ಎಚ್.ಡಿ.ಕೋಟೆ: ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯ ಮೊದಲ ದಿನ ಸುಸೂತ್ರವಾಗಿ ನಡೆದಿದೆ. ತಾಲೂಕಿನ 12 ಕೇಂದ್ರಗಳಲ್ಲಿ ನಡೆದ ಪರೀಕ್ಷೆಯು ಯಾವುದೇ ಅಹಿತಕರ ಘಟನೆ ನಡೆಯದೆ ಪರೀಕ್ಷೆ ಸುಲಲಿತವಾಗಿ ನಡೆದಿದೆ.
ಮಾ.1 ರಿಂದ ಏ.4 ರವರೆಗೆ ನಡೆಯುವ ಪರೀಕ್ಷೆಯಲ್ಲಿ ಮೊದಲ ದಿನ ನಿಗದಿಯಾಗಿದ್ದ ಕನ್ನಡ ಪರೀಕ್ಷೆಗೆ ತಾಲೂಕಿನಾದ್ಯಂತ 43 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.

ಪರೀಕ್ಷಾ ಕೇಂದ್ರಗಳಾದ ಪಟ್ಟಣದ ಪಟ್ಟಣದ ಬಾಲಕಿಯರ ಶಾಲೆಯಲ್ಲಿ ಓರ್ವ ಆದಿಚುಂಚನಗಿರಿ ಶಾಲೆಯಲ್ಲಿ ನಾಲ್ಕು, ಹೊಮ್ಮರಗಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಎರಡು, ಸರಗೂರಿನ ಲಯನ್ಸ್ ಅಕಾಡೆಮಿ ಶಾಲೆಯಲ್ಲಿ ಮೂರು, ಜೆಎಸ್ ಎಸ್ ಸರಗೂರು ಶಾಲೆಯಲ್ಲಿ ಐದು, ಅಂತರಸಂತೆ ಸರ್ಕಾರಿ ಶಾಲೆಯಲ್ಲಿ ಮೂರು, ಸರ್ಕಾರಿ ಪ್ರೌಢಶಾಲೆ ಬೀಚನಹಳ್ಳಿಯಲ್ಲಿ ಮೂರು, ಜಿ.ಬಿ.ಸರಗೂರು ಪರೀಕ್ಷಾ ಕೇಂದ್ರದಲ್ಲಿ ಆರು, ಮಾದಾಪುರದ ಪರೀಕ್ಷಾ ಕೇಂದ್ರದಲ್ಲಿ ಓರ್ವ ವಿದ್ಯಾರ್ಥಿ ಸೇರಿದಂತೆ ಬಿ.ಮಟಕೆರೆ ಕೇಂದ್ರದಲ್ಲಿ ಅಧಿಕ ಹದಿನೈದು ವಿದ್ಯಾರ್ಥಿಗಳು ಗೈರು ಹಾಜರಿ ಮೂಲಕ ತಾಲೂಕಿನಾದ್ಯಂತ ಒಟ್ಟು ನಲವತ್ತಮೂರು ವಿದ್ಯಾರ್ಥಿಗಳು ಪರೀಕ್ಷೆಯಿಂದ ಹೊರಗುಳಿದಿದ್ದಾರೆ.
-ಶಿವು ಕುಮಾರ, ಕೋಟೆ