ಎಚ್.ಡಿ.ಕೋಟೆ: ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ಶ್ರೇಣಿ ನಿಗದಿಪಡಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಾಲ್ಲೂಕಿನ ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿಗಳು ನಡೆಸುತ್ತಿರುವ ಅನಿ ರ್ದಿಷ್ಟಾವಧಿ ಧರಣಿ ಎರಡನೇ ದಿನಕ್ಕೆ ಕಾಲಿಟ್ಟಿದೆ.
ಪಟ್ಟಣದ ಆಡಳಿತ ಸೌಧದ ಮುಂಭಾಗದಲ್ಲಿ ಸೇರಿದ ತಾಲ್ಲೂಕಿನ ಗ್ರಾಮ ಆಡಳಿತ ಅಧಿಕಾರಿಗಳು ತಮ್ಮ ಕೆಲಸಕ್ಕೆ ಗೈರಾಗಿ, ಕಪ್ಪುಬಟ್ಟೆ ಧರಿಸಿ ಕೊಂಡು ಧರಣಿ ನಡೆಸುತ್ತಿದ್ದಾರೆ. ಕಳೆದ ಸಾಲಿನಲ್ಲೂ ನಮ್ಮ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದ್ದೆವು. ಸರ್ಕಾರ ಸ್ಪಂದಿಸುವ ಭರವಸೆ ನೀಡಿತ್ತು. ಆದರೆ ಸಮಸ್ಯೆಗಳು ಪರಿಹಾರವಾಗದೇ ಇರುವುದರಿಂದ ಮತ್ತೆ ಅನಿರ್ದಿಷ್ಟ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಗ್ರಾಮ ಆಡಳಿತ ಅಧಿಕಾರಿಗಳ ಸಂಘದವರು ತಿಳಿಸಿದರು.
ತಾಲೂಕು ಗ್ರಾಮಾಡಳಿತ ಅಧಿಕಾರಿಗಳ ಸಂಘದ ಅಧ್ಯಕ್ಷ ಯೋಗೇಶ್, ಉಪಾಧ್ಯಕ್ಷ ಸತೀಶ್, ದಿವ್ಯಾ, ಪ್ರಧಾನ ಕಾರ್ಯದರ್ಶಿ ಅರುಣ್ ನಾಯಕ್, ಖಜಾಂಚಿ ದೀಕ್ಷಾ, ನಿರ್ದೇಶಕ ರಾಜಕುಮಾರ್, ಗಂಗಾಧರ್, ದ್ಯಾವಪ್ಪ, ಪುನೀತ್, ಗೌಸ್ ಮಧು, ರಷ್ನಾ, ಸೂಸನ್, ಪುಷ್ಣಾ, ಸಹಾರೆ ಯೋಗಿತಾ, ದೀಪಕ್, ನಾಗರಾಜ್ ನಾಯಕ್, ಶಂಕರ್, ಚಂದ್ರಶೇಖರ್, ಮಹದೇವಸ್ವಾಮಿ, ರಾಜೇಶ್ ಗೌಡ, ಗಿರೀಶ್ ಮತ್ತಿತರರು ಇದ್ದರು.