ಕೆ.ಆರ್.ಪೇಟೆ:ಕೃಷಿಯ ಜೊತೆಗೆ ಹೈನುಗಾರಿಕೆಯನ್ನು ಮೈಗೂಡಿಸಿಕೊಂಡರೆ ಆರ್ಥಿಕ ಸದೃಢತೆ ಸಾಧ್ಯ ಎಂದು ಮನ್ಮುಲ್ ನಿರ್ದೇಶಕ ಡಾಲು ರವಿ ತಿಳಿಸಿದರು.
ತಾಲೂಕಿನ ಕಾಳೆಗೌಡನ ಕೊಪ್ಪಲು, ಕೂಡಲಕುಪ್ಪೆ,ಅಚೇನಹಳ್ಳಿ,ತೆಂಡೆಕೆರೆ,ರಾಮನಹಳ್ಳಿ,ಅಂಚೆಮುದ್ದನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಆವರಣದಲ್ಲಿ ನಡೆದ 2023-24 ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಕೃಷಿಯ ಜೊತೆಗೆ ಹೈನುಗಾರಿಕೆಯು ಲಾಭದಾಯಕವಾದ ವೃತ್ತಿಯಾಗಿದ್ದು,ಸರ್ಕಾರ ಹೈನುಗಾರಿಕೆಗೆ ಪ್ರೋತ್ಸಾಹ ನೀಡುತ್ತಿದೆ.ಇದನ್ನು ಪ್ರತಿಯೊಬ್ಬರು ಸದುಪಯೋಗಪಡಿಸಿಕೊಳ್ಳಬೇಕು.ನನ್ನ ಅವಧಿಯಲ್ಲಿ ಒಕ್ಕೂಟದ ಬರುವ ಸವಲತ್ತುಗಳನ್ನ ತಲುಪಿಸಿ ರೈತರಿಗೆ ಉತ್ಪಾದಕರಿಗೆ ಆರ್ಥಿಕ ಸದೃಢತೆಗೆ ಒತ್ತು ನೀಡಿದ್ದೇನೆ.ಹಾಲು ಉತ್ಪಾದಕರಿಗೆ ವಿಮಾ ಯೋಜನೆ ಕಡ್ಡಾಯಗೊಳಿಸಲಾಗಿದೆ.ನಮ್ಮ ರಾಜ್ಯದ ಹಾಲಿಗೆ ಹೆಚ್ಚಿನ ಬೇಡಿಕೆ ಇದೆ.ಇದರಿಂದಲೇ ದೇಶದಲ್ಲಿ ಹಾಲು ಉತ್ಪಾದನೆಯಲ್ಲಿ ಕರ್ನಾಟಕ ರಾಜ್ಯ ಎರಡನೇ ಸ್ಥಾನವನ್ನು ಪಡೆದಿದೆ.ಹಾಲು ಉತ್ಪಾದಕರು ಗುಣಮಟ್ಟದ ಹಾಲನ್ನು ಉತ್ಪಾದಿಸಿ ಸಹಕಾರ ಸಂಘಕ್ಕೆ ನೀಡಬೇಕು ಹಾಗೂ ತಮ್ಮ ರಾಸುವಿಗೆ ಸಮತೋಲನ ಆಹಾರ ನೀಡಿ ಮತ್ತು ಹಾಲಿನಲ್ಲಿ ಕೊಬ್ಬಿನ ಅಂಶ ಇರುವಂತೆ ಹಾಲಿನ ಗುಣಮಟ್ಟ ಕಾಪಾಡಲುಬೇಕು ಎಂದರು.
