ಎಚ್.ಡಿ. ಕೋಟೆ– ಇಂದು ಕ್ಷೇತ್ರಶಿಕ್ಷಣ ಇಲಾಖೆ ವತಿಯಿಂದ ಸೈಂಟ್ ಮೇರೀಸ್ ಚರ್ಚ್ ನಲ್ಲಿ ಕಸಬಾ ಹೋಬಳಿ ವ್ಯಾಪ್ತಿಯ ಹತ್ತನೇ ತರಗತಿ ವಿಧ್ಯಾರ್ಥಿಗಳಿಗೆ ಪ್ರೇರಣಾ ಕಾರ್ಯಗಾರ ನಡೆಸಲಾಯಿತು.
ಈ ಕಾರ್ಯಗಾರ ಉದ್ದೇಶಿಸಿ ಶಿಕ್ಷಣ ಸಂಯೋಜಕ ಕೃಷ್ಣಮೂರ್ತಿ ಮಾತಾನಾಡಿ, ಕಳೆದ ಸಾಲಿನಲ್ಲಿ ನಮ್ಮ ತಾಲೋಕಿನ ಹತ್ತನೇ ತರಗತಿ ಫಲಿತಾಂಶ ಕಡಿಮೆ ಕ್ರಮಾಂಕದಲ್ಲಿ ಬಂದಿತ್ತು ಇದನ್ನ ಗಂಭೀರವಾಗಿ ಪರಿಗಣಿಸಿ ಶಾಸಕರಾದ ಅನಿಲ್ ಚಿಕ್ಕಮಾದು ರವರು ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಈ ಸಾಲಿನಲ್ಲಿ ಯಾವುದೇ ಕಾರಣಕ್ಕೂ ಮಕ್ಕಳು ಶೈಕ್ಷಣಿಕವಾಗಿ ಹಿಂದೆ ಬೀಳಬಾರದು ಮಕ್ಕಳ ಕಲಿಕೆ ಮತ್ತು ಫಲಿತಾಂಶ ಉತ್ತಮ ಮಟ್ಟದಲ್ಲಿ ತರಲು ಕೆಲವು ಸಲಹೆ ನೀಡಿದ್ದರು. ಇದರ ಮೇರೆಗೆ ನಾವು ನಮ್ಮ ಇಲಾಖೆಯ ಅಧಿಕಾರಿಗಳ ಅವಿರತ ಪರಿಶ್ರಮದಿಂದ ಪ್ರತಿ ಹೋಬಳಿಯಲ್ಲೂ ಮಕ್ಕಳಿಗೆ ವಿಷಯ ಪರಿಣಿತರಿಂದ ಪರೀಕ್ಷೆಗೆ ಪೂರಕವಾಗಿ ಕೆಲವು ಮಾನದಂಡಗಳನ್ನು ಇಟ್ಟುಕೊಂಡು ತರಗತಿಗಳನ್ನು ನಡೆಸುತ್ತಿದ್ದೆವೆ ಎಂದರು.
ಬಳಿಕ ಪ್ರೌಢಶಾಲಾ ಶಿಕ್ಷಕರ ಸಂಘದ ನಿರ್ದೇಶಕ ಪ್ರಮೋದ್ ಮಾತಾನಾಡಿ ಈ ಸಾಲಿನಲ್ಲಿ ನಮ್ಮ ತಾಲೋಕಿನಲ್ಲಿ ಸುಮಾರು ಮೂರುಸಾವಿರ ವಿಧ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಬರೆಯುತ್ತಿದ್ದು ಪ್ರತಿಯೊಂದು ಮಗುವು ಉತ್ತಮ ಅಂಕಗಳಿಸಬೇಕು ಎನ್ನುವ ಆಶಯವನ್ನು ಇಟ್ಟುಕೊಂಡು ಪರೀಕ್ಷೆಗೆ ಯಾವ ಯಾವ ವಿಷಯಗಳನ್ನು ಅಭ್ಯಾಸಿಸಬೇಕು ಮತ್ತು ಹೇಗೆ ಕೇಂದ್ರೀಕರಿಸಬೇಕು ಎಂಬ ಆಧಾರದ ಮೇಲೆ ಕಾರ್ಯಗಾರ ನಡೆಸುತ್ತಿದ್ದೆವೆ ಇದಕ್ಕೆ ವಿಧ್ಯಾರ್ಥಿಗಳ ಪೋಷಕರ ಸಾರ್ವಜನಿಕರ ಹಾಗೂ ಸಂಘ ಸಂಸ್ಥೆಗಳ ಪಾತ್ರ ಮಹತ್ವದಾಗಿದೆ ಎಂದರು.
ಕಾರ್ಯಗಾರ ಕುರಿತು ಸಂಪನ್ಮೂಲ ವ್ಯಕ್ತಿ ಜೀವಿಕ ಉಮೇಶ್, ಪುರಸಭೆ ಸದಸ್ಯ ಐಡಿಯಾ ವೆಂಕಟೇಶ, ವಿಷಯ ಪರಿಣಿತರಾದ ನಂಜುಂಡ ಸ್ವಾಮಿ, ಮಾದೇಶ್, ಕೃಷ್ಣ, ಶಂಭುಲಿಂಗ, ಮಾರುತಿಗೌಡ, ಕುಮಾರ್ ಮಾತಾನಾಡಿದರು.
ಕಾರ್ಯಕ್ರಮದಲ್ಲಿ ನಾರಾಯಣಸ್ವಾಮಿ ಡಿ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಕಾಶ,ಸಹ ಶಿಕ್ಷಕರ ಸಂಘದ ಅಧ್ಯಕ್ಷ ಭೀಮಪ್ಪ~ ಕಾರ್ಯದರ್ಶಿ
ಪ್ರಮೋದ್ ಕುಮಾರ್,
ಮುಖ್ಯಶಿಕ್ಷಕರಾದ ರಾಜು ಕೆ ಎಂ~ಶಿವಾನಂದ ರಾಮಪ್ಪ ರಾಥೋಡ್ ರ -ಬಿಸಿಯೂಟ ನಿರ್ದೇಶಕ ರಾಜು,,ನಾಗರಾಜ್, ಅಂತೋನಿ ಪ್ರಭು ಮತ್ತಿತರರು ಹಾಜರಿದ್ದರು.
- ಶಿವು, ಕೋಟೆ.