ಎಚ್.ಡಿ.ಕೋಟೆ-ಬುದ್ಧನ‌ ಮಾರ್ಗಗಳನ್ನು ಅನುಸರಿಸಿದರೆ ಒಳಿತು ತಹಸೀಲ್ದಾರ್ ಶ್ರೀನಿವಾಸ್ ಅಭಿಮತ

ಎಚ್.ಡಿ.ಕೋಟೆ: ತಾಲೂಕು ಆಡಳಿತದ ವತಿಯಿಂದ ರಾಜ್ಯ ಸರ್ಕಾರದ ಆದೇಶದನ್ವಯ ಮೊದಲ ಬಾರಿಗೆ ಭಗವಾನ್ ಗೌತಮ ಬುದ್ಧ ಜಯಂತಿಯನ್ನು ಆಚರಿಸಲಾಯಿತು.

ಆಡಳಿತ ಸೌಧದ ಆವರಣದಲ್ಲಿರುವ ಬೋಧಿವೃಕ್ಷ ಪಕ್ಕದಲ್ಲಿ ಅಲಂಕರಿಸಿದ ಬುದ್ಧಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿದ ತಹಸಿಲ್ದಾರ್ ಶ್ರೀನಿವಾಸ್ ಮಾತಾನಾಡಿ, ಈ ಜಗತ್ತಿಗೆ ಮಾನವ ಧರ್ಮಕ್ಕೆ ಮುನ್ನುಡಿ ಬರೆದ ಭಗವಾನ್ ಬುದ್ಧ ಸಕಲ ಜೀವರಾಶಿಗಳು ಸಾಮರಸ್ಯೆಗಳಿಂದ ಬದುಕಲು ಪ್ರಮುಖವಾಗಿ ಕರುಣೆ, ಪ್ರೀತಿ, ಅಹಿಂಸೆ ಗಳನ್ನು ಪಾಲಿಸಿದಾಗ ಜೀವನಕ್ಕೆ ಅರ್ಥ ಬರುತ್ತದೆ ಹಾಗೂ ಬುದ್ದನನ್ನ ಮಾರ್ಗವನ್ನು ಅನುಸರಿಸಿದರೆ ಇಡಿ ಜೀವ ಸಂಕುಲಕ್ಕೆ ಒಳಿತಾಗುತ್ತದೆ ಎಂದು ಹೇಳಿದರು.

ಸಾರನಾಥ ಬುದ್ದ ವಿಹಾರದ ದಮ್ಮಚಾರಿ ಮಂಚಯ್ಯ, ಉಪಾಸಕರಾದ ನಾಗರಾಜ್, ಪುಟ್ಟರಾಜು, ಸ್ವಪ್ನಾ ಮಲ್ಲೇಶ್ ರವರು ಬುದ್ದ ವಂದನೆ ಮತ್ತು ತ್ರಿಸರಣ, ಪಂಚಾಶೀಲವನ್ನ ಹೇಳಿಕೊಟ್ಟರು.

ಶಿವರಾಜ್, ಜೀವಿಕ ಬಸವರಾಜ್, ಚೌಡಳ್ಳಿ ಜವರಯ್ಯ, ಮಂಚಯ್ಯ, ಮುಂತಾದವರು ಬುದ್ದನ ಕುರಿತು ಮಾತಾನಾಡಿದರು.

ಆದಿ ಕರ್ನಾಟಕ ಮಹಾ ಸಭಾ ಅಧ್ಯಕ್ಷ ಎಚ್.ಸಿ. ನರಸಿಂಹಮೂರ್ತಿ, ಜೀವಿಕ ರಾಜ್ಯ ಸಂಚಾಲಕ ಉಮೇಶ್. ಬಿ. ನೂರಲಕುಪ್ಪೆ, ಕಾಡುಮನೆ ಪ್ರಸನ್ನ, ಮುದ್ದುಮಲ್ಲಯ್ಯ, ಶಿವಣ್ಣ ಸರಗೂರು, ಶಿವರಾಜ್ ಮಟಕೆರೆ, ಮಹದೇವ, ವಸಂತ, ಮಲ್ಲೇಶ್, ನಾಗರಾಜ್ ಹ್ಯಾಂಡ್ ಪೋಸ್ಟ್, ಪುಟ್ಟರಾಜು ಹೆಗ್ಗನೂರು, ಪುರುಷೋತ್ತಮ್, ಕೃಷ್ಣ, ಒಕ್ಕೂಟದ ಅಧ್ಯಕ್ಷ ಮಂಜು, ಕಾರ್ಯದರ್ಶಿ ಪ್ರಕಾಶ್, ಚಾ. ನಂಜುಂಡ ಮೂರ್ತಿ, ಉನ್ಮೀಲ್, ಸುನೋಜ್, ವಕೀಲ ಸೋಮ್ ಶೇಖರ್, ರಮೇಶ್, ಶಂಕರ್, ಮಂಜು, ಸದಾಶಿವ, ಎಚ್,ಬಿ, ಬಸವರಾಜ್, ಇಒ ಧರಣೇಶ್,ಪ್ರೇಮ್ ಕುಮಾರ್, ಬಿಇಒ ಆನಂತರಾಜ್, ಟಿಎಸ್ ಡ್ಬ್ಯೂ ರಾಮಸ್ವಾಮಿ, ಮತ್ತು ತಾಲೂಕು ಅಧಿಕಾರಿಗಳು ಇದ್ದರು.

  • ಶಿವಕುಮಾರ್‌ ಕೋಟೆ

Leave a Reply

Your email address will not be published. Required fields are marked *