ಎಚ್.ಡಿ.ಕೋಟೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಕಾರ್ಯಕ್ರಮದಡಿಯಲ್ಲಿ ತಾಲೂಕಿನ ಮಾದಾಪುರ ವಲಯದ ಚಿಕ್ಕಕೆರೆಯೂರು ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಿ ಉದ್ಘಾಟನೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಜಯರಾಮ್ ನೆಲ್ಲಿತ್ತಾಯ, ಜಿಲ್ಲಾ ನಿರ್ದೇಶಕ ವಿಜಯ್ ಕುಮಾರ್ ನಾಗನಾಳ, ತಾಲೂಕಿನ ಯೋಜನಾಧಿಕಾರಿ ಭಾಸ್ಕರ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಕಾಶ್, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶಂಕರ್,
ಉಪಾಧ್ಯಕ್ಷರಾದ ಶ್ರೀಮತಿ ವಸಂತನಾಗರಾಜ್, ಅಕ್ರಮ ಸಕ್ರಮ ಸಮಿತಿಯ ಸದಸ್ಯ ಕೆಂಡಗಣ್ಣೇಗೌಡ, ಡಾ.ಬಾಬು ಜಗಜೀವನ್ ವಿಚಾರ ವೇದಿಕೆ ಮಾಜಿ ಅಧ್ಯಕ್ಷ ಪಿ. ನಾಗರಾಜು, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷೆ ಲಕ್ಷಮ್ಮರಾಮೇಗೌಡ, ಗ್ರಾಮ ಪಂಚಾಯಿತಿ ಸದಸ್ಯರಾದ ಮಹೇಶ್, ರಮೇಶ್, ಚೆಲುವರಾಜು, ಸಣ್ಣಸ್ವಾಮಿನಾಯಕ, ಸಿದ್ದಲಿಂಗಮ್ಮ, ಮಾಲತಿ, ಭಾಗ್ಯಮ್ಮ,ಮಹದೇವಮ್ಮ, ಮಲ್ಲೇಶ್, ಲಕ್ಷ್ಮಮ್ಮ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಸೇರಿದಂತೆ ಅಕ್ಕಪಕ್ಕದ ಗ್ರಾಮಸ್ಥರು ಸಾರ್ವಜನಿಕರು ಇದ್ದರು.