ಎಚ್.ಡಿ.ಕೋಟೆ-ಫೆ.13 ರಂದು-ಜಿಲ್ಲಾ ರೈತ-ಸಮಾವೇಶ ಹಮ್ಮಿಕೊಳ್ಳಲಾಗಿದೆ-ರಾಜ್ಯ-ರೈತ-ಸಂಘದ-ರಾಜ್ಯ-ಅಧ್ಯಕ್ಷ ಬಡಗಲಪುರ-ನಾಗೇಂದ್ರ-ಮಾಹಿತಿ

ಎಚ್.ಡಿ.ಕೋಟೆ: ರೈತ ನಾಯಕ ದಿ.ಪ್ರೊ ಎಂ.ಡಿ.ನಂಜುಂಡ ಸ್ವಾಮಿ ಅವರ 89 ಜನ್ಮದಿನದ ಅಂಗವಾಗಿ ಮೈಸೂರು ನಗರದ ಪುರ ಭವನದ ಆವರಣದಲ್ಲಿ ಫೆ.13 ರಂದು ಜಿಲ್ಲಾ ರೈತ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘದ ರಾಜ್ಯ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.

ಪಟ್ಟಣದ ಸರ್ಕಾರಿ ವಸತಿ ಗೃಹದ ಆವರಣದಲ್ಲಿ ಗುರುವಾರ ಕರೆಯಲಾಗಿದ್ದ ರೈತ ಮುಖಂಡರ ಸಭೆಯಲ್ಲಿ ಮಾತನಾಡಿ,
ಪ್ರೊ.ಎಂ.ಡಿ ನಂಜುಂಡ ಸ್ವಾಮಿ ಅವರ ಜನ್ಮ ದಿನವಾದ ಫೆ.13ರ ದಿನವನ್ನು ಕರ್ನಾಟಕ ರಾಜ್ಯ ರೈತ ಸಂಘ ಪ್ರತಿ ವರ್ಷ ವಿಶೇಷವಾಗಿ ಆಚರಿಸುತ್ತದೆ.

ಈ ವರ್ಷ ಮೈಸೂರಿನಲ್ಲಿ ಜಿಲ್ಲಾ ರೈತ ಸಮಾವೇಶವನ್ನು ಹಮ್ಮಿಕೊಂಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿಯನ್ನು ಖಂಡಿಸಿ ರೈತಪರ ಗ್ರಾಮೀಣ ಪರ ಯೋಜನೆಗಳನ್ನು ರೂಪಿಸಿ ಕೃಷಿಯನ್ನು ಉಳಿಸಲು ಆಗ್ರಹಿಸಿ ಹಲವಾರು ನಿರ್ಣಯಗಳನ್ನು ಕೈಗೊಳ್ಳಲಿದೆ ಎಂದು ಮಾಹಿತಿ ನೀಡಿದರು.

ಹೊಸತನದೊಂದಿಗೆ ಹಳ್ಳಿ ಹಳ್ಳಿಗೆ ರೈತ ಚಳುವಳಿಯನ್ನು ಕೊಂಡೆಯ್ಯುವ ಉದ್ದೇಶದಿಂದ ಸಮಾವೇಶ ನಡೆಸಲಾಗುವುದು, ರೈತ ಸಮುದಾಯವನ್ನು ಸದೃಢಗೊಳಿಸುವುದಾಗಿ ಭರವಸೆ ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ರೈತ ಕುಲವನ್ನು ನಾಶ ಮಾಡುವಂತ ಕಾರ್ಯಕ್ರಮಗಳನ್ನು ನಿರಂತರವಾಗಿ ಜಾರಿಗೆ ತರುತ್ತಿದೆ ಎಂದು‌ ಕಿಡಿಕಾರಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿಗಳ ವಿರುದ್ಧ ಹೋರಾಟವನ್ನು ಹೊಸ ಆಯಾಮದೊಂದಿಗೆ ಕಟ್ಟದಿದ್ದರೆ ರೈತ ಕುಲಕ್ಕೆ ಭವಿಷ್ಯವಿಲ್ಲ ಎಂದು ತಿಳಿಸಿದರು.

ಮಾಜಿ ಶಾಸಕ, ಸಮಾಜವಾದಿ ಚಿಂತಕ, ಸಂಯುಕ್ತ ಮತ್ತು ರಾಷ್ಟ್ರೀಯ ಸಂಚಾಲ ಡಾ. ಸುನೀಲಂ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ, ಅಧ್ಯಕ್ಷತೆಯನ್ನು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ವಹಿಸಲಿದ್ದಾರೆ, ಮುಖ್ಯ ಅತಿಥಿಗಳಾಗಿ ಶಾಸಕರು ಹಾಗೂ ಮುಖ್ಯಮಂತ್ರಿಗಳ ಸಲಹೆಗಾರರು, ಸಮಾಜವಾದಿ ಚಿಂತಕರು ಬಿ.ಆರ್ ಪಾಟೀಲ್, ಜಾಗೃತಾ ಕರ್ನಾಟಕ ಡಾ. ವಿ ವಾಸು, ಕೃಷಿ ವಿಜ್ಞಾನಿ ಹಾಗೂ ಕರ್ನಾಟಕದ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಡಾ. ಪ್ರಕಾಶ್ ಕಮ್ಮರಡಿ ಸೇರಿದಂತೆ ರಾಜ್ಯ ರೈತ ಸಂಘದ ರಾಜ್ಯ ಮಟ್ಟದ ನಾಯಕರು, ಪ್ರಗತಿಪರ ಸಂಘಗಳ ನಾಯಕರು ಭಾಗವಹಿಸಲಿದ್ದಾರೆ ಎಂದರು.

ಸಮಾವೇಶದಲ್ಲಿ ಸುಮಾರು ಐದು ಸಾವಿರ ರೈತ ಮುಖಂಡರು ಭಾಗವಹಿಸಲಿದ್ದು, ಎಚ್.ಡಿ.ಕೋಟೆ ಮತ್ತು ಸರಗೂರು ತಾಲ್ಲೂಕಿನಿಂದ ಒಂದು ಸಾವಿರ ಕಾರ್ಯಕರ್ತರು ಭಾಗವಹಿಸಿಲಿದ್ದಾರೆ ಎಂದರು.

 ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮರಂಕಯ್ಯ, ಪಳನಿಸ್ವಾಮಿ, ಸೋಗಹಳ್ಳಿ ಪುಟ್ಟಣ್ಣ, ಮಹಾದೇವನಾಯಕ, ಚನ್ನನಾಯಕ, ಪ್ರಸಾದ್, ದೇವಮ್ಮ ಇದ್ದರು.

  • ಶಿವು ಕೋಟೆ

Leave a Reply

Your email address will not be published. Required fields are marked *

× How can I help you?