ಎಚ್ ಡಿ ಕೋಟೆ-ಕೆ.ಎಸ್.ಮಾಲೆಗೌಡ-ಕುರುಬ-ಸಮಾಜದ-ನೂತನ- ಅಧ್ಯಕ್ಷರಾಗಿ-ಆಯ್ಕೆ

ಎಚ್ ಡಿ ಕೋಟೆ : ಶ್ರೀ ಕಾಳಿದಾಸ ಕುರುಬ ಜನಾಂಗದ ಕ್ಷೇಮಾಭಿವೃದ್ಧಿ ಸಂಘ ಎಚ್ ಡಿ ಕೋಟೆ ತಾಲೂಕು ಮತ್ತು ಸರಗೂರು ತಾಲೂಕು ಸಂಘದ ಉಪಾಧ್ಯಕ್ಷ ಆರ್, ಎಂ, ವೀರೇಗೌಡ ಅಧ್ಯಕ್ಷತೆಯಲ್ಲಿ ಇಂದು ಪಟ್ಟಣದ ಕನಕ ಭವನದಲ್ಲಿ ಸಂಘದ ವಿಶೇಷ ಸರ್ವ ಸದಸ್ಯರ ಸಭೆ ಕರೆಯಲಾಗಿತ್ತು.

ಈ ವಿಚಾರ ತಿಳಿದು ಹಾಲಿ ಅಧ್ಯಕ್ಷ ಎಂ, ಬಿ, ಆನಂದ್ ಬಣದ ಸದಸ್ಯರು ಹಾಲಿ ಅಧ್ಯಕ್ಷ ಎಂ, ಬಿ, ಆನಂದ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಬೇಕು ಎಂದು ಪಟ್ಟು ಹಿಡಿದರು ನಂತರ ವೀರೇಗೌಡ ಬಣದ ಸದಸ್ಯರು ಕನಕ ಭವನದಲ್ಲಿ ಸಭೆ ನಡೆಸಲು ಮುಂದಾದರು.

ತಕ್ಷಣ ಸ್ಥಳಕ್ಕೆ ಡಿ, ವೈ, ಎಸ್, ಪಿ, ಗೋಪಾಲಕೃಷ್ಣ ಸರ್ಕಲ್ ಇನ್ಸ್ಪೆಕ್ಟರ್ ಸಬ್ಬಿರ್ ಹುಸೇನ್ ಸ್ಥಳಕ್ಕೆ ಆಗಮಿಸಿ ಎರಡು ಬಣದ ಮುಖಂಡರೊಂದಿಗೆ ಮಾತನಾಡಿ ನೀವಿಬ್ಬರೂ ಹೊಂದಾಣಿಕೆಯಿಂದ ಸಭೆ ಮಾಡಿದರೆ ನಿಮಗೆ ಕನಕ ಭವನದಲ್ಲಿ ಸಭೆ ಮಾಡಲು ಅವಕಾಶ ಮಾಡಿಕೊಡುತ್ತೇವೆ ಇಲ್ಲ ಅಂದರೆ ಯಾರಿಗೂ ಸಭೆ ಮಾಡಲು ಅವಕಾಶ ಮಾಡಿಕೊಡುವುದಿಲ್ಲ ನಾವು ಕಾನೂನು ಸುವ್ಯವಸ್ಥೆ ಕಾಪಾಡಬೇಕು ಎಂದರು.

ನಂತರ ಎರಡು ಬಣದವರು ಕನಕ ಭವನದಿಂದ ಹೊರಬಂದರು ವೀರೇಗೌಡ ಬಣದವರು ಪ್ರತ್ಯೇಕ ಸಭೆ ನಡೆಸಿ ಅಜೀವ ಸದಸ್ಯರೊಡನೆ ಮತ್ತೆ ಕನಕ ಭವನದ ಮುಂದೆ ಬಂದು ಡಿ, ವೈ, ಎಸ್, ಪಿ, ಗೋಪಾಲಕೃಷ್ಣ ಅವರನ್ನು ಭೇಟಿಯಾಗಿ ನಮಗೆ ಕನಕ ಭವನದಲ್ಲಿ ಸಭೆ ಮಾಡಲು ಅವಕಾಶ ಮಾಡಿಕೊಡಿ ಎಂದರು.

