ಎಚ್.ಡಿ.ಕೋಟೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ವತಿಯಿಂದ ವಾಸ್ತವ್ಯ ಯೋಜನೆಯ ಕಾರ್ಯಕ್ರಮದಡಿಯಲ್ಲಿ ತಾಲೂಕಿನ ಮಾದಾಪುರ ಸಮೀಪದ ಫೈಲ್ವಾನ್ ಕಾಲೋನಿ ಗ್ರಾಮದಲ್ಲಿ ಬಡ ಮಹಿಳೆಯಾದ ನಾಗಮ್ಮ ಅವರಿಗೆ ಸುಮಾರು 1.20 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಿಸಿ ಕೊಡಲಾಗಿದೆ.
ನಂತರ ನೂತನ ಮನೆಯನ್ನು ಯೋಜನೆಯ ಪ್ರಾದೇಶಿಕ ನಿರ್ದೇಶಕರಾದ ಜಯರಾಮ್ ನೆಲ್ಲಿತ್ತಾಯ, ಜಿಲ್ಲಾ ನಿರ್ದೇಶಕ ವಿಜಯ್ ಕುಮಾರ್ ನಾಗನಾಳ, ತಾಲೂಕಿನ ಯೋಜನಾಧಿಕಾರಿ ಭಾಸ್ಕರ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಕಾಶ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಶಂಕರ್ ಮತ್ತು ಗ್ರಾಮಸ್ಥರು ಮನೆಯನ್ನು ಉದ್ಘಾಟನೆ ಮಾಡಿ ನಂತರ ಫಲಾನುಭವಿ ನಾಗಮ್ಮರಿಗೆ ಮನೆಯನ್ನು ಹಸ್ತಾಂತರಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಶಂಕರ್ ಮಾತನಾಡಿ, ನಾಗಮ್ಮ ಅವರಿಗೆ ಈಗಾಗಲೇ ತಿಂಗಳಿಗೆ ಒಂದು ಸಾವಿರ ಮಾಸಾಶನ ನೀಡಲಾಗುತ್ತಿದೆ ರಾಜ್ಯದಲ್ಲಿ ಲಕ್ಷಾಂತರ ಅಂಗವಿಕಲರಿಗೆ, ಅಂಧರಿಗೆ, ಬುದ್ಧಿಮಾಂದ್ಯ ನಿರ್ಗತಿಕ ಕುಟುಂಬಗಳಿಗೆ ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗ್ಗಡೆಯವರು ಆಶ್ರಯ ರಾಗಿದ್ದಾರೆ ಜೊತೆಗೆ ಧೈರ್ಯವನ್ನು ತುಂಬುವ ಕೆಲಸವನ್ನು ಮಾಡುತ್ತಿದ್ದಾರೆ ಇದರ ಉಪಯೋಗವನ್ನು ನಿಜವಾದ ಫಲಾನುಭವಿಗಳು ಬಳಸಿಕೋಳ್ಳಬೇಕು ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ವಸಂತಾ ನಾಗರಾಜ್, ಅಕ್ರಮ ಸಕ್ರಮ ಸಮಿತಿಯ ಸದಸ್ಯ ಕೆಂಡಗಣ್ಣೇಗೌಡ, ಡಾ.ಬಾಬು ಜಗಜೀವನ್ ವಿಚಾರ ವೇದಿಕೆ ಮಾಜಿ ಅಧ್ಯಕ್ಷ ಪಿ. ನಾಗರಾಜು, ಗ್ರಾಮ ಪಂಚಾಯಿತಿ ಸದಸ್ಯರಾದ ಮಹೇಶ್, ರಮೇಶ್, ಚೆಲುವರಾಜು, ಸಣ್ಣಸ್ವಾಮಿನಾಯಕ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷೆ ಲಕ್ಷಮ್ಮರಾಮೇಗೌಡ, ರೇಖಾ, ಸೇರಿದಂತೆ ಗ್ರಾಮಸ್ಥರು ಸಾರ್ವಜನಿಕರು ಇದ್ದರು.
-ಶಿವು ಕೋಟೆ