ಎಚ್.ಡಿ.ಕೋಟೆ: ಈ ಬಾರಿಯ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ಕಳೆದ ವರ್ಷದಂತೆ ಎಚ್.ಡಿ.ಕೋಟೆ ತಾಲೂಕು ಜಿಲ್ಲೆಗೆ ಕೊನೆಯ ಸ್ಥಾನ ಪಡೆದುಕೊಂಡು ಶಿಕ್ಷಣಾಸಕ್ತರಿಗೆ ನಿರಾಶೆ ಮೂಡಿಸಿದೆ.
ಮಾ.21ರಿಂದ ಏ.4 ರ ವರೆಗೆ ನಡೆದ ವಾರ್ಷಿಕ ಪರೀಕ್ಷೆಯಲ್ಲಿ ತಾಲೂಕಿನಲ್ಲಿ ನಡೆದ 12 ಪರೀಕ್ಷಾ ಕೇಂದ್ರಗಳಲ್ಲಿ 1513 ವಿದ್ಯಾರ್ಥಿಗಳು, 1648 ವಿದ್ಯಾರ್ಥಿಗಳು ಸೇರಿದಂತೆ 3161 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಶೇ.57.48 ಫಲಿತಾಂಶದೊಂದಿಗೆ ತಾಲೂಕಿಗೆ 9ನೇ ಸ್ಥಾನ ಪಡೆದು 1344 ವಿದ್ಯಾರ್ಥಿಗಳು ಅನುತ್ತೀರ್ಣ ರಾಗಿದ್ದಾರೆ. ಸರ್ಕಾರಿ ಆದರ್ಶ ಶಾಲೆ ವಿದ್ಯಾರ್ಥಿಗಳು ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಅನ್ವಯ ಪಬ್ಲಿಕ್ ಶಾಲೆ ಪೂರ್ಣ ಫಲಿತಾಂಶದೊಂದಿಗೆ ತಾಲೂಕಿಗೆ ಕೀರ್ತಿ ತಂದಿದೆ.
ಆದರ್ಶ ಶಾಲೆ ವಿದ್ಯಾರ್ಥಿಗಳೇ ಆದರ್ಶ:-
ತಾಲೂಕಿನ ಆದರ್ಶ ಶಾಲೆಯ ವಿದ್ಯಾರ್ಥಿನಿ ಹೌಸಿಂಗ್ ಬೋರ್ಡ್ ಕಾಲೋನಿಯ ಬಟ್ಟೆ ವ್ಯಾಪಾರಿ ರಾಜಶೇಖರ ಶೆಟ್ಟಿ ಹಾಗೂ ತೇಜಸ್ವಿನಿ ದಂಪತಿಯ ಪುತ್ರಿ ನಮನಾ ಇಂಗ್ಲೀಷ್-123, ಕನ್ನಡ-100, ಹಿಂದಿ- 99, ಗಣಿತ – 99, ವಿಜ್ಞಾನ -100, ಸಮಾಜ ವಿಜ್ಞಾನ – 97 ಅಂಕಗಳೊಂದಿಗೆ ಒಟ್ಟು 618 ಅಂಕಗಳನ್ನು ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.

ಅಭಿಜ್ಞಾ ಬಿ.ವಿ ಇಂಗ್ಲೀಷ್ -122, ಕನ್ನಡ – 98, ಹಿಂದಿ – 100, ಗಣಿತ – 98, ವಿಜ್ಞಾನ – 98, ಸಮಾಜ ವಿಜ್ಞಾನ – 100 ಒಟ್ಟು 616 ಅಂಕಗಳೊಂದಿಗೆ ತಾಲೂಕಿಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಸತ್ತಿಗೆ ಹುಂಡಿ ಗ್ರಾಮದ ಮಂದಾರ ಪ್ರಸಾದ್ ಇಂಗ್ಲೀಷ್ – 124, ಕನ್ನಡ – 97, ನ್ಯಾಷನಲ್ ಸ್ಕಿಲ್ ಕ್ಯಾಲಿಫಿಕೇಶನ್ ಪ್ರೇಂವರ್ಕ್, ಗಣಿತ – 100, ವಿಜ್ಞಾನ – 95, ಸಮಾಜ ವಿಜ್ಞಾನ- 99 ಅಂಕಗಳೊಂದಿಗೆ 615 ಅಂಕಗಳಿಸಿ ತೃತೀಯ ತಾಲೂಕಿಗೆ ತೃತೀಯ ಸ್ಥಾನ ಪಡೆದಿದ್ದಾರೆ.

- ಶಿವಕುಮಾರ, ಕೋಟೆ