ಪೊಲೀಸರ ಮಧ್ಯ ಮಾತಿನ ಚಕುಮಕ್ಕಿ ನಡೆಯಿತು ಅವಕಾಶ ನೀಡಲಾಗುವುದಿಲ್ಲ ಎಂದ ತಕ್ಷಣ ಕನಕ ಭವನ ಮುಂಭಾಗದಲ್ಲಿ ಜಮಖಾನ ಆಸಿ ಸಂಘದ ಬ್ಯಾನರ್ ಹಿಡಿದುಕೊಂಡು 500 ಕು ಹೆಚ್ಚು ಜನ ಅಲ್ಲೇ ಕುಳಿತರು ನಂತರ ಸಂಘದ ವಿಶೇಷ ಸಭೆಯನ್ನು ಆರ್, ಎಂ, ವೀರೇಗೌಡ ಅಧ್ಯಕ್ಷತೆಯಲ್ಲಿ ಪ್ರಾರಂಭ ಮಾಡಿ ಕಾರ್ಯಕಾರಿ ಮಂಡಳಿ ಅರ್ಪಣೆ ಮೇರೆಗೆ ಹಾಲಿ ಅಧ್ಯಕ್ಷ ಎಂ,ಬಿ, ಆನಂದ್ ಅವರನ್ನು ಪದಚುತ್ತಿಗೊಳಸಿ ವಿಶೇಷ ಸರ್ವ ಸದಸ್ಯರ ಸಭೆಯಲ್ಲಿ ಕೆ, ಎಸ್, ಮಾಲೆಗೌಡ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು.

ನಂತರ ಉಪಾಧ್ಯಕ್ಷ ಆರ್, ಎಂ, ವೀರೇಗೌಡ ಮಾತನಾಡಿ ಇವರು ಮೂರು ವರ್ಷದಿಂದ ಯಾವುದೇ ಹಣವನ್ನು ಬ್ಯಾಂಕಿಗೆ ಕಟ್ಟಿಲ್ಲ 150 ರಿದ 200 ಮದುವೆ ಆಗಿದೆ ಯಾವುದೇ ಹಣ ಲೆಕ್ಕ ಕೊಟ್ಟಿಲ್ಲ ಮೀಟಿಂಗ್ ಕೂಡ ಕರೆದಿಲ್ಲ ಆದ್ದರಿಂದ ಇವರ ದುರಾಡಳಿತ ನೋಡಿ ಆನಂದ್ ಅವರನ್ನು ಪದಾಚುತ್ತಿಗೊಳಿಸಿ ಮಾಲೆಗೌಡರನ್ನು ಆಯ್ಕೆ ಮಾಡಿದ್ದೇವೆ ಎಂದು ತಿಳಿಸಿದರು.

ನೂತನ ಅಧ್ಯಕ್ಷ ಕೆ, ಎಸ್, ಮಾಲೆಗೌಡ ಮಾತನಾಡಿದರು ಎರಡು ತಾಲೂಕಿನ 18 ಜನ ನಿರ್ದೇಶಕರ ಒಳಗುಡಿ ಅಜೀವ ಸದಸ್ಯರುಗಳು ಅಜಂಡದ ಮುಖಾಂತರವಾಗಿ ವಿಚಾರಣೆ ನೀಡಿ ಸಮಾಜದ ಮುಖಂಡರ ನೇತೃತ್ವದಲ್ಲಿ ಜಿಲ್ಲಾಧ್ಯಕ್ಷ ಶಿವಪ್ಪ ಕೋಟೆ ಅವರ ನೇತೃತ್ವದಲ್ಲಿ ವೀರೇಗೌಡ ಅವರ ಮಾರ್ಗದರ್ಶನದಲ್ಲಿ ಇವತ್ತು ಕುರುಬ ಸಮಾಜದ ಅಧ್ಯಕ್ಷರಾಗಿ ನೇಮಕ ಮಾಡಿದ್ದಾರೆ ನಾನು ಈ ಸಮಾಜದ ಮನೆ ಮಗನಾಗಿ ಸಮಾಜದ ಎಲ್ಲಾ ಸಮಸ್ಯೆಗಳಿಗೂ ಜೊತೆಗೂಡಿ ಪ್ರಾಮಾಣಿಕವಾಗಿ ಸಮಾಜ ಕಟ್ಟಿ ಬೆಳೆಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದು ತಿಳಿದಿದ್ದರು,

