ಎಚ್.ಡಿ.ಕೋಟೆ : ಬೆಳಗಾವಿಯಲ್ಲಿ ಕೆ,ಎಸ್,ಆರ್,ಟಿ,ಸಿ, ಬಸ್ ಕಂಡಕ್ಟರ್ ಮೇಲೆ ಎಂ,ಇ,ಎಸ್, ಪುಂಡರು ಹಲ್ಲೆ ಮಾಡಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ವತಿಯಿಂದ ಹೆಚ್ ,ಡಿ, ಕೋಟೆ ಪಟ್ಟಣದ ತಾಲೂಕು ಕಚೇರಿ ಬಳಿ ಪ್ರತಿಭಟಿಸಿ, ತಹಸೀಲ್ದಾರ್ ಶ್ರೀನಿವಾಸ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಕ್ರಾಂತಿ ಕುಮಾರ್ ಮಾತನಾಡಿ, ಕಂಡಕ್ಟರ್ ಮಹದೇವ್ ಎಂಬುವವರು ಕನ್ನಡದಲ್ಲಿ ಮಾತನಾಡಿ ಎಂದು ಹೇಳಿದ್ದಕ್ಕೆ ಮರಾಠಿ ಗೂಂಡಾಗಳು ಹಲ್ಲೆ ಮಾಡಿದ್ದಾರೆ. ಅಲ್ಲದೆ ಅವರ ಮೇಲೆ ಉದ್ದೇಶಪೂರ್ವಕವಾಗಿ ಪೋಕ್ಸೋ ಮೊಕದ್ದಮೆ ಯನ್ನು ಹಾಕಿದ್ದಾರೆ ಬೆಳಗಾವಿಯಲ್ಲಿ ಪದೇ ಪದೇ ಶಾಂತಿ ಮತ್ತು ಸುವ್ಯವಸ್ಥೆಗೆ ಭಂಗವುಂಟು ಮಾಡುತ್ತಿರುವ ಎಂಇಎಸ್ ಸಂಘಟನೆ ನಿಷೇಧಿಸಬೇಕು. ಕಂಡಕ್ಟರ್ ಮೇಲೆ ಹಾಕಿರುವ ಪೋಕ್ಸೋ ಪ್ರಕರಣ ವಾಪಸ್ ಪಡೆಯಬೇಕೆಂದು ಒತ್ತಾಯಿಸಿದರು.
ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಕನ್ನಡ ಪ್ರಮೋದ್ ಮಾತನಾಡಿ, ಬೆಳಗಾವಿ ಜಿಲ್ಲಾಧಿಕಾರಿ ಮಹಮದ್ ರೋಷನ್ ಮರಾಠಿಯಲ್ಲೇ ಪತ್ರ ವ್ಯವಹಾರ ನಡೆಸುವುದಾಗಿ ಎಂಇಎಸ್ ಸಂಘಟನೆಗೆ ಭರವಸೆ ಕೊಟ್ಟಿರುವುದು ಖಂಡನೀಯ ಹಾಗಾದರೆ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಜಿಲ್ಲಾಧಿಕಾರಿ ಸೇರಿಸುತ್ತಾರೆಯೇ? ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಡ್ರಿನ್ ಮಾರ್ಟಿನ್ ಕನ್ನಡ ವಿರೋಧಿತನ ಪ್ರದರ್ಶಿಸುತ್ತಿದ್ದಾರೆ ಈ ಇಬ್ಬರು ಅಧಿಕಾರಿಗಳನ್ನು ರಾಜ್ಯದಿಂದ ಮಹಾರಾಷ್ಟ್ರಕ್ಕೆ ವರ್ಗಾವಣೆ ಮಾಡಿದರೆ, ಬೆಳಗಾವಿಯ ಗಡೀ ಕನ್ನಡಿಗರಿಗೆ ನೆಮ್ಮದಿಯಾಗುತ್ತದೆ ಸಚಿವ ಸಂಪುಟದ ಸಹೋದ್ಯೋಗಿಗಳಾದ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಸತೀಶ್ ಜಾರಕಿಹೊಳಿ ಕೇವಲ ಮರಾಠಿಗರ ಮತಕ್ಕೋಸ್ಕರ ಪದೇ ಪದೇ ಕನ್ನಡಿಗರ ಮೇಲಿನ ದಬ್ಬಾಳಿಕೆ ದೌರ್ಜನ್ಯವನ್ನು ಕಂಡೂ ಕಾಣದಂತೆ ಜಾಣ ಕುರುಡರಾಗಿ ವರ್ತಿಸುತ್ತಿದ್ದಾರೆ. ಇವರ ವಿರುದ್ದವೂ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಈ ವೇಳೆ ರೈತ ಸಂಘದ ತಾಲೂಕು ಅಧ್ಯಕ್ಷರು ಮಹಾದೇವ ನಾಯಕ, ದ,ಸಂ,ಸ, ಜಿಲ್ಲಾ ಸಂ ಸಂಚಾಲಕರು ಆನಗಟ್ಟಿ ದೇವರಾಜು, ದ, ಸಂ, ಸ, ಆಂತರಿಕ ಶಿಸ್ತು ಸಂ ಸಂಚಾಲಕರು ಪುಟ್ಟಮಾದು ಕೋಟೆ, ಚೆನ್ನ ಕೋಟೆ, ಎನ್ ಮಹೇಶ, ಸಿದ್ದಪ್ಪಾಜಿ ರಸ್ತೆ ಮಾಜಿ ಯಜಮಾನರು ಸೋಮಣ್ಣ, ಉದಯಕುಮಾರ್ ಕೋಟೆ,ಹೆರಿಗೆ ಕುಮಾರ, ಪ್ರಜ್ವಲ್, ಕೆ ಎಮ್ ಹಳ್ಳಿ ಮಂಜ, ವೆಂಕಟಸ್ವಾಮಿ, ಸಿದ್ದರಾಜು ,ಚಿಕ್ಕರಾಜು, ಪ್ರವೀಣ್ ಕುಮಾರ್ ,ಸ್ವಾಮಿ ಕುಮಾರ್, ಗೋಪಾಲ ಶೆಟ್ಟಿ, ಉಮೇಶ್ ಕೋಟೆ ,ಮಹಾದೇವ, ನಂದಕುಮಾರ್, ಟೈಲರ್ ನಾಗರಾಜು, ಚೆಲುವರಾಜು, ಶಿವಕುಮಾರ್, ನೂರಕ್ಕೂ ಹೆಚ್ಚು ಕಾರ್ಯಕರ್ತರು ಕನ್ನಡಪರ ಹೋಟಗಾರರು ವಿವಿಧ ಸಂಘ ಸಂಸ್ಥೆಯ ಮುಖಂಡರು ಇದ್ದರು.
-ಶಿವು ಕೋಟೆ