಳು ಸಹ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ. ಇದರಿಂದ ಅಂಗ ವೈಫಲ್ಯ ಅನುಭವಿಸುತ್ತಿ ರುವವರು ಆಶಾಕಿರಣಗಳಾಗಿ ದಾನಿಗಳು ಹೊರಹೊಮ್ಮುತ್ತಿದ್ದಾರೆ ಎಂದು ಶ್ಲಾಘಿಸಿದರು.

ಲಯನ್ಸ್ ಕ್ಲಬ್‌ ಅಧ್ಯಕ್ಷ ಭಾಸ್ಕರ್ ಮಾತನಾಡಿ, ಕಾಲೇಜಿಗೆ ಎರಡು ಶೌಚಾಲಯವನ್ನು ಲಯನ್ಸ್ ಸಂಸ್ಥೆಯ ವತಿಯಿಂದ ನಿರ್ಮಿಸಿ ಕೊಡಲಾಗುವುದು ಎಂದು ಭರವಸೆ ನೀಡಿದರು. ರಕ್ತ ನಿಧಿ ಕೇಂದ್ರದ ಪಲ್ಲವಿ ಮಾತನಾಡಿದರು.

ಮೈಸೂರಿನ ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕದ ವತಿಯಿಂದ ಏಡ್ಸ್ ಕುರಿತು ಅರಿವು ಮೂಡಿಸಲಾಯಿತು. ಮತ್ತು ಆರೋಗ್ಯ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಶನೀಲಾ, ದ್ವಿತೀಯ ಬಹುಮಾನವನ್ನು ಉಷಾ ಮತ್ತು ತೃತೀಯ ಬಹುಮಾನವನ್ನು ಎಚ್.ಎನ್. ಮಹೇಶ್ ಪಡೆದರು.

ಪ್ರೊ. ಚಂದ್ರೇಗೌಡ, ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಜೆ.ಎನ್. ವೆಂಕಟೇಶ್, ಸಾರ್ವಜನಿಕ ಆಸ್ಪತ್ರೆಯ ವೈದ್ಯ ಡಾ. ಸೋಮಣ್ಣ, ಸಿ.ಎನ್. ನಾಗಣ್ಣ, ರೋಟರಿ ಕ್ಲಬ್‌ ನ ಅಧ್ಯಕ್ಷ ಎಸ್.ಎನ್. ನಿರಂಜನ್, ಕಾರ್ಯದರ್ಶಿ ಶಿವಣ್ಣ. ಆರ್ಮುಗಂ, ರಾಮು, ರಘು, ಉಪನ್ಯಾಸಕರಾದ ಎಂ.ಆರ್. ರಾಮಚಂದ್ರ, ಸಿದ್ದೇಗೌಡ, ದೈಹಿಕ ಶಿಕ್ಷಣ ನಿರ್ದೇಶಕ ಕಲ್ಲೇಶ್ ಗೌಡ, ಕ್ರೀಡಾ ಕಾರ್ಯದರ್ಶಿ ಬಿ.ಸಿ. ಮಹೇಂದ್ರ, ಅವೀನಾ, ಡಿ. ಚಂದನ, ಸಿ. ಚಿತ್ರ, ಬಿ. ಚಿಕ್ಕದೇವಿ, ಸಂಗೀತಾಗೌಡ, ಶಾಂಭವಿ, ಚನ್ನಕೇಶವ, ಅಂಕಪ್ಪ, ಮಂಜು, ಮಹದೇವು, ಸಿದ್ದರಾಜು, ರವಿ, ಪ್ರಕಾಶ್, ದಿಲೀಪ್, ರವೀಶ್, ಮಹೇಶ್, ಪ್ರೀತಿ ಇದ್ದರು.

  • ಶಿವಕುಮಾರ, ಕೋಟೆ

Leave a Reply

Your email address will not be published. Required fields are marked *

× How can I help you?