ಸಂಘಗಳ ಮಾರ್ಗ ವಿಸ್ತರಣಾಧಿಕಾರಿಗಳು ಗುರುರಾಜ್ ಈ ವರ್ಷದ ಆಯ್ಯವ್ಯಯ ಮತ್ತು ಮುಂದಿನ ವರ್ಷದ ಬಜೆಟ್‌ನ್ನು ಮಂಡಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷೆ ಮಮತ ಲೋಕೇಶ್, ಉಪಾಧ್ಯಕ್ಷೆ ಸುನೀತಾ ವರದರಾಜೇಗೌಡ, ನಿರ್ದೇಶಕರಾದ ಪ್ರಮೀಳ, ಲಲಿತಮ್ಮ, ಶೋಭ, ಗೌರಿ, ಶಿವಮ್ಮ, ಸುಮ, ನಂದಿನಿ, ಸುಧಾ, ನಾಗಮ್ಮ,ಕೃಷಿ ಸಮಾಜ ನಿರ್ದೇಶಕರಾದ ಪ್ರಮೀಳ ವರದರಾಜೇಗೌಡ,ಗ್ರಾ. ಪಂ ಸದಸ್ಯರಾದ ಬಲರಾಮು, ಸಂಘದ ನಿರ್ದೇಶಕ ಅಶ್ವಿನಿ, ಹಾಲು ಪರೀಕ್ಷಕಿ ರುಕ್ಮಿಣಿ,ತೆಂಡೆಕೆರೆ ಸಂಘದ ಅಧ್ಯಕ್ಷ ನಿಂಗಶೆಟ್ಟಿ, ಉಪಾಧ್ಯಕ್ಷ ಕಾಳಯ್ಯ, ನಿರ್ದೇಶಕರಾದ ನಾಗರಾಜು, ಆನಂದ, ಬುಂಡೆಗೌಡ, ಶಿವರಾಮೇಗೌಡ, ಚಂದ್ರೆಗೌಡ, ಕೃಷ್ಣಗೌಡ, ದಮೆಂದ್ರ, ಸರೋಜಮ್ಮ, ಲಕ್ಷ್ಮಿ,ಈಶ್ವರ್ ಸಂಘದ ಕಾರ್ಯದರ್ಶಿ ರವಿ ಕುಮಾರ್, ಬಾಲ್ ರಾಜ್,ಅಚೇನಹಳ್ಳಿ ಅಧ್ಯಕ್ಷೆ ಶಾಂತಮ್ಮ, ಉಪಾಧ್ಯಕ್ಷೆ ಸರೋಜಮ್ಮ, ನಿರ್ದೇಶಕರಾದ ಕುಮಾರಿ, ಭಾಗ್ಯಮ್ಮ, ಗಾಯಿತ್ರಿ, ನಾಗಮ್ಮ, ಜಯಮ್ಮ, ನಾಗರತ್ನ, ವಸಂತ, ರತ್ನಮ್ಮ, ಸವಿತ, ಗಂಗಾಮಣಿ, ಸಂಘದ ಕಾರ್ಯದರ್ಶಿ ಮಂಜುಳ, ಹಾಲು ಪರೀಕ್ಷಕಿ ಮಮತ, ವಸಂತ, ರಾಮನಹಳ್ಳಿ ಸಂಘದ ಅಧ್ಯಕ್ಷೆ ಸೌಮ್ಯ, ಉಪಾಧ್ಯಕ್ಷೆ ಭಾರತಿ, ನಿರ್ದೇಶಕರಾದ ಸವಿತ, ಜಯಮ್ಮ, ಸುಗುಣ, ಪಾರ್ವತಿ, ಭಾಗ್ಯಮ್ಮ, ಅನುಸೂಯ, ಸೌಭಾಗ್ಯ, ನಾಗಮ್ಮ, ಸಂಘದ ಕಾರ್ಯದರ್ಶಿ ಪವಿತ್ರ, ಹಾಲು ಪರೀಕ್ಷಕಿ ಪ್ರಭಾವತಿ, ಗ್ರಾ. ಪಂ ಸದಸ್ಯ ಕಾಂತರಾಜು,ಅಂಚೆಮುದ್ದನಹಳ್ಳಿಸಂಘದ ಅಧ್ಯಕ್ಷೆ ಗೀತಾ, ಉಪಾಧ್ಯಕ್ಷೆ ರತ್ನಮ್ಮ, ನಿರ್ದೇಶಕರಾದ ಮಮತ, ಶೀಲಜಾ, ಪಾರ್ವತಮ್ಮ, ಗೌರಮ್ಮ, ಸುಜಾತ, ಸರೋಜಮ್ಮ, ಸುಂದ್ರಮ್ಮ,ಸೌಭಾಗ್ಯಮ್ಮ,ಸಂಘದ ಕಾರ್ಯದರ್ಶಿ ಶೋಭ, ಸೇರಿದಂತೆ ಉಪಸ್ಥಿತರಿದ್ದರು.
————————-ಮನು ಮಾಕವಳ್ಳಿ ಕೆ ಆರ್ ಪೇಟೆ