ನಂತರ ಹಾಲಿ ಅಧ್ಯಕ್ಷ ಎಂ ಬಿ ಆನಂದ್ ಮಾತನಾಡಿ ನಾನು ಸಿದ್ದರಾಮಯ್ಯ ಸಾಹೇಬರ ಸಮ್ಮುಖದಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಸಮುದಾಯ ಭವನ ಹಾಗೂ ಸಮಾಜದ ಕೆಲಸವನ್ನು ಪ್ರಾಮಾಣಿಕವಾಗಿ ನಡೆಸಿಕೊಂಡು ಬಂದಿದ್ದೇನೆ ನನ್ನ ಸ್ವಂತ ಹಣ 30 ಲಕ್ಷ ಹಾಕಿ ರಿಜಿಲೇಶನ್ ಮಾಡಿ ಸಮುದಾಯ ಭವನದಲ್ಲಿ ಬಂದ ಹಣದಲ್ಲಿ ನನ್ನ ಹಣವನ್ನು ತೆಗೆದುಕೊಂಡು ಉಳಿಕೆ ಹಣ ಇನ್ನು 9 ಲಕ್ಷ ಬ್ಯಾಂಕಲ್ಲಿ ಇದೆ ನನ್ನ ಒಳ್ಳೆ ಕೆಲಸವನ್ನು ಸಹಿಸಲಾರದೆ ಈ ರೀತಿ ಮಾಡುತ್ತಿದ್ದಾರೆ ಮಾಲೆಗೌಡ ಎಂಬುವವರು ನಮ್ಮ ಸಂಘಕ್ಕೆ ಮೆಂಬರ್ ಶಿಪ್ ಕೂಡ ಆಗಿಲ್ಲ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಜಿಲ್ಲಾಧ್ಯಕ್ಷ ಶಿವಪ್ಪ ಕೋಟೆ, ಪ್ರಧಾನ ಕಾರ್ಯದರ್ಶಿ ಶಿರಮಹಳ್ಳಿ ಚಿಕ್ಕಣ್ಣ, ಖಜಾಂಚಿ ಶಿಂಡೇನಹಳ್ಳಿ ಯತೀಶ್ ಕುಮಾರ್, ನಿರ್ದೇಶಕರುಗಳಾದ ಕರಿಯಪ್ಪ ಗೌಡ, ಮಹದೇವು ಕೆ ಸಿ, ಜಗನ್ನಾಥ್ ಆರ್ ಪಿ ,ಗೋವಿಂದರಾಜು, ಆರ್ ಎನ್ ಪಾಪಣ್ಣ, ಮಂಜುನಾಥ್ ಕ್ಯಾತನಹಳ್ಳಿ, ಕೃಷ್ಣೇಗೌಡ, ರಾಜಣ್ಣ, ಎಂ ರವಿ, ಎಚ್ ಎಂ ಕುಮಾರ್, ಶಿವರಾಜು,ಕೆ ಎಂ ಪುಟ್ಟೇಗೌಡ,ಮುದ್ದರಾಮೇಗೌಡ, ಕೊಡಸಿಗೆ ರಾಜೇಗೌಡ, ಕಾರ್ತಿಕ್, ಪೇಯಿಂಟ್ ಕುಮಾರ್, ಕುಮಾರಸ್ವಾಮಿ, ಕೊಮ್ಮರೆ ಗೌಡ, ಬೈಪಾಸ್ ಮಂಜು, ಆಟೋ ರಮೇಶ್, ತಮ್ಮಣ್ಣ,ಮುಖಂಡರುಗಳಾದ ಬೈರೇಗೌಡ, ರಾಜೇಗೌಡ,ಅಡಹಳ್ಳಿ ಮಂಜು, ಗಿರೀಶ್, ಸುಬ್ಬೆಗೌಡ, ವಜ್ರಗೌಡ, ನಾಗೇಗೌಡ, ಬೀರೇಗೌಡ, ನಾಗರಾಜು, ಕರೀಗೌಡ, ಮಹದೇವೇಗೌಡ, ಜಯಣ್ಣ, ರೇವಣ್ಣ, ನಂಜಪ್ಪ, ಚಿನ್ನಸ್ವಾಮಿ, ಕಾಳಸ್ವಾಮಿ, ಮುದ್ದೇಗೌಡ,ಮಹದೇವು ಕುಂದೂರು, ಚಂದ್ರು, ಗಣೇಶ್,ಮುದ್ದಮಹಾದೇವ, ಮಂಜು, ಉಮೇಶ್, ನಿಂಗೇಗೌಡ, ಎರಡು ತಾಲ್ಲೂಕಿನ ಅಜೀವ ಸದಸ್ಯರು ಸಮಾಜದ ಮುಖಂಡರು ಗ್ರಾಮಸ್ಥರು ಇದ್ದರು‌.

Leave a Reply

Your email address will not be published. Required fields are marked *

× How can I help you?