ಎಚ್.ಡಿ.ಕೋಟೆ: ತಾಲೂಕಿನ ಹಂಪಾಪುರ ಗ್ರಾಮದ ಕಾಂಗ್ರೆಸ್ ಹಿರಿಯ ಮುಖಂಡ, ಜಿ.ಎಸ್.ಸತ್ಯನಾರಾಯಣ ಅವರನ್ನು
ಮೈಸೂರು ಜಿಲ್ಲಾ ವೀರ ಮಡಿವಾಳರ ಸಂಘದ ನೂತನ ಜಿಲ್ಲಾ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಮೈಸೂರು ಜಿಲ್ಲೆಯ ಎಲ್ಲಾ ತಾಲೂಕು ಮಡಿವಾಳ ಸಂಘಟನೆಯ ಅಧ್ಯಕ್ಷರುಗಳು ಮತ್ತು ಮುಖಂಡರ ಸುದೀರ್ಘ ಸಭೆಯಲ್ಲಿ ಚರ್ಚೆ ನಡೆದು ಅಂತಿಮವಾಗಿ ಜಿ.ಎಸ್.ಸತ್ಯ ನಾರಾಯಣ ಅವರೇ ಸೂಕ್ತ ಅಭ್ಯರ್ಥಿ ಎಂದು ತೀರ್ಮಾನಿಸಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೇ ಎಂದು ಘೋಷಿಸಲಾಯಿತು.

ಈ ಸಂದರ್ಭದಲ್ಲಿ ನೂತನ ಜಿಲ್ಲಾ ಅಧ್ಯಕ್ಷ ಜಿ.ಎಸ್.ಸತ್ಯನಾರಾಯಣ ಅವರು ಮಾತನಾಡಿ, ಜಿಲ್ಲೆಯಲ್ಲಿ ಮಡಿವಾಳ ಸಮುದಾಯದವರು ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕ ವಾಗಿ ತೀರಾ ಹಿಂದುಳಿದಿದ್ದಾರೆ. ಅವರುಗಳನ್ನು ಸಮಾಜದ ಮುಖ್ಯ ವಾಹಿನಿಗೆ ತರಬೇಕಿದೆ. ಈ ನಿಟ್ಟಿನಲ್ಲಿ ಜಿಲ್ಲಾದ್ಯಂತ ಸಮುದಾಯವನ್ನು ಸಂಘಟಿಸಿ ಸರ್ಕಾರ ಮತ್ತು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಸೆಳೆದು ಸರ್ಕಾರ ದಿಂದ ದೊರೆಯುವ ಎಲ್ಲ ಸೌಲಭ್ಯಗಳನ್ನು ನಮ್ಮವರಿಗೆ ಕೊಡಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ ಹಾಗೂ ಕಾಂತರಾಜು ಆಯೋಗದ ವರದಿಯಲ್ಲಿ ಮಡಿವಾಳರ ಜನ ಸಂಖ್ಯೆಯನ್ನು ಕಡಿಮೆ ತೋರಿಸಲಾಗಿದೆ ಎಂಬ ಕೂಗಿದೆ.

ಜತೆಗೆ ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಸಹ ಸಮುದಾಯದಲ್ಲಿ ಒತ್ತಾಯವಿದೆ ಈ ಎರಡೂ ವಿಚಾರಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ನನಗೆ ಅಧ್ಯಕ್ಷನಾಗಲು ಸಹಕರಿಸಿದ ಎಲ್ಲ ತಾಲೂಕಿನ ಸಮಾಜದ ಮುಖಂಡರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ವೀರ ಮಡಿವಾಳರ ಸಂಘದ ತಾಲ್ಲೂಕು ಅಧ್ಯಕ್ಷರಾದ ಡಾ.ಡಿ.ಚಂದ್ರು ಕೇಶವ, ಶ್ರೀನಿವಾಸ್, ಗಿರೀಶ್, ಶ್ರೀರಾಮ್, ಚಿಕ್ಕಣ್ಣ, ಮಹೇಶ್, ಜಗದೀಶ್, ರಂಗಸ್ವಾಮಿ, ರವಿ, ಮಡು ವಿನಹಳ್ಳಿ ಮಹದೇವು, ಮಂಜುಶೆಟ್ಟಿ, ಸ್ವಾಮಿ, ಜಗದೀಶ್, ಸಂತೋಷ್, ಕೆಂಬಾಲ್ ರಾಮು, ಮಹೇಶ್, ಹಾಗೂ ಜಿಲ್ಲೆಯ ಮುಖಂಡರು ಹಾಗೂ ಕಾರ್ಯದರ್ಶಿಗಳು ಮತ್ತು ಸಮಾಜದ ಮುಖಂಡರು ಇದ್ದರು.
- ಶಿವಕುಮಾರ. ಎಚ್.ಡಿ.ಕೋಟೆ