ಎಚ್.ಡಿ.ಕೋಟೆ: ತಾಲೂಕಿನ ಚಕ್ಕೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎನ್.ಸಿ.ಶಿವಶಂಕರ್ (ಶ್ಯಾಮ್), ಉಪಾಧ್ಯಕ್ಷರಾಗಿ ಕಾಳಿಹುಂಡಿ ರತ್ನಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬುಧವಾರ ಸಂಘದ ಕಚೇರಿಯಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನದ ಅಕಾಂಕ್ಷಿಯಾಗಿ ಎನ್.ಸಿ.ಶಿವಶಂಕರ್ (ಶ್ಯಾಮ್), ಉಪಾಧ್ಯಕ್ಷ ಸ್ಥಾನದ ಅಕಾಂಕ್ಷಿಯಾಗಿ ರತ್ನಯ್ಯ ನಾಮಪತ್ರ ಸಲ್ಲಿಸಿದ್ದು, ಉಳಿದವರು ಯಾರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಅಧ್ಯಕ್ಷರಾಗಿ ಎನ್.ಸಿ.ಶಿವ ಶಂಕರ, ಉಪಾಧ್ಯಕ್ಷರಾಗಿ ರತ್ನಯ್ಯ ಅವಿರೋಧವಾಗಿ ಅಯ್ಕೆಯಾದರು ಎಂದು ಚುನಾವಣಾಧಿಕಾರಿ ಸಿ.ಎನ್.ಗಿರೀಶ್ ಘೋಷಿಸಿದರು.

ನಿರ್ದೇಶಕರಾದ ಸಿ.ಎಸ್.ವಿಶ್ವನಾಥ್, ಸಿ.ವಿ.ಅನಂತನಾರಾಯಣ್, ಸಿ.ಎಸ್.ಚಂದ್ರಶೇಖರ ಮೂರ್ತಿ, ಸಿ.ಎಸ್.ಸುಬ್ರಹ್ಮಣ್ಯ, ನಾಗೇಗೌಡ, ಸಿದ್ದಲಿಂಗನಾಯಕ, ಸಿ.ಡಿ.ದೇವೇಂದ್ರ, ಪ್ರಭಾವತಿ, ಯಶೋಧಮ್ಮ, ಮಹದೇವಮ್ಮ, ಎಂಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಡಿ.ಚಂದ್ರು, ಸಂಘದ ಸಿಇಒ ಪರಮೇಶ್, ಚಕ್ಕೂರು, ಕಾಳಿಹುಂಡಿ, ಶಂಕಹಳ್ಳಿ ಗ್ರಾಮಸ್ಥರು ಇದ್ದರು.
-ಶಿವು, ಎಚ್.ಡಿ.ಕೋಟೆ