ಎಚ್.ಡಿ.ಕೋಟೆ-ಸರ್ಕಾರಿ-ಪ್ರಥಮ-ದರ್ಜೆ-ಕಾಲೇಜಿನಲ್ಲಿ-ಪೋಷಣ್- ಮೇಳ

ಎಚ್. ಡಿ. ಕೋಟೆ: ಐಜಿಡಿ ಸ್ಮಾರ್ಟ್ ಇಂಡಿಯಾ, ಐಟಿಸಿ ಕಂಪನಿಯ ಎಚ್.ಡಿ.ಕೋಟೆ ಶಾಖೆ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ ಪೋಷಣ್ ಮೇಳ ಮತ್ತು ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.

ಪಟ್ಟಣದ ಸರ್ಕಾರಿ‌ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಆರೋಗ್ಯಕ್ಕೆ ಸಂಬಂಧಿಸಿದ ಹಲವಾರು ಸ್ಪರ್ಧೆಗಳನ್ನು ಆಡಿಸಿ ಭಾಗವಹಿಸಿದ ಮಕ್ಕಳಿಗೆ ಬಹುಮಾನವಾಗಿ ಹಣ್ಣುಗಳು ಮತ್ತು ಪೌಷ್ಟಿಕಾಹಾರ ಪದಾರ್ಥಗಳನ್ನು ನೀಡಲಾಯಿತು.

ವಿದ್ಯಾರ್ಥಿಗಳ ಕುರಿತು ತಾಲೂಕು ಐಜಿ‌ಡಿ ಸ್ಮಾರ್ಟ್ ಇಂಡಿಯಾ ಸಂಯೋಜಕ ಉಮೇಶ್ ಬಡಗಲಪುರ ಮಾತಾನಾಡಿ, ಇತ್ತೀಚಿನ ದಿನಗಳಲ್ಲಿ ನಾವು ನಮ್ಮ ಸುತ್ತಮುತ್ತಲಿನ ಪೌಷ್ಟಿಕ ಆಹಾರ ಪದಾರ್ಥಗಳನ್ನು ಬಿಟ್ಟು ಜಂಕ್ ಪುಡ್ ನತ್ತಾ ಮನಸ್ಸು ಮಾಡುತ್ತಿದ್ದೆವೆ. ನಾವು ತಿನ್ನುವ ಗೋಬಿ, ಪಾನಿಪುರಿ ಮಸಾಲಪುರಿ, ಪಿಜ್ಜಾ, ಬರ್ಗರ್, ಗಳಂತ ಆಧುನಿಕ ಆಹಾರ ಪದಾರ್ಥಗಳು ನಮ್ಮ ಆರೋಗ್ಯವನ್ನ ಸಂಪೂರ್ಣ ಹಾಳುಮಾಡುತ್ತಿವೆ ಅದ್ದರಿಂದ ನಮ್ಮಲ್ಲೆ ಸ್ಥಳೀಯವಾಗಿ ಸಿಗುವ ಸೊಪ್ಪು, ತರಕಾರಿ, ಹಣ್ಣುಗಳನ್ನು ತಿನ್ನುವ ಮೂಲಕ ನಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು ಎಂದು ಹೇಳಿದರು.

ಕಾಲೇಜು ಪ್ರಾಂಶುಪಾಲ ಎಚ್, ಆರ್, ಅರುಣ್ ಕುಮಾರ್ ಮಾತಾನಾಡಿ, ಇಂದಿನ ಯುವ ಸಮೂಹ ನಮ್ಮ ಪಾಶ್ಚಾತ್ಯರ ಆಹಾರದ ಕಡೆ ವ್ಯಾಮೋಹ ಬೆಳೆಸುತ್ತಿದ್ದು, ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ ಯಾಗಿದೆ. ಅದ್ದರಿಂದ, ನಾವು ನಮ್ಮ ಪೂರ್ವಜರು ಅನುಸರಿಸಿ ಕೊಂಡು ಬಂದಿರುವ ಆಹಾರ ಪದ್ಧತಿಯನ್ನು ಉಳಿಸಿ ಬೆಳೆಸಬೇಕಾಗಿದೆ. ಯಾಕೆಂದರೆ ಇದರಲ್ಲಿ ಸತ್ವಯುತ ಮತ್ತು ಪೌಷ್ಟಿಕಾಂಶಗಳು ಹೇರಳವಾಗಿ ಸಿಗುತ್ತಿದ್ದು ನಮ್ಮ ಆರೋಗ್ಯಕ್ಕೆ ಇದು ಉಪಯುಕ್ತವಾಗಿದೆ ಎಂದರು.

ವಿದ್ಯಾರ್ಥಿಗಳಿಗೆ‌ಆರೋಗ್ಯಕ್ಕೆ ಸಂಬಂಧಿಸಿದ ಆಟಗಳು, ಚಟುವಟಿಕೆಗಳನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ವಿಂದ್ರ ಮಲಾರ, ಕುಮಾರಸ್ವಾಮಿ, ಉಪನ್ಯಾಸಕರಾದ ಕಾತ್ಯಾಯಿನಿ, ಬಾಲಾಜಿ, ಬೋರಮ್ಮ, ದೈಹಿಕ ಶಿಕ್ಷಕ ಪುಟ್ಟರಾಜು ಸರಗೂರು, ಕಾಲೇಜಿನ ಮಕ್ಕಳು, ಉಪನ್ಯಾಸಕರು, ಆಡಳಿತ ವರ್ಗ, ಸಿಬ್ಬಂದಿ, ಸಂಸ್ಥೆಯ ಮುಖಂಡರು ಭಾಗವಹಿಸಿದ್ದರು.

– ಶಿವು ಕೋಟೆ

Leave a Reply

Your email address will not be published. Required fields are marked *

× How can I help you?