ಎಚ್.ಡಿ. ಕೋಟೆ: ಪ್ರತಿ ವರ್ಷವು 900 ರಿಂದ 1000 ಜನರು ಉಚಿತ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುತ್ತಾರೆ, 5 ವರ್ಷದಲ್ಲಿ ಸುಮಾರು 6000 ಸಾವಿರ ಜನರು ಮರಳಿ ದೃಷ್ಟಿಯನ್ನು ಪಡೆದಿದ್ದಾರೆ ಎಂದು ಮೈಸೂರು ಜಿಲ್ಲಾ ರೋಟರಿ ಗೌರ್ನರ್ ವಿಕ್ರಂ ದತ್ತ ಮಾಹಿತಿ ನೀಡಿದರು.
ಮೈರಾಡ ಕಾವೇರಿ ಪ್ರಾದೇಶಿಕ ಸಂಸ್ಥೆ ಹಾಗೂ ಶಂಕರ ಕಣ್ಣಿನ ಆಸ್ಪತ್ರೆ, ಹಾರ್ಟ್ ಸಂಸ್ಥೆ ಮೈಸೂರು, ಬಿ. ವಿ ಪಂಡಿತ್ ಆಯುರ್ವೇದ ಆಸ್ಪತ್ರೆ ಸಹಯೋಗದೊಂದಿಗೆ ಹ್ಯಾಂಡ್ ಪೋಸ್ಟ್ ನಲ್ಲಿ ನಡೆದ ಉಚಿತ ಆರೋಗ್ಯ ತಪಾಸಣೆ ಶಿಬಿರ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಆರೋಗ್ಯ ಶಿಬಿರದಂತಹ ಮಹತ್ವದ ಕಾರ್ಯಕ್ಕೆ ಕೈ ಜೋಡಿಸಿದ ಶಂಕರ ಕಣ್ಣಿನ ಆಸ್ಪತ್ರೆಗೆ ಹಾಗೂ ಶಿಬಿರದ ಆಯೋಜನೆಗೆ ಮುಂದಾದ ಎಚ್.ಡಿ.ಕೋಟೆ ರೋಟರಿ ಸಂಸ್ಥೆಯ ಎಲ್ಲ ಪದಾಧಿಕಾರಿಗಳಿಗೆ ಮತ್ತು ಮೈರಾಡ ಪ್ರಾದೇಶಿಕ ಸಂಸ್ಥೆ ಅಭಿನಂದಿಸಿದರು.
ಮೈಸೂರಿನ ಹಾರ್ಟ್ ಸಂಸ್ಥೆ ವತಿಯಿಂದ ಸಂಧಿವಾತ ಮತ್ತು ಕೀಲು ರೋಗ ಸಮಸ್ಯೆಯ ಕುರಿತು ಶಿಬಿರವನ್ನು ಆಯೋಜಿಸಿದ್ದು, ಈ ತೊಂದರೆ ಇರುವರು ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆದುಕೊಳ್ಳಿ ಹಾಗೆಯೇ ಬಿವಿ ಪಂಡಿತ್ ಆಯುರ್ವೇದ ಆಸ್ಪತ್ರೆ ವತಿಯಿಂದ ಶಿಬಿರವು ನಡೆಯುತ್ತಿದ್ದು ಎಲ್ಲರು ಇದರ ಸದುಪಯೋಗ ಪಡೆದುಕೊಂಡು ಆರೋಗ್ಯವನ್ನು ಸುಧಾರಿಸಿಕೊಳ್ಳುವಂತೆ ತಿಳಿಸಿದರು.

ಉಚಿತ ಆರೋಗ್ಯ ತಪಾಸಣ ಶಿಬಿರದಲ್ಲಿ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಗೆ 91 ಜನರನ್ನು ಕರೆದುಕೊಂಡು ಹೋಗಲಾಯಿತು.
ಸಂದಿವಾತ ಮತ್ತು ಕೀಲು ರೋಗ ತಜ್ಞರಾದ ಡಾ. ಮಹಾಬಲೇಶ್ವರ ಎಂ 30 ಜನರಿಗೆ ತಪಾಸಣೆ ಮಾಡಿ ಸಂಧಿವಾತ ಸಮಸ್ಯೆಯ ಬಗ್ಗೆ ಸಲಹೆ ನೀಡಿದರು.

ನಂಜನಗೂಡಿನ ಬಿ.ವಿ.ಪಂಡಿತ್ ಆಯುರ್ವೇದ ಕ್ಯಾಂಪನಲ್ಲೂ ಸಹ 92 ಜನ ಚಿಕಿತ್ಸೆ ಪಡೆದುಕೊಂಡರು. ಮೈಸೂರು ರೋಟರಿ ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ರಿತೇಶ್ ಬಾಳಿಗ, ಸಹಾಯಕ ಗೌರ್ನರ್ ರಾಜೀವ್, ಕೋಟೆ ರೋಟರಿ ಕ್ಲಬ್ ಅಧ್ಯಕ್ಷರಾದ ಎಸ್ ಎನ್. ನಿರಂಜನ್, ಮಾಜಿ ಅಧ್ಯಕ್ಷ ಗಂಗಾಧರ್, ಕಾರ್ಯದರ್ಶಿ ಶಿವಣ್ಣ, ಸದಸ್ಯರಾದ ಸತೀಶ್, ಪಾರ್ಥ ಬ್ರಿಕ್ಸ್ ಮಾಲೀಕರಾದ ದೀಪಕ್, ಹಾರ್ಟ್ ಸಂಸ್ಥೆಯ ಸಂಯೋಜಕ ಶಿವಲಿಂಗ್, ನಂಜನಗೂಡು ಬಿ ವಿ ಪಂಡಿತ್ ಆಯುರ್ವೇದ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ವರ್ಗದವರು, ಮೈರಾಡ ಸಂಸ್ಥೆಯ ಜಯಂತಿ ಮತ್ತು ಸಾರ್ವಜನಿಕರು ಇದ್ದರು.
– ಶಿವಕುಮಾರ